ಪ್ರಿಯಕರನ ಜೊತೆ ಮದುವೆಯಾಗಲು ಕುಟುಂಬವರಿಗೆ ವಿಷ ನೀಡಿದ ಯುವತಿ..!
ಪ್ರಿಯಕರನ ಜೊತೆಗೆ ಮದುವೆಯಾಗುವ ಸಲುವಾಗಿ 18 ವರ್ಷದ ಯುವತಿ ತನ್ನ ಕುಟುಂಬದ ಸದಸ್ಯರಿಗೆ ವಿಷ ನೀಡಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಆರೋಪಿತೆಯನ್ನ ಖುಷ್ಬೂ ಎಂದು ಗುರುತಿಸಲಾಗಿದ್ದು, ಈಕೆ 10 ತರಗತಿ ನಂತರ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹಾಡಿದ್ದಳು. ಈಕೆಯ ಪ್ರಿಯತಮ ಸಚಿನ್ ನಿರುದ್ಯೋಗಿ ಎನ್ನಲಾಗಿದೆ. ಇನ್ನೂ ಆರೋಪಿತೆ ಹಾಗೂ ಆಕೆಯ ಪ್ರಿಯಕರನ ಜೊತೆಗೆ ಆತನ ತಂದೆ ಅಶೋಕ್ ವಿರುದ್ಧವೂ FIR ದಾಖಲಾಗಿದೆ. ಆಸ್ತಿ ಬ್ರೋಕರ್ ಆಗಿದ್ದ ಸಚಿನ್ ತಂದೆ ಅಶೋಕ್ ನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆದ್ರೆ ಆರೋಪಿತೆ ಹಾಗೂ ಆಕೆಯ ಪ್ರಿಯಕರ ಸಚಿನ್ ಈವರೆಗೂ ತಲೆಮರೆಸಿಕೊಂಡಿದ್ದಾರೆ. ಅವರಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಖುಷ್ಭು ಮತ್ತು ಸಚಿನ್ ಕುಟುಂಬವು ಸೂರತ್ನ ದಿಂಡೋಲಿ ಪ್ರದೇಶದಲ್ಲಿ ಒಂದೇ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ, ಇಬ್ಬರೂ ಸ್ನೇಹವನ್ನು ಬೆಳೆಸಿಕೊಂಡಿದ್ದಾರೆ. ನಂತರ ಅದು ಪ್ರೀತಿಗೆ ತಿರುಗಿದೆ. ಆದ್ರೆ ಆ ವೇಳೆ ಖುಷ್ಬೂ ಇನ್ನೂ ಅಪ್ರಾಪ್ತೆಯಾಗಿದ್ದರಿಂದ ಇವರಿಬ್ಬರ ಪ್ರೀತಿಗೆ ಖುಷ್ಬೂ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಎರಡು ವರ್ಷಗಳ ಹಿಂದೆ ಆಕೆ ಸಚಿನ್ ಜೊತೆ ಪರಾರಿಯಾಗಿದ್ದಳು. ಆದರೆ ಆಕೆಯನ್ನು ಮರಳಿ ಕರೆತರಲಾಗಿತ್ತು ಎನ್ನಲಾಗಿದೆ. ನಂತರ ಆಕೆಯ ಕುಟುಂಬ ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು. ಆದ್ರೆ ಖುಷ್ಬು ಸಚಿನ್ ಜೊತೆಗಿನ ತನ್ನ ಸಂಬಂಧವನ್ನು ಮುಂದುವರಿಸಿದಳು ಮತ್ತು ಆತನನ್ನು ಮದುವೆಯಾಗಲು 18 ತುಂಬುವುದನ್ನ ಕಾಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. 18 ನೇ ಹುಟ್ಟುಹಬ್ಬದ ಎರಡು ದಿನಗಳ ನಂತರ, ಅವಳು ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಯೋಜಿಸಿದಳು ಮತ್ತು ಸೆಪ್ಟೆಂಬರ್ 12 ರಂದು ತನ್ನ ಹೆತ್ತವರನ್ನು ಪ್ರಜ್ಞೆ ತಪ್ಪಿಸಲು ಮತ್ತು ಮನೆಯಿಂದ ಪರಾರಿಯಾಗಲು ಇವರಿಬ್ಬರು ಸೇರಿ ಸಂಚು ರೂಪಿಸಿದ್ದರು ಎನ್ನಲಾಗಿದೆ.
ವೈದ್ಯಕೀಯ ಅಂಗಡಿಯಿಂದ ಕೆಲವು ಮಾತ್ರೆಗಳನ್ನು ಖರೀದಿಸಿ ಪರಾಟದ ಜೊತೆಗೆ ಬೆರೆಸಿ ತನ್ನ ಕುಟುಂಬಕ್ಕೆ ನೀಡಿರುವುದಾಗಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಹಾರ ಸೇವಿಸಿದ ನಂತರ ಆಕೆಯ ಪೋಷಕರು ಮತ್ತು ಸಹೋದರ ಪ್ರಜ್ಞಾಹೀನರಾದಾಗ, ಅಶೋಕ್ ಹಾಗೂ ಖುಷ್ಬು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಖುಷ್ಬು ಮತ್ತು ಸಚಿನ್ ತಮ್ಮ ಮದುವೆಯನ್ನು ನೋಂದಾಯಿಸಿದ ನಂತರ ಪೊಲೀಸ್ ಠಾಣೆಗೆ ತಲುಪಿದ್ದಾರೆ. ಇದೇ ವೇಳೆ ಆಕೆಯ ತಂದೆ ತಾಯಿ ಸಹೋದರನ ಸ್ಥಿತಿ ತೀವ್ರ ಗಂಭೀರವಾಗಿದೆ. ನಂತರ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಆರೋಪಿ ಖುಷ್ಬೂ ತಂದೆ ತನ್ನ ಮಗಳು ಹಾಗೂ ಆಕೆಯ ಪ್ರಿಯಕರ ಜೊತೆಗೆ ಪ್ರಿಯಕರನ ತಂದೆಯ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ.