ದಸರಾ ಜಂಬೂಸವಾರಿ : “ಅಭಿಮನ್ಯು ಬ್ರಿಗೇಡ್” ನ ಸದಸ್ಯರ ಬಗ್ಗೆ ನಿಮಗೆಷ್ಟು ಗೊತ್ತು..?

1 min read

ದಸರಾ ಜಂಬೂಸವಾರಿ : “ಅಭಿಮನ್ಯು ಬ್ರಿಗೇಡ್” ನ ಸದಸ್ಯರ ಬಗ್ಗೆ ನಿಮಗೆಷ್ಟು ಗೊತ್ತು..?

ಈ ಬಾರಿಯೂ ಸರಳವಾಗಿ ನಾಡಹಬ್ಬಾಚರಣೆ

ವೀರ ಅಭಿಮನ್ಯು ಅಂಬಾರಿ ಹೊರುವ ದೃಶ್ಯ ಕಣ್ತುಂಬಿಕೊಳ್ಳುವ ಅದೃಷ್ಟ ಕೆಲವರಿಗೆ ಮಾತ್ರವೇ..!

ವಿಜೃಂಭಣೆಯ ದಸರಾ ಮೇಲೆ ಕೊರೊನಾ ಕರಿನೆರಳು..!

ಲಕ್ಷಾಂತರ ಜನ ಸೇರಿ ಸಂಭ್ರಮ ಸಡಗರ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಬೇಕಿದ್ದ ನಾಡಹಬ್ಬ ದಸರಾ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ. ಪರಿಣಾಮ ಈ ಬಾರಿಯೂ ಸರಳವಾಗಿ ದಸರಾ ಆಚರಣೆ ಮಾಡಬೇಕಾಗಿದೆ. ರಾಜಗಾಂಭೀರ್ಯದಿಂದ ನಾಡದೇವತೆಯನ್ನ ಹೊತ್ತು ಗಜಪಡೆ ಹೆಜ್ಜೆ ಹಾಕುವುದನ್ನ ನೋಡುವುದಕ್ಕೆ ಲಕ್ಷಾಂತರ ಮಂದಿ ಕಾತರದಿಂದ ಕಾಯುತ್ತಿದ್ದರು. ನಾಡ ಹಬ್ಬಕ್ಕೆ ರಾಜ್ಯಾದ್ಯಂತದ ಮೂಲೆ ಮೂಲೆಗಳಿಮದ ಬರುವ ಕಲಾವಿದರ ಕೈಚಳ, ಅಣಕು ಪ್ರದರ್ಶನ ಕಣ್ತುಂಬಿಕೊಳ್ಳಲು , ಸಾಂಸ್ಕೃತಿಕ ಕಾರರ್ಯಕ್ರಮಗಳಲ್ಲಿ ಮಿಂದೇಳಲು ಹಾತೊರೆಯುತ್ತಿದ್ದರು. ಏನಿಲ್ಲಾ ಅಂದ್ರೂ ಪ್ರತಿ ವರ್ಷ ದಸರಾಗೆ ದೇಶ ವಿದೇಶ , ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ಜನ ಗುಜಪಡೆ ಅಂಬಾರಿ ಹೊರುವುದನ್ನ ಕಣ್ತುಂಬಿಕೊಳ್ಳಲು ಬರುತ್ತಿದ್ದರು. ಈ ಬಾರಿ ಆಡಂಬರವಿಲ್ಲ. ಸಡಗರವಿದ್ರೂ ಅಷ್ಟು ಸಂಭ್ರಮವಿಲ್ಲ. ಸರಳವಾಗಿಯೇ ದಸರಾ ಆಚರಣೆ ಮಾಡುವಂತಹ ಅನಿವಾರ್ಯತೆ ತಂದಿದೆ ಕೊರೊನಾ ಮಹಾಮಾರಿ.

ಎಚ್ಚರಿಕೆ… ಶತಮಾನದ ಅತ್ಯಂಕ್ಕೆ ಅತ್ಯಂತ ಅಪಾಯಕಾರಿ ಮಟ್ಟ ತಲುಪಲಿದೆ ಜಾಗತಿಕ ತಾಪಮಾನ..!

ಅಂಬಾರಿ ಹೊರುವ ವೀರ ಅಭಿಮನ್ಯು ಎಲ್ಲರ ಅಚ್ಚುಮೆಚ್ಚು ಏಕೆ ಗೊತ್ತಾ..?

ಇನ್ನೂ ದಸರಾದಲ್ಲಿ ಪಾಲ್ಗೊಳ್ಳು ಈಗಾಗಲೇ ಮೈಸೂರು ಅರಮನೆಯತ್ತ ವೀರನಹೊಳ್ಳಿ ಆನೆ ಕ್ಯಾಂಪ್ ನಿಂದ ಗಜಪಯಣ ಹೊರಟು ಮೈಸೂರು ತಲುಪಿದೆ.  ಅಭಿಮನ್ಯೂ ಅಂಬಾರಿ ಹೊರುವುದನ್ನ ಕಣ್ತುಂಬಿಕೊಳ್ಳುವ ಅದೃಷ್ಟ ಹೆಚ್ಚಿನ ಜನರಿಗಿಲ್ಲ. ವೀರ ಅಭಿಮನ್ಯು (56 ವರ್ಷ) ಮತ್ತಿಗೋಡು ಶಿಬಿರದಿಂದ ತನ್ನ ಮಾವುತ ವಸಂತ ಹಾಗೂ ಕಾವಾಡಿ ರಾಜು ಜೊತೆಗೆ ಬಂದು ಮೈಸೂರು ಸೇರಿದೆ. ಇದರ ಎತ್ತರ 2.72 ಮೀಟರ್. ಉದ್ದ 3.51 ಮೀ. ತೂಕ 4720 ಕೆಜಿ. ಅಭಿಮನ್ಯು ಕಳೆದ ವರ್ಷದಿಂದ ಅಂಬಾರಿ ಹೊರುತ್ತಿದೆ.

ಅಭಿಮನ್ಯು 2012ರಿಂದಲೂ ಕೂಡ ದಸರಾದಲ್ಲಿ ಪಾಲ್ಗೊಳ್ಳುತ್ತಾ ಬಂದಿದೆ. 2015ರವರೆಗೂ ಅಭಿಮನ್ಯುಗೆ ಕರ್ನಾಟಕ ವಾದ್ಯಗೋಷ್ಠಿಯವರು ಕೂರುವ ಗಾಡಿಯನ್ನ ಎಳೆಯುವ ಜವಾಬ್ದಾರಿ ವಹಿಸಲಾಗಿತ್ತು.  1970ರಲ್ಲಿ ಕೊಡಗಿನ ಹೆಬ್ಬಳ ಅರಣ್ಯ ಪ್ರದೇಶದಲ್ಲಿ ಅಭಿಮನ್ಯುವನ್ನು ಸೆರೆಹಿಡಿಯಲಾಗಿತ್ತು. ಕಾಡಾನೆಗಳನ್ನ ಸೆರೆಹಿಡಿದು ಪಳಗಿಸುವ, ಚಿಕಿತ್ಸೆ ನೀಡುವ ಕಾರ್ಯಾಚರಣೆಯಲ್ಲಿ ಅಭಿಮನ್ಯು ನಿಪುಣ. ಅಷ್ಟೇ ಅಲ್ಲ ಅಭಿಮನ್ಯು ಸುಮಾರು 150 ಕಾಡಾನೆಗಳನ್ನ ಹಾಗೂ ಸುಮಾರು 50 ಹುಲಿಗಳನ್ನ ಸೆರೆಹಿಡಿಯಲು ನೆರವಾಗಿದೆ.  

 “ಅಭಿಮನ್ಯು” ಬ್ರಿಗೇಡ್ ಗೆ ಸಾಥ್ ಕೊಡಲಿದೆ ‘ಚೈತ್ರಾ’..! 

ಗಜಪಯಣದಲ್ಲಿ ಭಾಗಿಯಾಗಲು  ರಾಮಪುರ ಶಿಬಿರದಿಂದ ಚೈತ್ರಾ(48 ವರ್ಷ) ಎಂಬ ಆನೆ, ಮಾವುತ ಭೋಜ, ಕಾವಾಡಿ ಖಲೀಂ ಟೀಂ ಬಂದು ಮೈಸೂರು ಸೇರಾಗಿದೆ.  ಈ ಆನೆಯ ಎತ್ತರ 2.30 ಮೀಟರ್. ಉದ್ದ 2.10 ಮೀಟರ್. ತೂಕ ಸುಮಾರು 2600 ಕೆಜಿ.  ಇದು 2018ರಿಂದಲೂ ದಸರಾ ಗಜಪಡೆಯಲ್ಲಿ ಭಾಗಿಯಾಗಿದೆ. ಇದು ಅರಣ್ಯ ಇಲಾಖೆಗೆ ಸೇರಿದ್ದ ಗಂಗೆ ಎಂಬ ಆನೆಯ ಮರಿಯಾಗಿದೆ.  ಇದು ಕಾಡಾನೆಗಳು ಹಾಗೂ ಹುಲಿ ಗಳನ್ನ ಸೆರೆಹಿಡಿಯುವ ಕೆಲಸ ಮಾಡುತ್ತದೆ.

ಮಾವುತ, ಕಾವಡಿ ಜೊತೆ ಮೈಸೂರಿಗೆ ಬಂದ ‘ಲಕ್ಷ್ಮಿ’ ಟೀಂ..!

ರಾಮಪುರ ಶಿಬಿರದಿಂದಲೇ ಮತ್ತೊಂದು ಆನೆ ಲಕ್ಷ್ಮಿ ಕೂಡ ಅರಮನೆಯತ್ತ ತನ್ನ ಮಾವುತ ಚಂದ್ರ ಹಾಗೂ ಕಾವಾಡಿ ಲವನ ಜೊತೆಗೆ ಬಂದಿದೆ.  ಇದರ ಉದ್ದ 2.60 ಮೀ. ಎತ್ತರ 2.32 ಮೀ. ತೂಕ 2540 ಕೆಜಿ. ಈ ಆನೆಯು ತಾಯಿಯಿಂದ ಬೇರ್ಪಟ್ಟ ನಂತರದಲ್ಲಿ ಅರಣ್ಯ ಇಲಾಖೆಯ ಶಿಬಿರದಲ್ಲಿ ಆರೈಕೆಗೆ ಒಳಗಾಗಿತ್ತು. ಅಲ್ಲಿಂದ ಕಾಡಾನೆ ಹಾಗೂ ಹುಲಿಗಳನ್ನ ಸೆರೆಹಿಡಿಯಲು ಸೆರವಾಗುತ್ತಾ ಬಂದಿದೆ. ಇದು 2019ರಿಂದಲೂ ದಸರಾದಲ್ಲಿ ಪಾಳ್ಗೊಳ್ಳುತ್ತಾ ಬಂದಿದೆ.  

 ‘ಗೋಪಾಲಸ್ವಾಮಿ’ಯ ವಿಶೇಷತೆಗಳೇನು ಗೊತ್ತಾ..?

ಗಜಪಡೆಯಲ್ಲಿ ಭಾಗವಹಿಸಲು ಅರಮನೆಯತ್ತ  ಬಂದ  ಮತ್ತೊಂದು ಆನೆಯ ಹೆಸರು ಗೋಪಾಲಸ್ವಾಮಿ. ಇದರ ವಯಸ್ಸು 38 ವರ್ಷ. ಎತ್ತರ 2.85 ಮೀ. ಉದ್ದ 3.42 ಮೀ , 4420 ಕೆಜಿ ತೂಕವುಳ್ಳ ಆನೆ ತನ್ನ ಮಾವುತ ಮಂಜು ಹಾಗೂ ಕಾವಾಡಿ ಸೃಜನ್ ಜೊತೆಗೆ ಬಂದು ತಲುಪಿದೆ. ಇದು 2012ರಿಂದಲೂ ಕೂಡ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದೆ. 2009ರಲ್ಲಿ ಈ ಆನೆಯನ್ನು ಹಾಸನದ ಸಕಲೇಶಪುರದ ಎತ್ತೂರಿನ ಭಾಗದಲ್ಲಿ ಸೆರೆಹಿಡಿಯಲಾಗಿತ್ತು. ಇದು ಕೂಡ ಕಾಡಾನೆಗಳು ಹಾಗೂ ಹುಲಿಗಳ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ನೆರವಾಗುತ್ತಾ ಬಂದಿದೆ.

ಮೊದಲ ಬಾರಿಗೆ ಗಜಪಡೆ ಸೇರಲಿರುವ ‘ಅಶ್ವತ್ಥಾಮ’..!

ಇನ್ನೂ ದೊಡ್ಡಹರವೆ ಆನೆಶಿಬಿರದ 34 ವರ್ಷದ ಗಂಡಾನೆ ಅಶ್ವತ್ಥಾಮ ಕೂಡ ತನ್ನ ಮಾವುತ ಶಿವು ಹಾಗೂ ಕಾವಡಿ ಗಣೇಶರ ಜೊತೆಗೆ ಅರಮನೆ ಆವರಣ ಸೇರಿದೆ. ಇದರ ಎತ್ತರ 2.85 ಮೀ. ಉದ್ದ 3.46 ಮೀ. ತೂಕ 3630 ಕೆಜಿ. ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗಲು ಸಜ್ಜಾಗಿದೆ. ಈ ಆನೆ ಸಕಲೇಶಪುರದಲ್ಲಿ ಸೆರೆಯಾಗಿತ್ತು.

18 ವರ್ಷಗಳಿಂದಲೂ ದಸರಾದಲ್ಲಿ ಬಾಗಿಯಾಗ್ತಿದ್ದಾನೆ ‘ವಿಕ್ರಮ’..!  

ವಿಕ್ರಮ ಎಂಬ ಆನೆ ( 58 ವರ್ಷ) ಕೊಡಗಿನ ದುಬಾರಿ ಆನೆ ಶಿಬಿರದಿಂದ ಬಂದಿದ್ದು, ತನ್ನ ಮಾವುತ ಪುಟ್ಟ ಹಾಗೂ ಕಾವಡಿ ಹೇಮಂತ್ ಜೊತೆಗೆ ಅರಮನೆ ಆವರಣಕ್ಕೆ ಬಂದು ಸೇರಿದೆ. ಗಜಪಯಣದಲ್ಲಿ ಗಾಂಭಿರ್ಯದ ಹೆಜ್ಜೆಯಿಡುತ್ತಾ ಅಭಿಮನ್ಯುಗೆ ಸಾಥ್ ಕೊಡಲಿದೆ. ಎತ್ತರ 2.89 ಮೀ. ಉದ್ದ 3.43 ಮೀ. ತೂಕ 3820 ಕೆಜಿ. ಈ ಆನೆ ಕಳೆದ 18 ವರ್ಷಗಳಿಂದಲೂ ದಸರಾದಲ್ಲಿ ಭಾಗಿಯಾಗುತ್ತಾ ಬಂದಿದೆ. 2015ರಿಂದಲೂ ಪಟ್ಟದ ಆನೆಯಾಗಿ ಅರಮನೆಯ ಪೂಜಾ ವಿಧಿವಿದಾನಗಳಲ್ಲಿ ಭಾಗವಹಿಸುತ್ತಿದೆ. ಇದನ್ನ 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.

ಗಜಪಡೆಯಲ್ಲಿ ‘ದುಬಾರೆ’ಯ ‘ಧನಂಜಯ’ ..! 

ದುಬಾರಿ ಆನೆ ಶಿಬಿರದ್ದೇ ಮತ್ತೊಂದು ಆನೆ ಧನಂಜಯ (43 ವರ್ಷ) ಮೈಸೂರಿನತ್ತ ತನ್ನ ಮಾವುತ ಭಾಸ್ಕರ್, ಕಾವಡಿ ಮಣಿ ಜೊತೆಗೆ ಬಂದು ಸೇರಿದೆ.  ಉದ್ದ 3.84 ಮೀ, ಎತ್ತರ 2.92 ಮೀ, 4050 ಕೆಜಿ ತೂಕ. ಕಳೆದ 3 ವರ್ಷಗಳಿಂದಲೂ ದಸರಾದಲ್ಲಿ ಭಾಗವಹಿಸುತ್ತಿದೆ. 2013ರಲ್ಲಿ ಹಾಸನದ ಯಸಳೂರಿನಲ್ಲಿ ಇದು ಸೆರೆಸಿಕ್ಕಿತ್ತು. ಇದು ಕಾಡಾನೆ ಹುಲಿಗಳ ಸೆರೆಹಿಡಿಯಲು ನೆರವಾಗುತ್ತಾ ಬಂದಿದೆ. cm dasara

ಗಜಪಡೆಯ ಮೆರಗು ಹೆಚ್ಚಿಸಲಿದ್ದಾಳೆ ದುಬಾರೆಯ ‘ಕಾವೇರಿ’..!

ದುಬಾರೆ ಶಿಬಿರದಿಂದ ಮೈಸೂರಿನತ್ತ ಪಯಣ ಬೆಳೆಸಿರುವ ಮತ್ತೊಂದು ಆನೆ ಕಾವೇರಿ (44 ವರ್ಷ) ತನ್ನ ಮಾವುತ ಡೋಜಿ, ಕಾವಡಿ ರಂಜನ್ ಜೊತೆಗೆ ಮೈಸೂರು ಅರಮನೆ ಆವರಣ ತಲುಪಿದೆ. ಎತ್ತರ 2.60 ಮೀ, ತೂಕ 3220 ಕೆ.ಜಿ, ಉದ್ದ 3.32 ಮೀ. ಇದು ಕಳೆದ 9 ವರ್ಷಗಳಿಂದಲೂ ದಸರಾದಲ್ಲಿ ಪಾಲ್ಗೊಳ್ಳುತ್ತಾ ಬಂದಿದೆ. ಈ ಆನೆಯನ್ನ 2009ರಂದು ಸೋಮವಾರ ಪೇಟೆಯಲ್ಲಿ ಸೆರೆಹಿಡಿಯಲಾಗಿತ್ತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd