ರೈತರ ಪ್ರತಿಭಟನೆ : ಪಾಪ್ ಸಿಂಗರ್ ರಿಹನ್ನಾ ವಿರುದ್ಧ ತಿರುಗಿಬಿದ್ದ ಬಾಲಿವುಡ್ ಸ್ಟಾರ್ಸ್, ಕ್ರಿಕೆಟರ್ಸ್..!
ಮುಂಬೈ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಎಂದು ಖ್ಯಾತ ಅಂತರಾಷ್ಟ್ರೀಯ ಪಾಪ್ ಸಿಂಗರ್ ಸ್ಟಾರ್ ಸಿಂಗರ್ ರಿಹನ್ನಾ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ರು. ಆದ್ರೆ ರಿಹಾನಾ ವಿರುದ್ಧ ಭಾರತೀಯ ಕ್ರಿಕೆಟಿಗರು, ಬಾಲಿವುಡ್ ತಾರೆಯರು ತಿರುಗಿಬಿದ್ದಿದ್ದಾರೆ. ಆಕೆ ಟ್ವೀಟ್ ಮಾಡುತ್ತಿದ್ದಂತೆ ಬಾಲಿವುಡ್ ನ ಖ್ಯಾತ ನಟರಾದ ಅಕ್ಷಯಕುಮಾರ್, ನಟಿ ಕಂಗನಾ ರಣೌತ್, ಕರಣ್ ಜೋಹರ್, ಏಕ್ತಾ ಕಪೂರ್, ಕೈಲಾಶ ಖೇರ್, ಸುನೀಲ್ ಶೆಟ್ಟಿ, ಅಜಯ ದೇವಗನ್ ಸೇರಿ ಹಲವರು ಟ್ವೀಟ್ ಮಾಡಿ ಸರ್ಕಾರದ ಪರ ನಿಂತಿದ್ದಾರೆ. ‘ಇಂಡಿಯಾ ಟುಗೆದರ್ # ಇಂಡಿಯಾ ಅಗೇನಸ್ಟ್ ಪ್ರೊಪಗಂಡಾ’ ಎಂದು ಟ್ವೀಟ್ ಮಾಡಿದ್ದು, ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫೇರ್ಸ್ ನೀಡಿದ ಹೇಳಿಕೆಯನ್ನು ಎಲ್ಲರೂ ಟ್ಯಾಗ್ ಮಾಡಿದ್ದಾರೆ. ಇತ್ತ ಬಾಲಿವುಡ್ ನಟರಷ್ಟೇ ಅಲ್ದೇ ಟೀಂ ಇಂಡಿಯಾ ಆಟಗಾರರು ಸಹ ರಿಹಾನಾ ವಿರುದ್ಧವಾದ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ, ರೋಹಿತ್ ಶರ್ಮಾ, ಸಚಿನ್ ಟೆಂಡುಲ್ಕರ್ ಸೇರಿ ಅನೇಕರು ಟ್ವೀಟ್ ಮಾಡಿ ಭಾರತದ ನಿರ್ಧಾರಗಳನ್ನ ಭಾರತವೇ ತೆಗೆದುಕೊಳ್ಳುತ್ತೆ. ಹೊರಗಿನವರು ಪ್ರೇಕ್ಷಕರಾಗಬೇಕೆ ಹೊರತು ಭಾಗಿದಾರರಲ್ಲಾ ಎಂದು ಕಿಡಿಕಾರಿದ್ದಾರೆ.


VIDEO : ಮುದ್ದು ಮಕ್ಕಳ ಸ್ನೇಹಕ್ಕೆ ನೆಟ್ಟಿಗರು ಫಿದಾ..!
ಪ್ರೀತಿ ನಿರಾಕರಿಸಿದಕ್ಕೆ ಆಕೆಯ ಸ್ಕೂಟಿ ಸುಟ್ಟುಹಾಕಿದ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








