ಯುವರಾಜ ಸಿಂಗ್ ದಂಪತಿಗೆ ಗಂಡು ಮಗು ಜನನ Saaksha Tv
ಯುವರಾಜ ಸಿಂಗ್ Yuvaraj Sing ಭಾರತೀಯ ಕ್ರಿಕೇಟ್ ತಂಡದ ಮಾಜಿ ಆಲ್ ರೌಡ್ ಆಟಗಾರ. ತಮ್ಮ ಅತ್ಯುತ್ತಮ ಬೌಲಿಂಗ್ ,ಫಿಲ್ಡಿಂಗ್ ಮತ್ತು ಬ್ಯಾಂಟಿಗ್ ಮೂಲಕವೇ ಹೆಸರುವಾಸಿಯಾಗಿದ್ದರು.
2011ರ ವಿಶ್ವಕಪ್ World Cup ನಲ್ಲಿ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇವರು ವಿಶ್ವಕಪ್ ನಂತರ ಶ್ವಾಸಕೋಶದ ಕ್ಯಾನಸರ್ ಗೆ ತುತ್ತಾಗಿದ್ದರು. ಇದರಿಂದ ಗುಣಮುಖರಾಗಿ ಮರಳಿ ಭಾರತ ತಂಡದಲ್ಲಿ ಆಡಿ ಮತ್ತೆ ತಮ್ಮ ಅಮೋಘ ಆಟ ಪ್ರದರ್ಶನ ನೀಡಿ ತಮ್ಮ 25 ವರ್ಷದ ಕ್ರಿಕೆಟ್ ಜೀವನಕ್ಕೆ 2019 ರಲ್ಲಿ ರಾಜಿನಾಮೆ ನೀಡಿದರು.
ಈಗ ಯುವರಾಜ ಸಿಂಗ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಇವತ್ತು ಯುವರಾಜ ಸಿಂಗ್ ದಂಪತಿಗೆ ಗಂಡು ಮಗು ಜನಿಸಿದೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ದೇವರ ಆಶಿರ್ವಾದಿಂದ ನಮಗೆ ಗಂಡು ಮಗು ಜನಿಸಿದೆ. ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಎಂದು ಟ್ವೀಟ್ ಮಾಡಿದ್ದಾರೆ