ಯುವತಿಯ ನಗ್ನ ಫೋಟೊ ವಾಟ್ಸಾಪ್ ಸ್ಟೇಟಸ್ ಗೆ ಹಾಕಿದ್ದ ಪ್ರೇಮಿ

1 min read
Smart phone hand pain

ಯುವತಿಯ ನಗ್ನ ಫೋಟೊ ವಾಟ್ಸಾಪ್ ಸ್ಟೇಟಸ್ ಗೆ ಹಾಕಿದ್ದ ಪ್ರೇಮಿ hubli saaksha tv

ಹುಬ್ಬಳ್ಳಿ : ಪ್ರೇಯಸಿಯ ನಗ್ನ ಫೋಟೊವನ್ನು ಪ್ರೇಮಿಯೊಬ್ಬ ವಾಟ್ಸಾಪ್ ಸ್ಟೇಟಸ್ ಗೆ ಹಾಕಿ ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಈ ಸಂಬಂಧ ಯುವಕನ ವಿರುದ್ಧ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯಲ್ಲಿ ನಸಿರ್ಂಗ್ ಮಾಡುತ್ತಿದ್ದ ಯುವಕ ತನ್ನ ಜ್ಯೂನಿಯರ್ ವಿದ್ಯಾರ್ಥಿನಿಯ ಜೊತೆ ಸ್ನೇಹ ಸಂಪಾದಿಸಿದ್ದು, ಮೊಬೈಲ್ ನಂಬರ್ ಪಡೆದಿದ್ದಾರೆ.

hubli saaksha tv

ಬಳಿಕ ಸಲುಗೆ ಬೆಳೆದು ಸ್ನೇಹ ಪ್ರೀತಿಗೆ ತಿರುಗಿದೆ.

ಇದನ್ನೇ ಬಳಸಿಕೊಂಡು ಯುವಕ ಯುವತಿಯ ನಗ್ನ ವೀಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಬಳಿಕ ನವೆಂಬರ್11 ರಂದು ಆಕೆಯ ನಗ್ನ ಫೋಟೋ ಎಡಿಟ್ ಮಾಡಿ ಸ್ಟೇಟಸ್ ಗೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd