ZEB-Sound Bomb X1: Zebronics ನಿಂದ 3 ಇನ್ 1( ಇಯರ್ಬಡ್, ಸ್ಪೀಕರ್ ಮತ್ತು ಟಾರ್ಚ್) ಗ್ಯಾಜೆಟ್ ಬಿಡುಗಡೆ..
ಸ್ವದೇಶಿ ಎಲೆಕ್ಟ್ರಾನಿಕ್ ತಯಾರಕ ಕಂಪನಿ ಝೆಬ್ರಾನಿಕ್ಸ್ ಸೋಮವಾರ ನೂತನವಾಗಿ 3-ಇನ್-1 ZEB-Sound Bomb X1 ಅನ್ನ ಬಿಡುಗಡೆ ಮಾಡಿದೆ . ರೂ 3,999 ಬೆಲೆಗೆ ಇಯರ್ಬಡ್ಗಳು, ಸ್ಪೀಕರ್ ಮತ್ತು ಟಾರ್ಚ್ ಸಂಯೋಗದೊಂದಿಗೆ ಈ ಸಾಧನ ಬಿಡುಗಡೆಯಾಗಿದ್ದು, 1,399 ರೂಗಳಿಂದ ಬೆಲೆ ಶುರುವಾಗಲಿದೆ,
ZEB-Sound Bomb X1 ಮಲ್ಟಿ ಫಕ್ಷನಲ್ ಗ್ಯಾಜೆಟ್ ಆಗಿದೆ. ಇದು ಬಿಲ್ಟ್ ಇನ್ ವಯರ ಲೆಸ್ ಇಯರಬಡ್ ಗಳ ಜೊತೆಗೆ 13mm ಆಡಿಯೋ ಡ್ರೈವರ್ ಗಳನ್ನ ಹೊಂದಿದೆ. ಚಾರ್ಜಿಂಗ್ ಕೇಸ್ನೊಂದಿಗೆ 30 ಗಂಟೆಗಳ ಬ್ಯಾಟರಿ ಅವಧಿಗೆ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇಯರ್ಬಡ್ಗಳ ಟಚ್ ಕಂಟ್ರೋಲ್. ಇನ್ ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪ್ಲಾಶ್ ಪ್ರೂಫ್ಗಳನ್ನ ಹೊಂದಿವೆ. ಇಯರ್ಬಡ್ಸ್ ಚಾರ್ಜಿಂಗ್ ಕೇಸ್ ಇನ್ ಬಿಲ್ಟ್ ಬ್ಲೂಟೂತ್ ಸ್ಪೀಕರ್ ಅನ್ನ ಹೊಂದಿದೆ, ಇದು 36 ಎಂಎಂ ಆಡಿಯೊ ಡ್ರೈವರ್ ಹೊಂದಿದೆ. ಕಂಪನಿಯ ಪ್ರಕಾರ, ಇದು 19 ಗಂಟೆಗಳ ಪ್ಲೇ ಟೈಮ್ ಇರಲಿದೆ.
ZEB-ಸೌಂಡ್ ಬಾಂಬ್ X1 ಇನ್ ಬಿಲ್ಟ್ ಎಲ್ಇಡಿ ಟಾರ್ಚ್ ಅನ್ನು ಹೊಂದಿದೆ. ಬಳಕೆದಾರರು ವಾಲ್ಯೂಮ್ ಅನ್ನು ನಿಯಂತ್ರಿಸುವುದರ ಜೊತೆಗೆ ಟಾರ್ಚ್ ಅನ್ನು ಆನ್ / ಆಫ್ ಮಾಡಬಹುದು ಇದು Android ಮತ್ತು iOS ಸಾಧನಗಳೆರಡಕ್ಕೂ ಹೊಂದಿಕೊಳ್ಳುತ್ತದೆ ಜೊತೆಗೆ Google ಅಸಿಸ್ಟೆಂಟ್ ಮತ್ತು Siri ವಾಯ್ಸ್ ಅಸಿಸ್ಟೆಂಟ್ ಬೆಂಬಲಕ್ಕೂ ಹೊಂದಿಕೊಳ್ಳುತ್ತದೆ.
ವೈರ್ಲೆಸ್ ಸಂಪರ್ಕಕ್ಕಾಗಿ ಬ್ಲೂಟೂತ್ 5.0 ಮತ್ತು ಚಾರ್ಜಿಂಗ್ಗಾಗಿ USB-C ಪೋರ್ಟ್ ಅನ್ನು ಒಳಗೊಂಡಿದೆ. ಇದು ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.
ZEB-Sound Bomb X1: 3 in 1 (Earbud, Speaker and Torch) Gadget Launched by Zebronics..