ಚಿಕ್ಕಬಳ್ಳಾಪುರ : ಇಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆ , ಐತಿಹಾಸಿಕ ಪ್ರಸಿದ್ಧ ಬೋಗನಂದೀಶ್ವರ ದೇವಸ್ಥಾನ ಆವರಣದಲ್ಲಿ ಯೋಗ ಪ್ರದರ್ಶನ ಮಾಡಲಾಯ್ತು.. ಈ ಮೂಲಕ ಯೋಗದದ ಮಹತ್ವ ಸಾರಲಾಯ್ತು..
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದ ಬೋಗನಂದೀಶ್ವರ ದೇವಸ್ಥಾನದ ಆವರಣದಲ್ಲಿ ಯೋಗ ಪ್ರದರ್ಶನ ನಡೆದಿದೆ.. ಯೋಗ ಪ್ರದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ ನಾಗರಾಜ್ ಭಾಗಿಯಾಗಿದ್ದರು..
ಪ್ರಾಯಾಸದಿಂದ ಕಷ್ಟಪಟ್ಟು ಸಚಿವ ಎಂ.ಟಿ.ಬಿ ನಾಗರಾಜ್ ಯೋಗ ಮಾಡಿದ್ದಾರೆ.. ಇನ್ನೂ ಯೋಗ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್ ಲತಾ ಡಿಹೆಚ್ ಓ ಇಂದಿರಾಕಬಾಡೆ ಭಾಗಿಯಾಗಿದ್ದರು.. ಐದುನೂರಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆದಿದೆ..