yuva rajkumar
ವರನಟ ರಾಜ್ ಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್ ಇದೀಗ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ‘ಯುವ ರಣಧೀರ ಕಂಠೀರವ’ ಸಿನಿಮಾ ಮೂಲಕ ಖಡಕ್ ಲುಕ್ ನಲ್ಲಿ ಕ್ಲಾಸ್ ಆಗಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಂದ್ಹಾಗೆ ಯುವ ಅವರ ಚೊಚ್ಚಲ ಸಿನಿಮಾ ‘ ಯುವ ರಣಧೀರ ಕಂಠೀರವದ’ ಫಸ್ಟ್ ಲುಕ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿಬಿಟ್ಟಿದೆ. 5 ನಿಮಿಷಗಳಿರುವ ಯುವ ಫಸ್ಟ್ ಲುಕ್ ವಿಡಿಯೋಗೆ ನೆಟ್ಟಿಗರು ಹಾಗೂ ಅಣ್ಣವ್ರ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವಿಡಿಯೋದಲ್ಲಿ ಭವ್ಯವಾದ ಸೆಟ್ , ಲೊಕೇಶನ್, ಸ್ಕ್ರೀನ್ ಪ್ಲೇ ಇಂದ ಹಿಡಿದು ಸಂಗೀತ, ಯುವ ಮಾಸ್ ಲುಕ್, ಖಡಕ್ ಡೈಲಾಗ್, ಮಸ್ತ್ ಆಕ್ಷನ್ ಸೀನ್ಸ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಸಿನಿಮಾಗಿಂತ ಯುವ ಅವರ ನಟನೆ ಹೇಗಿರಲಿದೆ, ಈ ಚಿತ್ರಕಥೆ ಹೇಗಿರಬಹುದು, ಯಾವಾಗ ರಿಲೀಸ್ ಆಗಲಿದೆ ಎಂಬ ಕ್ಯೂರಿಯಾಸಿಟಿ ಹೆಚ್ಚಾಗಿದೆ.
ಇತ್ತ ಯುವ ಡೈಲಾಗ್ಸ್ ಮೇಲೆ ಡೈಲಾಗ್ಸ್ ಹೊಡಿತಿದ್ರೆ ಥೇಟ್ ವರನಟ ರಾಜ್ ಕುಮಾರ್ ಅವರನ್ನೇ ನೆನಪಿಸುತ್ತೆ. ಈ ವಿಡಿಯೋ ಸಿನಿಮಾದ ಫಸ್ಟ್ ಲುಕ್ ಅನ್ನೋಕಿಂತ , ಯುವ ಅವರ ಇಂಟ್ರಡಕ್ಷನ್ ವಿಡಿಯೋ ಅಂತಾನೇ ಹೇಳಬಹುದು. ವಿಡಿಯೋದಲ್ಲಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಜೊತೆ ವಿಲ್ಲನ್ ಗಳ ಜೊತೆ ಹೀರೋ ಫೈಟ್ ಮೈಝುಂ ಎನ್ನಿಸುತ್ತೆ.
ಅಂದ್ಹಾಗೆ ಈ ವಿಡಿಯೋ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗ್ತಿದ್ದು, ಯುವ ಲುಕ್ ಗೆ ನೆಟ್ಟಿಗರು ಒಳ್ಳೆ ರೆಸ್ಪಾನ್ಸ್ ನೀಡ್ತಿದ್ದಾರೆ. ಯುವ ಟ್ಯಾಲೆಂಟ್ ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾಗೆ ಶುಭಹಾರೈಸುತ್ತಿದ್ದಾರೆ.
ಅಲ್ಲದೇ ಯುವ ಫಸ್ಟ್ ಲುಕ್ ನಲ್ಲಿ ಮೈಥಾಲಾಜಿಕಲ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಡಾ. ರಾಜ್ ಕುಮಾರ್ ಅವರನ್ನೇ ನೆನಪು ಮಾಡುವಂತಿದೆ. ಹೀಗಾಗಿ ನೆಟ್ಟಿಗರು ತರಹೇವಾರಿ ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ. ಅಲ್ಲದೇ ಈ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಯಶಸ್ಸು ಮಾಡಲಿದೆ . ಡಾ ರಾಜ್ ಅವರ ಧ್ವನಿ ಮತ್ತೆ ನೆನಪಾಗಿದೆ ಅಂರತೆಲ್ಲಾ ಕಮೆಂಟ್ ಮೂಲಕ ಸಿನಿಮಾ ಹಾಗೂ ಯುವ ಫಸ್ಟ್ ಲುಕ್ ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಮಗನ ನಟನೆ, ಡೈಲಾಗ್ ಡಿಲವರಿ, ಫೈಟ್ಸ್ ಸೀನ್ಸ್ ಇಂದ ಕೂಡಿರುವ ಯುವ ಫಸ್ಟ್ ಲುಕ್ ವಿಡಿಯೋ ಲಕ್ಷಗಟ್ಟಲೆ ವೀವ್ಸ್ , ಸಾವಿರಾರು ಕಮೆಂಟ್ಸ್ ಹಾಗೂ ಲೈಕ್ಸ್ ಗಿಟ್ಟಿಸಿಕೊಂಡಿದೆ.
ಅಂದ್ಹಾಗೆ ಟಾಲಿವುಡ್ ನ ಮೆಘಾಸ್ಟಾರ್ ಚಿರಂಜೀವಿ ಅವರು ಯುವ ಲುಕ್ ಅನ್ನ ಮೆಚ್ಚಿಕೊಂಡಿದ್ದಾರೆ. ಹೌದು ‘ ಯುವ ರಣಧೀರ ಕಂಠೀರವ ‘ಲಾಂಚ್ ವಿಡಿಯೋ ನೋಡಿ ಯುವ ಅವರ ಸಿದ್ಧತೆ, ಡೆಡಿಕೇಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮೆಘಾಸ್ಟಾರ್. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚಿರಂಜೀವಿ ಅವರು ‘ಯುವ ರಾಜ್ ಕುಮಾರ್ ತಯಾರಿ ನಿಜಕ್ಕೂ ಅದ್ಭುತವೆನಿಸುತ್ತಿದೆ. ರಾಜ್ ಕುಮಾರ್ ಅವರ ಮೊಮ್ಮಗ ಎಂಬ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅವರ ಡೈಲಾಗ್ ಡಿಲವರಿ, ಸಾಹಸ, ಆಕ್ಟಿಂಗ್ ನೋಡಿದ್ರೆ ಇಂಡಸ್ಟ್ರಿಯಲ್ಲಿ ಒಂದು ಮೈಲಿಗಲ್ಲು ಸೃಷ್ಟಿಸುತ್ತಾರೆ ಎಂದೆನಿಸುತ್ತಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
yuva rajkumar
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel