YouTube CEO : ಯೂಟ್ಯೂಬ್ ಸಿಇಒ ಆಗಿ ಭಾರತೀಯ ಮೂಲದ ನೀಲ್ ಮೋಹನ್ ಆಯ್ಕೆ…
ಭಾರತೀಯ ಮೂಲದವರು ಪ್ರಪಂಚದಾದ್ಯಂತ ತಿಳಿದಿರು ಅನೇಕ ಕಂಪನಿಗಳಿಗೆ ಮುಖ್ಯಸ್ಥರಾಗುತ್ತಿದ್ದಾರೆ, ಈಗಾಗಲೇ ತಿಳಿದಿರುವಂತೆ ಪ್ರಸಿದ್ಧ ಸರ್ಚ್ ಇಂಜಿನ್ ಗೂಗಲ್‌ನ ಸಿಇಒ ಆಗಿ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ನ ಸಿಇಒ ಆಗಿ ಸತ್ಯ ನಾಡೆಲ್ಲಾ ಮತ್ತು ಅಡೋಬ್‌ನ ಸಿಇಒ ಆಗಿ ಶಾಂತನು ನಾರಾಯಣ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಮತ್ತೊಂದು ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಪ್ರಮುಖ ಸ್ಥಾನ ಸಿಕ್ಕಿದೆ. ನೀಲ್ ಮೋಹನ್ ಎಂಬ ಭಾರತೀಯ ಮೂಲದ ವ್ಯಕ್ತಿಯನ್ನು ಜನಪ್ರಿಯ ಸಾಮಾಜಿಕ ಮಾಧ್ಯಮ ಮತ್ತು ವಿಡಿಯೋ ಸ್ಟ್ರೀಮಿಂಗ್ ಕಂಪನಿ ಯೂಟ್ಯೂಬ್‌ನ ಸಿಇಒ ಆಗಿ ನೇಮಿಸಲಾಗಿದೆ.
ಯೂಟ್ಯೂಬ್ ಗೆ ಅತಿ ಹೆಚ್ಚು ಕಾಲ ಸಿಇಒ ಆಗಿ ಸೇವೆ ಸಲ್ಲಿಸಿದ ಸುಸಾನ್ ವೊಜ್ಸಿಕಿ ಅವರು ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ ನಂತರ ಮೋಹನ್ ಅವರನ್ನು ನೂತನ ಸಿಇಒ ಆಗಿ ನೇಮಿಸಲು ನಿರ್ಧಾರ ಕೈಗೊಳ್ಳಲಾಗಿದೆ. ನೀಲ್ ಮೋಹನ್ ಭಾರತೀಯ-ಅಮೆರಿಕನ್. ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಯೂಟ್ಯೂಬ್‌ನ ಮುಖ್ಯ ಉತ್ಪನ್ನ ಅಧಿಕಾರಿಯಾಗಿ ಕೆಲಸ ಮಾಡಿದರು.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ನೀಲ್ ಮೋಹನ್ 2008 ರಲ್ಲಿ ಗೂಗಲ್ ಸೇರಿದರು. ಯೂಟ್ಯೂಬ್ ನ ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ನೀಲ್ ಮೋಹನ್ ಅವರನ್ನು ಗೂಗಲ್ ಸಿಇಒ ಸುಂದರ್ ಪಿಚೈ ಅಭಿನಂದಿಸಿದ್ದಾರೆ. ಸುಸಾನ್ ವೊಜ್ಸಿಕಿ ಅವರು ಸಂಸ್ಥೆಗೆ ನೀಡಿದ ಸೇವೆಯನ್ನ ಶ್ಲಾಘಿಸಿದರು.
YouTube CEO Susan Wojcicki quits, Neal Mohan takes over








