‘ಪಾರ್ಟಿ ಫ್ರೀಕ್’ ತುಂಬಾ `ವೀಕ್’ : ಚಂದನ್ ಶೆಟ್ಟಿ ತಲೆ ಖಾಲಿನಾ..?
ಚಂದನ್ ಶೆಟ್ಟಿ…! ಕನ್ನಡ ರ‍್ಯಾಪ್ ದುನಿಯಾ ಹೊಸ ಟಚ್ ಕೊಟ್ಟವರು. ತ್ರಿ ಪೆಗ್ ಸಾಂಗ್ ಮೂಲಕ ದೇಶ ವಿದೇಶದಲ್ಲಿ ಸದ್ದು ಮಾಡಿದವರು. ಒಂದು ಹಂತದಲ್ಲಿ ಚಂದನ್ ಶೆಟ್ಟಿ ಇಂಟರ್ ನ್ಯಾಷನಲ್ ಲೆವೆನ್ ನಲ್ಲಿ ಸದ್ದು ಮಾಡ್ತಾರೆ..
ವಿಶ್ವ ರ‍್ಯಾಪ್ ದುನಿಯಾದಲ್ಲಿ ಕನ್ನಡದ ಬಾವುಟವನ್ನ ಹಾರಿಸ್ತಾರೆ ಅಂತ ಎಷ್ಟೋ ಮಂದಿ ಅಂದುಕೊಂಡಿದ್ದರು. ಆರಂಭದಲ್ಲಿ ಅವರ ಹಾಡುಗಳು ಆಗಿದ್ದವೂ ಕೂಡ.
ಆದ್ರೆ ಆಫ್ಟರ್ ತ್ರೀ ಪೆಗ್ ಸಾಂಗ್… ಚಂದನ್ ಶೆಟ್ಟಿ ಹಾಡುಗಳಲ್ಲಿ ಯಾಕೋ ಮೊದಲಿನ ಮಜಾ ಕಾಣ್ತಾನೇ ಇಲ್ಲ. ವಿಡಿಯೋ ಮೇಕೆಂಗ್ ಮೊದಲಿಗಿಂತಲೂ ಚೆನ್ನಾಗಿದ್ರೂ ಸಾಂಗ್ ನಲ್ಲಿ ಮಾತ್ರ ಧಮ್ ಇಲ್ಲ.
ಉಪ್ಪು ನೀರು ಸಾರಲ್ಲಿ ಉಪ್ಪಿಲ್ಲದಹಾಗೆ, ಚಿಕನ್ ಮಸಾಲೆಯಲ್ಲಿ ಮಸಾಲೆ ಇಲ್ಲದಹಾಗೆ, ಮಾಸ್ ಮಸಾಲಾ ಸಿನಿಮಾದಲ್ಲಿ ಆಕ್ಷನ್ ಇಲ್ಲದ ರೀತಿ ಸದ್ಯ ಚಂದನ್ ಶೆಟ್ಟಿಯ ಸಾಂಗ್ ಗಳಿವೆ.
ಸದ್ಯ ಚಂದನ್ ಶೆಟ್ಟಿ ಸಾಂಗ್ ಗಳನ್ನ ಗಮಸಿದ್ರೆ, ಅವರಿನ್ನೂ ತ್ರಿ ಪೆಗ್ ನ ನಶೆಯಲ್ಲೇ ತೇಲಾಡ್ತಿದ್ದಾರೆ ಅನಿಸುತ್ತಿದೆ. ಯಾಕೆಂದ್ರೆ ಅವರ ಸದ್ಯ ಬಿಡುಗಡೆ ಆಗಿರುವ ‘ಪಾರ್ಟಿ ಫ್ರೀಕ್’ ಚಿತ್ರನ್ನದ ರೀತಿ ಇದೆ.
ಅದೇ ಡಿಜೆ ಲೈಟ್ಸು.. ಚಿತ್ರವಿಚಿತ್ರ ಡ್ರೆಸ್ಸಸ್ಸು.. ಒಂದೇ ಸ್ಟೆಪ್ ಹಾಕೋ ಡ್ಯಾನ್ಸರ್ಸು.. ಎಲ್ಲವನ್ನು ಮಿಕ್ಸಿಗಾಕಿ ರುಬ್ಬಿರುವಂತಿದೆ. ಇದೆಲ್ಲಾ ಹೋಗ್ಲಿ ಸಾಂಗ್ ನಲ್ಲಾದ್ರೂ ಏನಾದ್ರೂ ಚೇಂಜ್ ಇದ್ಯಾ ಅಂತ ನೋಡಿದ್ರೆ ಅಲ್ಲೂ ಹೊಸದಾಗಿ ಏನೂ ಕಾಣ್ತಿಲ್ಲ.
ಈ ಹಿಂದಿನ ಎಲ್ಲ ಸಾಂಗ್ ಗಳನ್ನ ಗ್ರೈಂಡರ್ ಗೆ ಹಾಕಿರೋತರ ಇದೆ.
ಒಟ್ಟಾರೆ ಈ ಮೊದಲು ಚಂದನ್ ಶೆಟ್ಟಿ ಸಾಂಗ್ ನಲ್ಲಿದ್ದ ಮಜಾ ಇತ್ತೀಚಿನ ಸಾಂಗ್ ಗಳಲ್ಲಿ ಕಾಣ್ತಾ ಇಲ್ಲ. ತ್ರಿ ಪೆಗ್ ಸಾಂಗ್ ನಶೆಯಲ್ಲೇ ಚಂದನ್ ಇರೋ ತರ ಅನಿಸ್ತಿದೆ. ಆದಷ್ಟು ಬೇಗ ಆ ಗುಂಗಿಂದ ನಮ್ಮ ಕನ್ನಡ ರ‍್ಯಾಪರ್ ಆಚೆ ಬರಲಿ.. ಅನ್ನೋದಷ್ಟೆ ನಮ್ಮ ಆಶಯ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel











