ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಾನೂನು ವಿದ್ಯಾರ್ಥಿಯನ್ನು ಕೊಲೆ ಮಾಡಿರುವ ಘಟನೆ ಆನೇಕಲ್ ನ ವರ್ತೂರು ಸೂಳಿಕುಂಟೆಯಲ್ಲಿ ನಡೆದಿದೆ.
ಸೂಳಿಕುಂಟೆಯ ರೇವಂತ್ ಕೊಲೆಯಾಗಿರುವ ವಿದ್ಯಾರ್ಥಿ. ಈತ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಅದೇ ಗ್ರಾಮದ 27 ವರ್ಷದ ಪುನೀತ್, ಪ್ರವೀಣ್ ಕುಮಾರ್, ನವೀನ್, ಶಿವಕುಮಾರ್ ಎಂಬುವವರನ್ನು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದೆ.
ಸುಮಾರು ನಾಲ್ಕೈದು ವರ್ಷಗಳಿಂದ ರೇವಂತ್ ಮತ್ತು ಪುನೀತ್ ಗ್ಯಾಂಗ್ ಮಧ್ಯೆ ವೈಷಮ್ಯ ಇತ್ತು. ಕಳೆದ ವರ್ಷವೂ ಗಣೇಶ ವಿಸರ್ಜನೆ ವಿಷಯದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಆರೋಪಿಗಳು ಅಪಹರಿಸಿ ತಮಿಳುನಾಡಿನ ಬಾಗಲೂರು ಕೊಲದಾಸನಪುರದಲ್ಲಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ತಮಿಳುನಾಡಿನ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








