ADVERTISEMENT
Tuesday, May 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಎಂಥಾ ಸಾವ್ ಮಾರಾಯ…! ಏನ್ ಗುರು.. ಹಿಂಗಾಡ್ತಾರೋ..! ಬಿಡೋ.. ಈ ಬಾರಿಯೂ ಕಪ್ ನಮ್ದಲ್ಲ…!

admin by admin
November 7, 2020
in IPL 2020, Newsbeat, ಕ್ರೀಡೆ
virat kohli rcb ipl 2020 saakshatv
Share on FacebookShare on TwitterShare on WhatsappShare on Telegram

ಎಂಥಾ ಸಾವ್ ಮಾರಾಯ…! ಏನ್ ಗುರು.. ಹಿಂಗಾಡ್ತಾರೋ..! ಬಿಡೋ.. ಈ ಬಾರಿಯೂ ಕಪ್ ನಮ್ದಲ್ಲ…!

rcb team ipl 2020 saakshatvಈ ಬಾರಿಯೂ ಕಪ್ ನಮ್ದಲ್ಲ..! 2020ಯಲ್ಲೂ ಆರ್ ಸಿಬಿಯ ಹಣೆ ಬರೆಹ ಬದಲಾಗಿಲ್ಲ. ಪ್ಲೇ ಆಫ್ ನಲ್ಲಿ ಡೇವಿಡ್ ವಾರ್ನರ್ ಬಳಗ ವಿರಾಟ್ ಪಡೆಯನ್ನು ಗೆಲ್ಲಲು ಬಿಡಲಿಲ್ಲ. ಆದ್ರೂ ಆರ್ ಸಿಬಿ ಅಭಿಮಾನಿಗಳ ಅಭಿಮಾನ ಕಮ್ಮಿಯಾಗಿಲ್ಲ. ಮುಂದಿನ ಸಲ ಕಪ್ ನಮ್ದೆ ಅಂತ ಹೇಳುವ ಪರಿಪಾಠ ಮುಗಿಯುವುದಿಲ್ಲ.
ಅಂದ ಹಾಗೇ ಆರ್ ಸಿಬಿ ಎಡವಿದ್ದು ಎಲ್ಲಿ..?
ನಡೆಯಲಿಲ್ಲ ವಿರಾಟ್ ಕೊಹ್ಲಿಯ ಯುಕ್ತಿ. ಸಾಕಾಗಲಿಲ್ಲ ಎಬಿಡಿಯ ಶಕ್ತಿ. ಸಾಲು ಸಾಲು ಸೋಲುಗಳಿಂದ ತಂಡಕ್ಕೆ ಒಲಿಯಲಿಲ್ಲ ಗೆಲುವಿನ ಸ್ಪೂರ್ತಿ. ಕಳಪೆ ಆಟದಿಂದ ಮಂಕಾಗಿ ಹೋಗುತ್ತಿದೆ ಆರ್‍ಸಿಬಿಯ ಕೀರ್ತಿ. ಹಾಗಂತ ತಂಡದ ಪ್ರದರ್ಶನದಿಂದ ನಿರಾಸೆ ಅನುಭವಿಸಿದ್ರೂ ಕಡಿಮೆಯಾಗಲಿಲ್ಲ ಅಭಿಮಾನಿಗಳ ಪ್ರೀತಿ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಅಭಿಮಾನಿಗಳು ಇಟ್ಟಿರುವ ಭಕ್ತಿ..!
ಹೌದು, ಕಳೆದ 13 ವರ್ಷಗಳಿಂದ ಆರ್ ಸಿಗೆ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಪ್ರತಿ ಬಾರಿಯೂ ಕಪ್ ನಮ್ದೆ ಅಂತ ಬೀಗುತ್ತಿರುವ ಅಭಿಮಾನಿಗಳಿಗೆ ವಿರಾಟ್ ಬಳಗ ನಿರಾಸೆ ಮೂಡಿಸುತ್ತನೇ ಇದೆ.
ಹಾಗಿದ್ರೆ ವಿರಾಟ್ ಕೊಹ್ಲಿ ಪಡೆ ಕಪ್ ಗೆಲ್ಲಲು ಯಾಕೆ ಸಾಧ್ಯವಾಗುತ್ತಿಲ್ಲ ? ಈ ಪ್ರಶ್ನೆಗೆ ನಿಖರವಾದ ಉತ್ತರವಿಲ್ಲ. ಬದಲಾಗಿ ಪ್ರಶ್ನೆಗೆ ಮರು ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.
AB de Villiers rcb saakshatv ipl 2020ಮುಖ್ಯವಾಗಿ ಟೀಮ್ ಮ್ಯಾನೇಜ್‍ಮೆಂಟ್. ತಂಡದ ಆಯ್ಕೆಯ ವಿಚಾರದಲ್ಲಿ ಸತತವಾಗಿ ಎಡವುತ್ತಿದೆ. ಬಲಿಷ್ಠ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಆರ್ ಸಿಬಿ ಮ್ಯಾನೇಜ್ ಮೆಂಟ್‍ಗೆ ಸಾಧ್ಯವಾಗುತ್ತಿಲ್ಲ.
ಅಲ್ಲದೆ ಆರ್ ಸಿಬಿ ತಂಡ ಹೆಚ್ಚು ಅವಲಂಬಿತವಾಗಿರೋದು ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಮೇಲೆ. ಇನ್ನುಳಿದ ಆಟಗಾರರು ಹೆಸರಿಗೆ ತಕ್ಕಂತೆ ಆಡುತ್ತಿಲ್ಲ. ಪ್ರತಿ ಪಂದ್ಯದಲ್ಲೂ ವಿರಾಟ್ ಮತ್ತು ಎಬಿಡಿ ಆಡಲೇ ಬೇಕು. ಒಂದು ವೇಳೆ ಆಡದಿದ್ರೆ ಆರ್ ಸಿಬಿಗೆ ಸೋಲು ಕಟ್ಟಿಟ್ಟ ಬುತ್ತಿ.
ಈ ಬಾರಿ ದೇವದತ್ತ್ ಪಡಿಕ್ಕಲ್ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಅದನ್ನು ಬಿಟ್ಟು ಆರ್ ಸಿಬಿಯ ಯಾವೊಬ್ಬ ಬ್ಯಾಟ್ಸ್ ಮೆನ್ ಕೂಡ ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಆಟ ಆಡಲಿಲ್ಲ.
ರನ್ ಮೇಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಮರುಭೂಮಿಯ ಅಂಗಣದಲ್ಲಿ ಸ್ಟಕ್ ಆಗಿಬಿಟ್ರು. ಆರೋನ್ ಫಿಂಚ್ ಮತ್ತು ಎಬಿಡಿಗೆ ಧೂಳು ಎಬ್ಬಿಸಲು ಸಾಧ್ಯವಾಗಲೇ ಇಲ್ಲ.
ಇನ್ನು ಬೌಲಿಂಗ್ ವಿಭಾಗ. ಕ್ರಿಸ್ ಮೋರಿಸ್ ಗಾಯ, ಮಹಮ್ಮದ್ ಸಿರಾಜ್ ಮತ್ತು ನವದೀಪ್ ಸೈನಿ ಸ್ಥಿರ ಪ್ರದರ್ಶನ ನೀಡಲಿಲ್ಲ. ಚಾಹಲ್ ಜಾದೂ ಹೆಚ್ಚು ವರ್ಕೌಟ್ ಆಗಲಿಲ್ಲ.
ತಂಡದಲ್ಲಿ ಹೆಚ್ಚು ಆಲ್ ರೌಂಡರ್ ಗಳಿದ್ರೂ ಮ್ಯಾಚ್ ಫೀನಿಶರ್‍ಗಳ ಕೊರತೆ ಎದ್ದು ಕಾಣುತ್ತಿತ್ತು.
rcb ipl 2020 devdutt padikkal saakshatvಹೀಗಾಗಿ ತಂಡದಿಂದ ಸಾಂಘಿಕ ಆಟ ಹೊರಬಂದಿಲ್ಲ. ತಂಡ ಬ್ಯಾಲೆನ್ಸ್ ಆಗಿಲ್ಲ. ಆಟಗಾರರ ಆಯ್ಕೆ ವಿಚಾರದಲ್ಲಂತೂ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ಪಕ್ಕಾ ಎಡವಿದೆ. ದುಡ್ಡು ಇದ್ರೂ ಆಟಗಾರರನ್ನು ಖರೀದಿ ಮಾಡುವಾಗ ಆರ್ ಸಿಬಿ ಮ್ಯಾನೇಜ್ ಮೆಂಟ್ ನ ಲೆಕ್ಕಚಾರ ಏನು ಅಂತನೇ ಗೊತ್ತಾಗುತ್ತಿಲ್ಲ.
ಇನ್ನು ಕರ್ನಾಟಕದ ಆಟಗಾರರನ್ನು ಕಡೆಗಣಿಸಿರುವುದು ಆರ್ ಸಿಬಿಗೆ ದೊಡ್ಡ ಹೊಡೆತ ಕೊಟ್ಟಿದೆ. ಸ್ಥಳೀಯ ಆಟಗಾರರ ಪ್ರತಿಭೆಗಳ ಮೇಲೆ ನಂಬಿಕೆಯನ್ನಿಟ್ಟುಕೊಳ್ಳದಿರುವುದು ಆರ್ ಸಿಬಿಯ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
ಹಾಗೇ ನೋಡಿದ್ರೆ ಆರ್ ಸಿಬಿ ತಂಡವನ್ನು ನೋಡಿದಾಗ ಯಾರು ಕೂಡ ಪ್ಲೇ ಆಫ್ ಗೆ ಎಂಟ್ರಿಯಾಗುತ್ತೆ ಅಂತ ಅಂದುಕೊಂಡಿರಲಿಲ್ಲ. ಆರ್ ಸಿಬಿ ಅಭಿಮಾನಿಗಳು ಅಭಿಮಾನದಿಂದ ವಿರಾಟ್ ಪಡೆಯ ಮೇಲೆ ವಿಶ್ವಾಸವನ್ನಿಟ್ಟುಕೊಂಡಿದ್ದರು.
ಸತತ ನಾಲ್ಕು ಪಂದ್ಯಗಳ ಸೋಲಿನ ನಡುವೆಯೂ ಪ್ಲೇ ಆಫ್ ಗೆ ಎಂಟ್ರಿಯಾಗಿದ್ದು ಪವಾಡವೇ ಸರಿ.
ಆದ್ರೆ ಅದೃಷ್ಟವನ್ನು ಗೆಲುವಾಗಿ ಪರಿವರ್ತಿಸಲು ನಾಯಕ ವಿರಾಟ್ ಕೊಹ್ಲಿ ಎಡವಿದ್ರು. ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದ ವಿರಾಟ್ ಈ ಬಾರಿಯ ಐಪಿಎಲ್ ನಲ್ಲಿ ವೈಫಲ್ಯ ಅನುಭವಿಸಿರೋದು ಆರ್ ಸಿಬಿಗೆ ದೊಡ್ಡ ಹೊಡೆತ.
ಅದೇನೇ ಇರಲಿ, ಈಗ ಆತ್ಮಾವಲೋಕನ ಸಮಯ. ಆರ್ ಸಿಬಿಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದೆ. ಮುಖ್ಯವಾಗಿ ಟೀಮ್ ಮ್ಯಾನೇಜ್ ಮೆಂಟ್ ನಲ್ಲಿ ಮೇಜರ್ ಸರ್ಜರಿಯಾಗಬೇಕಿದೆ.
virat kohli rcb saakshatv ipl 2020ಇಲ್ಲಿ ಆಟಗಾರರನ್ನು ದೂರಿ ಪ್ರಯೋಜನವಿಲ್ಲ. ಪ್ರತಿಯೊಬ್ಬ ಆಟಗಾರನೂ ಗೆಲುವಿಗಾಗಿ ಹೋರಾಟ ನಡೆಸುತ್ತಾನೆ. ಆದ್ರೆ ಆಟಗಾರರನ್ನು ಆಯ್ಕೆ ಮಾಡುವಾಗ ಟೀಮ್ ಮ್ಯಾನೇಜ್ ಮೆಂಟ್ ಯೋಚನೆ, ಯೋಜನೆ ಹಾಕೊಂಡು ಆಟಗಾರರನ್ನು ಖರೀದಿ ಮಾಡಬೇಕು. ಆದ್ರೆ ಆರ್ ಸಿಬಿಯ ಟೀಮ್ ಮ್ಯಾನೇಜ್ ಮೆಂಟ್‍ನ ಲೆಕ್ಕಚಾರ ಏನು ಅಂತನೇ ಗೊತ್ತಾಗುತ್ತಿಲ್ಲ.
ಒಟ್ಟಿನಲ್ಲಿ ಆರ್ ಸಿಬಿ ಸೋತಿದೆ. ಹಾಗಂತ ಸೋತಿರುವುದಕ್ಕೆ ಬೇಸರವಿಲ್ಲ. ಕೆಟ್ಟ ಆಟವನ್ನಾಡಿರುವುದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ಏನೇ ಆದ್ರೂ ಈ ಬಾರಿ ಕಪ್ ನಮ್ದಲ್ಲ. ಮುಂದಿನ ಬಾರಿಯಾದ್ರೂ ಕಪ್ ನಮ್ದೆ ಆಗಿರಲಿ. ಅದಕ್ಕೆ ತಕ್ಕಂತೆ ಆರ್ ಸಿಬಿ ತಂಡವನ್ನು ಕಟ್ಟಲಿ. ಇಲ್ಲದೆ ಇದ್ರೆ ಪ್ರತಿ ವರ್ಷ, ಈ ಬಾರಿ ಕಪ್ ನಮ್ದೆ ಅನ್ನುತ್ತಿದ್ದ ಅಭಿಮಾನಿಗಳು ಈ ಬಾರಿಯೂ ಕಪ್ ನಮ್ದಲ್ಲ ಅಂತ ಹೇಳಲೂ ಬಹುದು..

Related posts

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ 2026: ವೆಬ್‌ಸೈಟ್, ಡಿಜಿಲಾಕರ್ ಮತ್ತು ಉಮಾಂಗ್ ಆ್ಯಪ್ ಮೂಲಕ ರಿಸಲ್ಟ್ ನೋಡುವುದು ಹೇಗೆ?

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ 2026: ವೆಬ್‌ಸೈಟ್, ಡಿಜಿಲಾಕರ್ ಮತ್ತು ಉಮಾಂಗ್ ಆ್ಯಪ್ ಮೂಲಕ ರಿಸಲ್ಟ್ ನೋಡುವುದು ಹೇಗೆ?

May 11, 2026
ಶೃಂಗೇರಿಯಲ್ಲಿ ನಡೆದಿದ್ದು ಮತ ಎಣಿಕೆಯಲ್ಲ ಅದು ವ್ಯವಸ್ಥಿತ ಪಿತೂರಿ: ಕಾನೂನು ಸಮರದ ಎಚ್ಚರಿಕೆ ನೀಡಿದ ಡಿ ಕೆ ಶಿವಕುಮಾರ್

ಅಭಿಮಾನಿಗಳಿಗೆ ಡಿಕೆಶಿ ಬಿಗ್ ಶಾಕ್ ಬರ್ತ್ ಡೇ ದಿನ ಬ್ಯಾನರ್ ಹಾಕಿದ್ರೆ ಕೇಸ್ ದಾಖಲಿಸೋದು ಗ್ಯಾರಂಟಿ

May 11, 2026
Tags: #Devdutt Padikkal#Navdeep Saini#saakshatvAB de Villiersaron finchchahalChris MorrisIPLIPL 2020Mohammad SirajRCBvirat kohli
ShareTweetSendShare
Join us on:

Related Posts

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ 2026: ವೆಬ್‌ಸೈಟ್, ಡಿಜಿಲಾಕರ್ ಮತ್ತು ಉಮಾಂಗ್ ಆ್ಯಪ್ ಮೂಲಕ ರಿಸಲ್ಟ್ ನೋಡುವುದು ಹೇಗೆ?

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ 2026: ವೆಬ್‌ಸೈಟ್, ಡಿಜಿಲಾಕರ್ ಮತ್ತು ಉಮಾಂಗ್ ಆ್ಯಪ್ ಮೂಲಕ ರಿಸಲ್ಟ್ ನೋಡುವುದು ಹೇಗೆ?

by Shwetha
May 11, 2026
0

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 2026ನೇ ಸಾಲಿನ 12ನೇ ತರಗತಿ ಫಲಿತಾಂಶಗಳನ್ನು ಬಿಡುಗಡೆ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಲಕ್ಷಾಂತರ ವಿದ್ಯಾರ್ಥಿಗಳ ಎದಬಡಿತ ಹೆಚ್ಚಾಗಿದ್ದು, ಫಲಿತಾಂಶದ ಕ್ಷಣಗಣನೆ...

ಶೃಂಗೇರಿಯಲ್ಲಿ ನಡೆದಿದ್ದು ಮತ ಎಣಿಕೆಯಲ್ಲ ಅದು ವ್ಯವಸ್ಥಿತ ಪಿತೂರಿ: ಕಾನೂನು ಸಮರದ ಎಚ್ಚರಿಕೆ ನೀಡಿದ ಡಿ ಕೆ ಶಿವಕುಮಾರ್

ಅಭಿಮಾನಿಗಳಿಗೆ ಡಿಕೆಶಿ ಬಿಗ್ ಶಾಕ್ ಬರ್ತ್ ಡೇ ದಿನ ಬ್ಯಾನರ್ ಹಾಕಿದ್ರೆ ಕೇಸ್ ದಾಖಲಿಸೋದು ಗ್ಯಾರಂಟಿ

by Shwetha
May 11, 2026
0

ರಾಜ್ಯ ರಾಜಕೀಯದ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಈ ಸಂಭ್ರಮದ ನಡುವೆಯೇ ತಮ್ಮ...

ತಮಿಳುನಾಡಿನ ಸಿಎಂ ಪಟ್ಟಕ್ಕೇರಿದ ದಳಪತಿ ವಿಜಯ್: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮೂರು ಬಿಗ್ ಗ್ಯಾರಂಟಿ ಘೋಷಣೆ

ತಮಿಳುನಾಡಿನ ಸಿಎಂ ಪಟ್ಟಕ್ಕೇರಿದ ದಳಪತಿ ವಿಜಯ್: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮೂರು ಬಿಗ್ ಗ್ಯಾರಂಟಿ ಘೋಷಣೆ

by Shwetha
May 11, 2026
0

ತಮಿಳುನಾಡು ರಾಜಕೀಯದಲ್ಲಿ ಇಂದು ಹೊಸ ಯುಗ ಆರಂಭವಾಗಿದೆ. ಇಷ್ಟು ದಿನ ಬೆಳ್ಳಿತೆರೆಯ ಮೇಲೆ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದ ದಳಪತಿ ವಿಜಯ್, ಈಗ ನೈಜ ಜೀವನದ ನಾಯಕನಾಗಿ ತಮಿಳುನಾಡಿನ...

ಬಿಜೆಪಿ ಐತಿಹಾಸಿಕ ವಿಜಯಕ್ಕೆ ಬಾಂಗ್ಲಾ ಮಾಜಿ ಪ್ರಧಾನಿ ಶಹಬ್ಬಾಸ್: ಸುವೇಂದು ನಾಯಕತ್ವಕ್ಕೆ ಸಿಕ್ಕ ದೊಡ್ಡ ಮನ್ನಣೆ

ಬಿಜೆಪಿ ಐತಿಹಾಸಿಕ ವಿಜಯಕ್ಕೆ ಬಾಂಗ್ಲಾ ಮಾಜಿ ಪ್ರಧಾನಿ ಶಹಬ್ಬಾಸ್: ಸುವೇಂದು ನಾಯಕತ್ವಕ್ಕೆ ಸಿಕ್ಕ ದೊಡ್ಡ ಮನ್ನಣೆ

by Shwetha
May 11, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಭೂಪಟದಲ್ಲಿ ಹಿಂದೆಂದೂ ಕಾಣದಂತಹ ಮಹತ್ವದ ಬದಲಾವಣೆ ಸಂಭವಿಸಿದೆ. ದಶಕಗಳ ಕಾಲ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿದ್ದ ರಾಜ್ಯದಲ್ಲಿ ಇದೀಗ ಭಾರತೀಯ ಜನತಾ ಪಾರ್ಟಿ...

ಕಾಂಗ್ರೆಸ್ ಅಧಿಕಾರ ಇರುವ ಕಡೆಯಲ್ಲೆಲ್ಲಾ ಖಜಾನೆ ಲೂಟಿ ಆಗುತ್ತಿದೆ ; ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ : ಮೋದಿ

ಕಾಂಗ್ರೆಸ್ ಅಧಿಕಾರ ಇರುವ ಕಡೆಯಲ್ಲೆಲ್ಲಾ ಖಜಾನೆ ಲೂಟಿ ಆಗುತ್ತಿದೆ ; ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ : ಮೋದಿ

by Shwetha
May 11, 2026
0

ಪಶ್ಚಿಮ ಬಂಗಾಳದ ರಣಭೂಮಿಯಲ್ಲಿ ಕೇಸರಿ ಪತಾಕೆ ಹಾರಿಸಿ ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram