ಐಪಿಎಲ್ ಮುಗಿಯುತ್ತಿದ್ದಂತೆ ಜೂನ್ 6 ರಿಂದ 2024 ರ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಟೂರ್ನಿಯನ್ನು ಅಮೆರಿಕ ಹಾಗೂ ಇಂಡೀಸ್ ಜಂಟಿಯಾಗಿ ಆತಿಥ್ಯ ವಹಿಸಿಕೊಂಡಿವೆ. ಟೂರ್ನಿ ಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಗೆ ಐಸಿಸಿ ಗೌರವ ನೀಡಿದೆ.
ಭಾರತ ತಂಡದ ಮಾಜಿ ಆಟಗಾರ ಹಾಗೂ ಎರಡು ವಿಶ್ವಕಪ್ಗಳ ಹೀರೋ ಯುವರಾಜ್ ಸಿಂಗ್ಈ ವಿಶ್ವಸಮರದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಅಲ್ಲದೇ, ಕ್ರಿಸ್ ಗೇಲ್ ಹಾಗೂ ಉಸೇನ್ ಬೋಲ್ಡ್ ಕೂಡ ಪಂದ್ಯಾವಳಿಯ ಬ್ರಾಂಡ್ ಅಂಬಾಸಿಡರ್ಗಳಾಗಿದ್ದಾರೆ.
2007ರ ಟಿ20 ವಿಶ್ವಕಪ್ನಲ್ಲಿ ಅವರು ಬಾರಿಸಿದ ಆರು ಸಿಕ್ಸರ್ ಗಳು ಇಂದಿಗೂ ಅಭಿಮಾನಿಗಳ ಕಣ್ಣ ಮುಂದೆಯೇ ಇವೆ. ಟಿ20 ವಿಶ್ವಕಪ್ನಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ದಾಖಲೆಯೂ ಯುವರಾಜ್ ಹೆಸರಿನಲ್ಲಿದೆ.
2007ರ ಟಿ20 ವಿಶ್ವಕಪ್ ಅನ್ನು ಟೀಂ ಇಂಡಿಯಾ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪಾತ್ರ ಹೆಚ್ಚಾಗಿತ್ತು. ಭಾರತ 2011ರ ಏಕದಿನ ವಿಶ್ವಕಪ್ ಗೆಲುವಲ್ಲಿಯೂ ಯುವರಾಜ್ ಪ್ರಮುಖ ಪಾತ್ರವಹಿಸಿದ್ದರು.