ಲಂಚ.. ಲಂಚ.. ಲಂಚ.. ಏಷ್ಯಾದಲ್ಲೇ ಭಾರತದಲ್ಲಿ ಲಂಚದ ಪ್ರಮಾಣ ಹೆಚ್ಚು
ನವದೆಹಲಿ : ಏಷ್ಯಾದ ರಾಷ್ಟ್ರಗಳಲ್ಲೇ ಭಾರತದಲ್ಲಿ ಲಂಚದ ಪ್ರಮಾಣ ಹೆಚ್ಚಿದ್ದು, ಮೊದಲ ಸ್ಥಾನದಲ್ಲಿದೆ ಎಂದು ಸರ್ಕಾರೇತರ ಸಂಸ್ಥೆ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ತನ್ನ ವರದಿಯಲ್ಲಿ ಹೇಳಿದೆ.
ಜಾಗತಿಕ ಭ್ರಷ್ಟಾಚಾರ ಮಾಪಕ (ಜಿಸಿಬಿ) ಪ್ರಕಾರ ಏಷ್ಯಾದಲ್ಲಿ ಸರ್ಕಾರ ಸೇವೆ ಪಡೆಯಲು ಶೇಕಡಾ 50ರಷ್ಟು ಮಂದಿ ಲಂಚ ನೀಡಿದ್ರೆ, ಶೇಕಡಾ 32 ರಷ್ಟು ಮಂದಿ ಸೇವೆಯನ್ನು ಪಡೆಯಲು ಮೊಬೈಲ್ ಅಥವಾ ಇತರ ವೈಯಕ್ತಿಕ ಸಂಪರ್ಕಗಳನ್ನು ಹೊಂದಿದ್ದಾರೆ.
ಭಾರತದಲ್ಲಿ ಲಂಚದ ರೂಪದ ಭ್ರಷ್ಟಾಚಾರದ ಪ್ರಮಾಣ ಶೇಕಡಾ 39 ರಷ್ಟಿದ್ದರೇ, ವೈಯುಕ್ತಿಕ ಸಂಪರ್ಕದ ಪ್ರಭಾವ ಬಳಸಿ ಸೇವೆ ಪಡೆಯುವವರ ಪ್ರಮಾಣ ಶೇಕಡಾ 46 ರಷ್ಟಿದೆ.
ಆ ಮೂಲಕ ಏಷ್ಯಾ ಖಂಡದಲ್ಲಿಯೇ ಭಾರತದಲ್ಲಿ ಲಂಚ ಪಡೆಯುವ ಪ್ರಮಾಣ ಹೆಚ್ಚಿದ್ದು, ಮೊದಲ ಸ್ಥಾನದಲ್ಲಿದೆ. ಮಕ್ಕಳಿಗಾಗಿ ಲಿಲ್ ಒನ್ ಎಂಬ ವಿಶೇಷ ಕಲಿಕೆಯ ಆಪ್
ಇನ್ನು ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ಶೇಕಡಾ 63ರಷ್ಟು ಮಂದಿ ಮತ್ತೆ ದುಷ್ಪರಿಣಾಮಗಳಿಗೆ ಅಥವಾ ಪ್ರತೀಕಾರಕ್ಕೆ ಒಳಗಾಗುತ್ತಾರೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಇದಲ್ಲದೆ ಲಂಚಕ್ಕೆ ಬದಲಾಗಿ ದೈಹಿಕವಾಗಿ ಬಳಸಿಕೊಳ್ಳುವುದು ಕೂಡಾ ಭಾರತ, ಮಲೇಷ್ಯಾ, ಥೈಲ್ಯಾಂಡ್, ಶ್ರೀಲಂಕಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳಲ್ಲಿ ನಡೆಯುತ್ತಿದೆ.
ಇದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಹೇಳಿದೆ. ಬಾಲಕಿ ಮೃತದೇಹ ತಿಂದ ಶ್ವಾನ: ಯೋಗಿ ನಾಡಿನ ಸರ್ಕಾರಿ ಆಸ್ಪತ್ರೆಯೊಂದರ ದುರಾವಸ್ಥೆ ವಿಡಿಯೋ ವೈರಲ್..!
ಇನ್ನು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಶೇಕಡಾ 63ರಷ್ಟು ಮಂದಿ ಹೇಳಿದ್ರೆ, ಶೇ 73 ರಷ್ಟು ಮಂದಿ ಭ್ರಷ್ಟಾಚಾರ ತಡೆಗೆ ಭ್ರಷ್ಟಾಚಾರ ವಿರೋಧಿ ದಳದ ಪಾತ್ರ ಪರಿಣಾಮಕಾರಿ ಎಂದಿದ್ದಾರೆ.
17 ದೇಶಗಳಲ್ಲಿ 20 ಸಾವಿರ ಮಂದಿಯನ್ನು ಜಿಸಿಬಿ ಸಮೀಕ್ಷೆ ಮಾಡಿದ್ದು, ನಾಲ್ಕು ಜನರಲ್ಲಿ ಸುಮಾರು ಮೂವರು ತಮ್ಮ ದೇಶದಲ್ಲಿ ಭ್ರಷ್ಟಾಚಾರವು ಒಂದು ದೊಡ್ಡ ಸಮಸ್ಯೆ ಎಂದಿದ್ದಾರೆ.
ಭ್ರಷ್ಟಾಚಾರದ ಪ್ರಕರಣದಲ್ಲಿ ಭಾರತದ ನಂತರ, ಕಾಂಬೋಡಿಯಾ (ಶೇಕಡಾ 37), ಇಂಡೋನೇಷ್ಯಾ (ಶೇಕಡಾ 30), ದಕ್ಷಿಣ ಕೊರಿಯಾ (ಶೇಕಡಾ 10) ಮತ್ತು ನೇಪಾಳ (ಶೇಕಡಾ 12) ಲಂಚದ ಪ್ರಮಾಣವಿದ್ದು, ಜಪಾನ್ ಹಾಗೂ ಮಾಲ್ಡೀವ್ಸ್ ನಲ್ಲಿ ಅತಿ ಕಡಿಮೆ ಲಂಚದ ಪ್ರಮಾಣವಿದೆ ಎಂದು ವರದಿ ಹೇಳಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










