ಗಣೇಶ ವಿಸರ್ಜನೆ ವೇಳೆ ದುರಂತ : ಮಧ್ಯಪ್ರದೇಶದಲ್ಲಿ ನೀರಿನಲ್ಲಿ ಮುಳುಗಿ 10 ಮಂದಿ ಸಾವು
ಗಣೇಶ ವಿಸರ್ಜನೆಗೆ ಹೋದ ಸಂದರ್ಭದಲ್ಲಿ ಪ್ರತ್ಯೇಕ ಕಡೆಗಳಲ್ಲಿ 16 ಮಂದಿ ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ.
ಮಧ್ಯಪ್ರದೇಶದಲ್ಲಿ 10 ಮಂದಿ ಮೃತಪಟ್ಟಿದ್ದು, ಈ ಪೈಕಿ 7 ಮಂದಿ ಮಕ್ಕಳಾಗಿದ್ದಾರೆ.
ಇನ್ನೂ ಅದೇ ರೀತಿ ಉತ್ತರ ಪ್ರದೇಶದಲ್ಲಿ ಐದು ಮಂದಿ ಮೃತಪಟ್ಟಿದ್ರೆ , ಮುಂಬೈನ ವರ್ಸೋವಾ ಕರಾವಳಿಯಲ್ಲಿ ನಾಲ್ಕು ಮಕ್ಕಳು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ.
ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಭಿಂದ್ ಟಾಕಿಂಗ್ ಬಳಿಯಿರುವ ಕೊಳದಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ.
ಸತ್ನಾದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ರಾಜಘಡದಲ್ಲಿ ಒಂದು ಸಾವಾಗಿದೆ.
ಭಿಂದ್‌ನ ಮೆಹಗಾಂವ್ ನ ವಾಂಖಂಡೇಶ್ವರ ಮಹಾದೇವ ದೇವಾಲಯದ ಬಳಿಯ ಕೊಳದಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಗಣೇಶ ಮೂರ್ತಿಯನ್ನು ಮುಳುಗಿಸುವಾಗ ಮಕ್ಕಳು ಆಳವಾದ ನೀರಿಗೆ ಇಳಿದಿದ್ದಾರೆ.
ಈಜು ಬಾರದ ಕಾರಣ ನಾಲ್ವರೂ ನೀರಿನಲ್ಲಿ ಮುಳುಗಿಹೋಗಿದ್ದಾರೆ.
ಬಾಲ್ಯವಿವಾಹದಲ್ಲಿ ಕರ್ನಾಟಕವೇ ಫಸ್ಟ್..!
ಮೃತ ಮಕ್ಕಳನ್ನು ಅಭಿಷೇಕ್ ಕುಶ್ವಾಹ, ಸಚಿನ್ ರಜಾವತ್, ಹರ್ಷಿತ್ ರಜಾವತ್, ಪ್ರಶಾಂತ್ ಕುಶ್ವಾಹ ಎಂದು ಗುರುತಿಸಲಾಗಿದೆ.
ಎಲ್ಲರ ವಯಸ್ಸು 12 ರಿಂದ 13 ವರ್ಷಗಳ ಒಳಗಿರುವುದಾಗಿ ವರದಿಯಾಗಿದೆ.
ಸತ್ನಾ ಜಿಲ್ಲೆಯ ಜುರಾ ಗ್ರಾಮದ ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ನೀರಿನಲ್ಲಿ ಮುಳುಗಿದ ಎಲ್ಲ ಮಕ್ಕಳು 8 ರಿಂದ 10 ವರ್ಷ ವಯಸ್ಸಿನವರು ಎನ್ನಲಾಗಿದೆ.
17 ವರ್ಷದ ಬ್ರಾಜ್ ಸಿಂಗ್ ರಾಜಗಢದ ಕಚರಿಯಾ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಸಮಯದಲ್ಲಿ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.







