ADVERTISEMENT
Monday, July 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಗೆ ನೆಟ್ಟಿಗರ ಫುಲ್ ಸಪೋರ್ಟ್ : #MEN too ಅಭಿಯಾನ ಶುರು..!

Namratha Rao by Namratha Rao
March 14, 2021
in National, Newsbeat, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಗೆ ನೆಟ್ಟಿಗರ ಫುಲ್ ಸಪೋರ್ಟ್ : #MEN too ಅಭಿಯಾನ ಶುರು..!

ಬೆಂಗಳೂರು : ಮೇಕಪ್  ಆರ್ಟಿಸ್ಟ್ ಮಹಿಳೆಯೊಬ್ಬರ ಮುಖಕ್ಕೆ ಜೋಮ್ಯಾಟೋ ಡಿಲೆವರಿ ಬಾಯ್  ಪಂಚ್ ಮಾಡಿರೋದಾಗಿ, ಇತ್ತೀಚೆಗೆ ಬೆಂಗಳೂರಿನ ಮಹಿಳೆ ವಿಡಿಯೋ ಮಾಡಿ ಆರೋಪಿಸಿ ಕಣ್ಣೀರಿಟ್ಟಿದ್ದರು. ಆದ್ರೆ ಆರೋಪಿ ಎಂದು ಹೇಳಲಾಗಿರುವ ಕಾಮರಾಜ್ ಹೇಳಿಕೆಯಿಂದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯೇ ನಾಟಕವಾಡ್ತಿದ್ದಾಲೆ ಎಂದು ಹೇಳಲಾಗ್ತಿದೆ. ಹೌದು ಮಹಿಳೆ ನನ್ನ ಮೇಲೆ ಹಲ್ಲೆ ನಡೆಸಲು ಶುರು ಮಾಡಿದರು ಆ ವೇಳೆ ನನ್ನ ಅವರೇ ತಮ್ಮ ಕೈನಲ್ಲಿದ್ದ ಉಂಗುರದಿಂದ ಏಟು ಮಾಡಿಕೊಂಡ್ರು ಎಂದಿದ್ದಾರೆ. ಇದರಿಂದಾಗಿ ಇದೀಗ ಮಹಿಳೆಯೇ ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರಾ ಎಂಬ ಅನುಮಾನಗಳು ಮೂಡಿವೆ.

Related posts

King Mohammed VI sent congratulations to Morocco’s national football team

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

July 6, 2026
ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

July 6, 2026

ಯುವತಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸದ್ಯ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಪರ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇವರು ಕಣ್ಣೀರು ಹಾಕಿ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದು, ಬಹುತೇಕ ಎಲ್ಲರೂ ಕೂಡ ಕಾಮರಾಜ್ ಪರ ನಿಂತಿದ್ದಾರೆ. ಮಹಿಳೆಯದ್ದೇ ತಪ್ಪು ಎಂದು ವಾದಿಸೋಕೆ ಶುರು ಮಾಡಿದ್ದಾರೆ.

ಈ ನಡುವೆ ಕಾಮರಾಜ್ ಅವರನ್ನು ಬೆಂಬಲಿಸಿ ಟ್ವಿಟರ್ ನಲ್ಲಿ #MenToo ಅಭಿಯಾನ ಪ್ರಾರಂಭವಾಗಿದೆ. ಸುಳ್ಳು ಆರೋಪಗಳಿಂದ ಸಂಕಷ್ಟಕ್ಕೆ ಸಿಲುಕಿದ ಹಲವಾರು ವ್ಯಕ್ತಿಗಳ ಉದಾಹರಣೆ ನೀಡುವ ಪೋಸ್ಟ್ ಗಳು ಟ್ವಿಟರ್ ನಲ್ಲಿ ಟ್ರೆಂಡಿಂಗ್‍ ನಲ್ಲಿವೆ.

ಬೆಂಗಳೂರಿನ ಟ್ರಾಫಿಕ್ ನಡುವೆಯೂ ಕೇವಲ 15 ನಿಮಿಷ ತಡವಾಗಿ ಆಹಾರ ತಲುಪಿಸಿದ್ದಾನೆ. ಯುವತಿಯೇ ಈತನ ಮೇಲೆ ಹಲ್ಲೆಗೆ ಮುಂದಾಗಿ, ವಿಡಿಯೋದಲ್ಲಿ ಸುಳ್ಳು ಹೇಳಿದ್ದಾಳೆ. ಅಮಾಯಕನ ಮೇಲೆ ಆಕೆಯ ದೌರ್ಜನ್ಯ ಖಂಡನಾರ್ಹ. ಈ ಘಟನೆ ನಂತರ ಆಕೆ ಇನ್‍ಸ್ಟಾಗ್ರಾಂನಲ್ಲಿ 50 ಸಾವಿರ ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದಾಳೆ. ಆದರೆ, ಹೊಟ್ಟೆ ಪಾಡಿಗಾಗಿ ದುಡಿಯುತ್ತಿದ್ದ ಕಾಮರಾಜ್ ಕೆಲಸ ಕಳೆದುಕೊಂಡಿದ್ದಾನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಜಾಮೀನು ಪಡೆದಿರುವ ಕಾಮರಾಜ್, ಮಹಿಳೆಯೇ ತಮ್ಮ ಉಂಗುರದಿಂದ ಮುಖಕ್ಕೆ ಹೊಡೆದು ಕೊಂಡಿದ್ದರು ಎಂದು ಹೇಳಿದ್ದಾರೆ.

ಇದೀಗ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಕೂಡ  ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳಲ್ಲಿ ಸತ್ಯಾಂಶದ ಬಗ್ಗೆ ಗಮನ ಹರಿಸಿ. ಒಂದು ವೇಳೆ ಡೆಲಿವರಿ ಬಾಯ್ ಕಾಮರಾಜ್ ನಿರಪರಾಧಿಯಾಗಿದ್ದರೆ, ಆ ಯುವತಿಗೆ ದಂಡ ಹಾಕಿ ಎಂದು ಜೊಮ್ಯಾಟೊಗೆ ಆಗ್ರಹಿಸಿದ್ದಾರೆ.  ಅಲ್ಲದೇ  ನನಗೆ ಡೆಲಿವರಿ ಬಾಯ್ ಅಮಾಯಕ , ನಿರಪರಾಧಿ ಎನ್ನಿಸುತ್ತೆ. ಅದನ್ನ ನಾನು ನಂಬುತ್ತೇನೆ ಕೂಡ.

ಇದು ಅಮಾನವೀಯ, ನಾಚಿಕೆಗೇಡು ಮತ್ತು ಹೃದಯ ವಿದ್ರಾವಕ ಘಟನೆ,  ನಾನು ಹೇಗೆ ಸಹಾಯ ಮಾಡಬಹುದೆಂದು ದಯವಿಟ್ಟು ನನಗೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಡಿಲೆವರಿ ಬಾಯ್ ಹೇಳಿದ್ದೇನು..?

ಮಹಿಳೆಯ ಮನೆಗೆ ನುಗ್ಗಿ ಆಕೆಯ ಮುಖಕ್ಕೆ ಪಂಚ್ ಮಾಡಿದ್ದು ಎಲ್ಲಾ ಶುದ್ಧ ಸುಳ್ಳು ಎಂದು ಕಾಮರಾಜ್ ಹೇಳಿಕೊಂಡಿದ್ದಾರೆ.  ಹಿತೇಶಾ ನನ್ನ ಮೇಲೆ ಮೊದಲು ಹಲ್ಲೆ ಮಾಡಿದ್ದು, ಹಿಂದಿಯೊಲ್ಲಿ ಕೆಟ್ಟ ಪದಗಳಲ್ಲಿ ನನ್ನನ್ನ ಬೈದದ್ದೂ ಅಲ್ದೇ ಚಪ್ಪಳಿಯಲ್ಲಿ ನನಗೆ ಹೊಡೆದ್ರು. ನಾನು ಮಹಿಳೆ ಮನೆಗೆ ಊಟ ತೆಗೆದುಕೊಂಡು ಹೋಗಿ ಊಟ ಕೊಟ್ಟೆ. ಅವರು ದುಡ್ಡು ಕೊಡುವದಕ್ಕೆ ನಾನು ಕಾಯುತ್ತಿದ್ದೆ.  ಹಾಗೆ ಟ್ರಾಫಿಕ್ ಕಾರಣದಿಂದಾಗಿ ಡಿಲೆವರಿ ತಡವಾಗಿದ್ದಕ್ಕೆ ನಾನು ಮಹಿಳೆಯ ಬಳಿ ಕ್ಷಮೆಯಾಚಿಸಿದೆ. ಆದ್ರೆ ಮಹಿಳೆಯು ನನ್ನ ಬಳಿ ದುರಹಂಕಾರದಿಂದ ರ್ಯಾಶ್ ಆಗಿ ಮಾತನಾಡಿದ್ರು. ಯಾಕೆ ತಡವಾಗಿ ಬಂದಿದ್ಯಾ ಎಂದು ಕೇಳಿದ್ರು. ಅದಕ್ಕೆ ನಾನು ಕಾರಣವನ್ನೂ ತಿಳಿಸಿದೆ.  ಆದ್ರೂ ಮಹಿಳೆ ಕಾಂಪ್ರಮೈಸ್ ಆಗದೇ 45-50 ನಿಮಿಗಳ ಒಳಗೆ ಫುಡ್ ಡಿಲೆವರ್ ಆಗಬೇಕಿತ್ತು ಎಂದು ಸಿಕ್ಕಾಪಟ್ಟೆ ಕೋಪದಿಂದ ಮಾತನಾಡಿದ್ರು. ನಾನು 2 ವರ್ಷಗಳಿಂದ ಈ ಕೆಲಸದಲ್ಲಿದ್ದು, ಈ ರೀತಿಯಾಗಿ ಯಾವತ್ತು ಆಗಿರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ಮಹಿಳೆ ಆಹಾರವನ್ನ   ತೆಗೆದುಕೊಂಡು ದುಡ್ಡು ಕೊಡಲು ನಿರಾಕರಿಸಿದ್ರು.

ಈ ವೇಳೆ ತಡವಾಗಿದ್ದಕ್ಕೆ ಫ್ರೀ ಆಗಿ ಆಹಾರ ನೀಡುವುದಕ್ಕೆ ಆಕೆ #ZOMATO @ZOMATO ಚಾರ್ಟ್ ಸಪೋರ್ಟ್ ಮೂಲಕ ಮಾತುಕತೆ ನಡೆಸುತ್ತಿದ್ದರು. ಇದರಿಂದಾಗಿ ನನ್ನ ಕೆಲ ಹೋಗಬಹುದೆಂಬ ಆತಂಕದಲ್ಲಿ ನಾನು ಆಕೆಯ ಬಳಿ ದುಡ್ಡು ನೀಡುವಂತೆ ಬೇಡಿಕೊಂಡೆ. ಆದ್ರೆ ಆಗ ಆಕೆ ನನ್ನ ಗುಲಾಮ ಎಂದು ಕರೆದರು. ಅಲ್ದೇ ನನ್ನ ಮೇಲೆ ಕಿರುಚಾಡಿದರು. ನಂತರ ಆಕೆಯೇ ಫುಡ್ ಕ್ಯಾನ್ಸಲ್ ಮಾಡಿದ್ದಾಗಿ ಕಂಪನಿ ಕಡೆಯಿಂದ ನನಗೆ ಮೆಸೇಜ್ ಬಂತು. ಹೀಗಾಗಿ ನಾನು ಡಿಲೆವರ್ ಮಾಡಿದ್ದ ಆಹಾರವನ್ನ ವಾಪಸ್ ಮಾಡುವಂತೆ ಹೇಳಿದೆ. ಆದ್ರೆ  ಆಕೆ ವಾಪಸ್ ಕೊಡಲು ನಿರಾಕರಿಸಿದಳು.  ನಂತರ ಮಹಿಳೆಯ ವರ್ತನೆ ನೋಡಿ ದುಡ್ಡು ಬೇಡ ಊಟವೂ ಬೇಡ ಅಂತ ವಾಪಸ್ ಆಗಲು ನಿರ್ಧರಿಸಿ ನಾನು ಹೊರೆಟಿದ್ದೆ. ಆದ್ರೆ ನಾನು ಲಿಫ್ಟ್ ಕಡೆಗೆ ಹೊರಟಾಗ ಮಹಿಳೆಗೆ ನನ್ನಗೆ ತುಂಬಾನೆ ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದರು. ಸಡನ್ ಆಗಿ ನನ್ನ ಮೇಲೆ ಚಪ್ಪಲಿಗಳನ್ನ ಎಸೆದರು.

ನನ್ನ ಮೇಲೆ ಹಲ್ಲೆ ಮಾಡಲು ಶುರುಮಾಡಿದ್ರು. ಈ ವೇಳೆ ನಾನು ನನ್ನ ರಕ್ಷಣೆಗಾಗಿ ನನ್ನ ಕೈಗಳನ್ನ ಅಡ್ಡ ಇಟ್ಟೆ. ಆಗ ಮಹಿಳೆ ನನ್ನನ್ನ ತಳ್ಳಲು ಪ್ರಯತ್ನಿಸಿದಾಗ ಆಕಸ್ಮಿಕವಾಗಿ ಆಕೆಯ ಉಂಗುರ ಆಕೆಯ ಮೂಗಿಗೆ ತಾಕಿತು ಇದರಿಂದಲೇ ಆಕೆಯ ಮೂಗಿನಿಂದ ರಕ್ತ ಬರೋದಕ್ಕೆ ಶುರುವಾಯ್ತು.  ಇನ್ನೂ ಆಕೆಯ ಮೂಗಿನ ಮೇಲೆ ಆಗಿರುವ ಗಾಯ ಪಂಚ್ ಮಾಡಿರೋದರಿಂದ ಆಗಿದ್ದಲ್ಲ ಅನ್ನೋದನ್ನ ಯಾರು ಬೇಕಾದ್ರು ನೋಡಿದ ತಕ್ಷಣವೇ ಹೇಳಬಹುದು. ಅಲ್ಲದೇ ನಾನು ಉಂಗುರವನ್ನ ಧರಿಸುವುದೂ ಇಲ್ಲ ಎಂದಿದ್ದಾರೆ. ಇಷ್ಟಾದ ಮೇಲೆ ಮಹಿಳೆ ನನಗೆ ಲಿಫ್ಟ್ ನಿಂದಲೂ ಹೋಗೋಕೆ ಬಿಟ್ಟಿಲ್ಲ. ನಾನು ನಡೆದುಕೊಂಡೇ ಕೆಳಗೆ ಓಡಿಕೊಂಡು ಹೋದೆ. ಈ ಬಗ್ಗೆ ನಾನು ZOMATO ಮೇಲಾಧಿಕಾರಿಗಳ ಜೊತೆಗೆ ಮಾತನಾಡಿದೆ. ಅವರ ಬಳಿ ನಡೆದಿದ್ದೆಲ್ಲವನ್ನೂ ನಾನು ತಿಳಿಸಿದೆ. ಅವರು ಕೂಡ  ಈ ಬಗ್ಗೆ ಸರಿಯಾಗಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ರು ಎಂದಿದ್ದಾರೆ. ಅಲ್ಲದೇ ಅಲ್ಲಿ ಸಿಸಿ ಕ್ಯಾಮೆರಾಗಳು ಇರಲಿಲ್ಲ. ಇದರಿಂದ ಆಕೆ ಮಾಡಿರುವ ಆರೋಪ ಸುಳ್ಳು ಎಂಬುದನ್ನ ಸಾಬೀತು ಮಾಡಲು ಸ್ವಲ್ಪ ಕಷ್ಟವಾಗ್ತಿದೆ ಎಂದಿದ್ಧಾರೆ.

ಮಹಿಳೆ ಹೇಳಿದ್ದೇನು..?

ಬೆಂಗಳೂರಿನ ಹಿತೇಶಾ ತನ್ನ ಇನ್ಸ್ಟಾಗ್ರಾಂನ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ, ಹಲ್ಲೆ ನಡೆದ ನಂತರ ರಸ್ತ ಸ್ರಾವವಾಗುತ್ತಿರುವುದನ್ನ ಮೊದಲಿಗೆ ವಿಡಿಯೋದಲ್ಲಿ ತೋರಿಸಿದ್ದಾರೆ. ಇದರ ಬಗ್ಗೆ ಹಿತೇಶಾ ವಿವರಣೆ ನೀಡುತ್ತಾ ಹೇಗೆ ನನ್ನ ಮೇಲೆ ಹಲ್ಲೆ ನಡೆದಿದೆ ನೋಡಿ ಎಂದು ಕಣ್ಣೀರಿಟ್ಟಿದ್ದಾರೆ. ನಂತರ ಫಸ್ಟ್ ಎಡ್ ಮಾಡಿಕೊಂಡು ವಿಡಿಯೋದಲ್ಲಿ ಘಟನೆ ಬಗ್ಗೆ ವಿವರಣೆ ನೀಡಿರುವ ಮಹಿಳೆ ಫುಡ್ ಆರ್ಡರ್ ಮಾಡಿದ ನಂತರ ಅದನ್ನ ಡಿಲೆವರಿ ಮಾಡಲು ತಡವಾಗಿದೆ.  ಹೀಗಾಗಿ ಈ ಬಗ್ಗೆ ಕಂಪನಿಯ ಕಸ್ಟಮರ್ ಕೇರ್ ಜೊತೆಗೆ ನಾನು ಮಾತನಾಡಿದೆ.  ತಡವಾಗಿ ಆರ್ಡರ್ ತಲುಪಿಸುತ್ತಿದ್ದೀರಾ ಹಾಗಾದ್ರೆ ಕಂಪನಿಯೇ ಹೇಳಿರೋ ಹಾಗೆ ಫುಡ್ ಅನ್ನ ಫ್ರೀ ಆಗಿ ಡಿಲೆವರ್ ಮಾಡಿ ಎಂದು ಕೇಳಿಕೊಂಡೆ. ಆದ್ರೆ ಅಷ್ಟರಲ್ಲೇ ಮನೆ ಬಾಗಲಿಗೆ ಬಂದ ಡಿಲೆವರ್ ಬಾಯ್  ಸಿಟ್ಟಿನಿಂದ ಮಾತನಾಡಲು ಆರಂಭಿಸಿದ. ಆದ್ರೆ  ನನಗೆ ಆರ್ಡರ್ ಬೇಡ. ತಡವಾಗಿದೆ ಎಂದು ವಾದಿಸಿದೆ. ನನಗೆ ಆರ್ಡರ್ ಬೇಡ ಕ್ಯಾನ್ಸಲ್ ಮಾಡುವುದಾಗಿ ಹೇಳಿದೆ. ಅಷ್ಟಕ್ಕೇ ಸಿಟ್ಟಿಗೆದ್ದ ಆತ ಏಕಾಏಕಿ ನನ್ನ ಮುಖದ ಮೇಲೆ ಗುದ್ದಿ ದಾಳಿ ನಡೆಸಿದ ಎಂದು ಹೇಳುತ್ತಾ ಕಣ್ಣಿರಿಟ್ಟಿದ್ದಾರೆ.

