Bangalore | ಯೂತ್ ಫಾರ್ ಸೇವಾ “ ಸೇವಾ ಸಂಭ್ರಮ”
ಬೆಂಗಳೂರು : ಯೂತ್ ಫಾರ್ ಸೇವಾ ಬೆಂಗಳೂರು ವಿಭಾಗವು ಸ್ವಯಂ ಸೇವಕರ ಸೇವಾಭಾವನ್ನು ಗೌರವಿಸಿ ಪ್ರೇರೆಪಿಸಲು ಜುಲೈ 17 ರಂದು ಸೇವಾ ಸಂಭ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸ್ವಯಂ ಸೇವಕರ ಸೇವೆಯನ್ನು ಗುರುತಿಸಿ ವಿವಿಧ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ಇಲಾಖಾ ಅಧಿಕಾರಿಗಳು, ಎನ್ ಜಿಓಗಳು, ಕಾರ್ಪೋರೇಟ್ ಗಳು ಮತ್ತು ಕಾಲೇಜು ಪಾಲುದಾರರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀ. ಪ್ರತಾಪ್ ಲಿಂಗಯ್ಯ, ರಾಜ್ಯ ಎನ್ ಎಸ್ ಎಸ್ ಕಚೇರಿ, ರಾಷ್ಟ್ರೀಯ ಸೇವಾ ಯೋಜನೆ ಕೋಶ ಆಗಮಿಸಿದ್ದರು. ಈ ವೇಳೆ ಯೂತ್ ಫಾರ್ ಸೇವಾ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ 1 ಲಕ್ಷ ಸ್ವಯಂಸೇವಕರ ಬೃಹತ್ ಸೇನೆಯನ್ನು ಜೋಡಿಸಿರುವುದನ್ನು ಶ್ಲಾಘಿಸಿ, ನಂತರ ಸೇವಾವಲಯದಲ್ಲಿ ಸಹಯೋಗದ ಮಹತ್ವವನ್ನು ಒತ್ತಿ ಹೇಳಿದ್ರು.

ಅಂದಹಾಗೆ ಯೂತ್ ಫಾರ್ ಸೇವಾ ಏಪ್ರಿಲ್ 2007ರಲ್ಲಿ ಸ್ಥಾಪನೆಯಾಯ್ತು. ಇದು ರಾಷ್ಟ್ರವ್ಯಾಪ್ತಿ ಸ್ವಯಂಸೇವಕ ಆಂದೋಲನವಾಗಿದ್ದು, ಇದು ಯುವಕರನ್ನು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಪ್ರೇರೆಪಿಸುತ್ತದೆ. ಮತ್ತು ಅವರಿಗೆ ಸಮುದಾಯಕ್ಕೆ ಸೇವೆ ಸಲ್ಲಿಸಲು ಅರ್ಥಪೂರ್ಣ ಅಕವಾಶಗಳನ್ನು ಒದಗಿಸುತ್ತದೆ. ಯೂತ್ ಫಾರ್ ಸೇವಾದ ಗುರಿಯು ಶಾಲೆಗಳು, ನಿರ್ಗತಿಕ ಆಶ್ರಯಗಳು, ಸರ್ಕಾರಿ ಆಸ್ಪತ್ರೆಗಳು ಮತ್ತು ಸಾಮಾಜಿಕ ವಲಯದ ಇತರ ಸಂಸ್ಥೆಗಳಿಗೆ ಸ್ವಯಂಸೇವಕರನ್ನು ಜೋಡಿಸುತ್ತದೆ. ಯೂತ್ ಫಾರ್ ಸೇವಾ ಸ್ವಯಂಸೇವಕ ಸಂಸ್ಕೃತಿಯ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆಯ ರೂವಾರಿಗಳನ್ನು ಸೃಷ್ಠಿಸುವ ಗುರಿಯನ್ನು ಹೊಂದಿದೆ.