ಆದ್ರೆ ಯಾರು ಸುಳ್ಳು ಹೇಳ್ತಿದ್ದಾರೆ. ಯಾರು ನಿಜ ಹೇಳ್ತಿದ್ದಾರೆ ಎಂಬ ಅನುಮಾನಗಳು ಮೂಡಿವೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಕಾಮರಾಜ್ ನನ್ನ ತಾತ್ಮಾಲಿಕವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ.

ಎಂಥ ಜನ ಇವರು… ನಿದ್ದೆಯಲ್ಲಿದ್ದ ಸಿಂಹದ ಜೊತೆ ಪಾಕಿಸ್ತಾನದ ನವದಂಪತಿ ಫೋಟೋಶೂಟ್ : ನೆಟ್ಟಿಗರಿಂದ ಛೀಮಾರಿ..!

ಆರ್ಡರ್ ಮಾಡಿದ್ದು ವೆಜ್ ಬಂದಿದ್ದು ನಾನ್ ವೆಜ್… ಪಿಜ್ಜಾ ತಿಂದು 1 ಕೋಟಿ ರೂ. ಪರಿಹಾರಕ್ಕೆ ಬೇಡಿಕೆಯಿಟ್ಟ ಮಹಿಳೆ..!

Tags: kamarajmentooZomato
ShareTweetSendShare
Join us on:

Related Posts

King Mohammed VI sent congratulations to Morocco’s national football team

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

by admin
July 6, 2026
0

ಹಾಗಂತ... ಇದು ಖಂಡಿತವಾಗಿಯೂ ಫುಟ್‍ಬಾಲ್ ಜಗತ್ತಿನ ಕಾಲ್ಪನಿಕ ಕಥೆಯಂತೂ ಅಲ್ಲವೇ ಅಲ್ಲ. ಬದಲಾಗಿ ಮತ್ತೊಂದು ಸಣ್ಣ ದೇಶದ ಫುಟ್‍ಬಾಲ್ ಆಟದ ಮಹೋನ್ನತ ಪರ್ವದ ನೈಜ ಚಿತ್ರಣ. ಒಬ್ಬ...

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

by Shwetha
July 6, 2026
0

ಮನೆಯಲ್ಲಿರುವ ಹಳೆಯ ಚಿನ್ನವನ್ನು ಲಾಕರ್ ನಲ್ಲಿಟ್ಟು ಸುಮ್ಮನೆ ಕೂರುವ ಬದಲು ಅದರಿಂದಲೇ ಲಾಭ ಗಳಿಸುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ದೇಶದ ಚಿನ್ನದ ಆಮದು ಪ್ರಮಾಣವನ್ನು ತಗ್ಗಿಸುವ...

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

by Shwetha
July 6, 2026
0

ಗರ್ಭಿಣಿಯಾಗಿದ್ದಾಗ ಪತಿ ತನಗೆ ಫಿಂಗರ್ ಚಿಪ್ಸ್ ಮತ್ತು ಮಾಂಸದೂಟ ತಿನ್ನಲು ಬಿಡಲಿಲ್ಲ ಎಂಬ ವಿಚಿತ್ರ ಕಾರಣ ನೀಡಿ ಪತ್ನಿಯೊಬ್ಬಳು ತನ್ನ ಎನ್ಆರ್ಐ ಪತಿಯ ಮೇಲೆ ದಾಖಲಿಸಿದ್ದ ಕ್ರಿಮಿನಲ್...

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

by Shwetha
July 6, 2026
0

ವಾಷಿಂಗ್ಟನ್: ಇರಾನ್ ದೇಶದ ಉನ್ನತ ನಾಯಕತ್ವವನ್ನು ಕೇವಲ ಒಂದೇ ಒಂದು ದಾಳಿಯ ಮೂಲಕ ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತಕಾರಿ...

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

by Shwetha
July 6, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಅಧಿಕೃತವಾಗಿ ನೋಂದಣಿಯಾದರೆ ಮಾತ್ರ ಇಂತಹ ಅಕ್ರಮಗಳಿಗೆ ಮುಕ್ತಿ ಸಿಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ. ಅಯೋಧ್ಯಾ ರಾಮಮಂದಿರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram