ಕಲಬುರಗಿಯಲ್ಲಿ ಭೂಕಂಪನ :  ಉತ್ತರ ಕರ್ನಾಟಕ ಭಾಗದಲ್ಲಿ 11 ದಿನಗಳಲ್ಲಿ 5ನೇ ಬಾರಿಗೆ ಭೂಕಂಪನ

1 min read

ಕಲಬುರಗಿಯಲ್ಲಿ ಭೂಕಂಪನ :  ಉತ್ತರ ಕರ್ನಾಟಕ ಭಾಗದಲ್ಲಿ 11 ದಿನಗಳಲ್ಲಿ 5ನೇ ಬಾರಿಗೆ ಭೂಕಂಪನ

ಕಲಬುರಗಿ : ಕಲಬುರಗಿಯಲ್ಲಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 4.1 ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಈ ಮಾಹಿತಿ ನೀಡಿದೆ.  ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ, ಭೂಕಂಪದ ಕೇಂದ್ರಬಿಂದು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮಣಿಯಾರ್‌ಪಲ್ಲಿ ಗ್ರಾಮವಾಗಿದೆ. ಈ ಗ್ರಾಮವು ಕರ್ನಾಟಕಕ್ಕೆ ಬಹಳ ಹತ್ತಿರದಲ್ಲಿದೆ. ಭೂಕಂಪದ ಕೇಂದ್ರಬಿಂದು ಕಲಬುರ್ಗಿಯ ಚಿಂಚೋಳಿ ತಾಲೂಕಿನ ಶಿವರಾಂಪುರ ಹಳ್ಳಿಯಿಂದ ಈಶಾನ್ಯಕ್ಕೆ 1.9 ಕಿಮೀ ದೂರದಲ್ಲಿದೆ ಎಂದು ಕೂಡ ತಿಳಿಸಿದೆ.

ಕಳೆದ 11 ದಿನಗಳಲ್ಲಿ 5ನೇ ಬಾರಿಗೆ, ಉತ್ತರ ಕರ್ನಾಟಕ ಭಾಗದಲ್ಲಿ ಭೂಕಂಪನದ ಅನುಭವವಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಅಕ್ಟೋಬರ್ 1 ಮತ್ತು ಅಕ್ಟೋಬರ್ 5 ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಭೂಕಂಪದ ಅನುಭವವಾಗಿತ್ತು, ಇದು ಮಹಾರಾಷ್ಟ್ರದ ಲಾತೂರ್ ಮತ್ತು ಕಿಲಾರಿ ಬಳಿ ಇದೆ. ಸೆಪ್ಟೆಂಬರ್ 1993 ರಲ್ಲಿ, ಈ ಪ್ರದೇಶದಲ್ಲಿ ಭಾರೀ ಭೂಕಂಪ ಸಂಭವಿಸಿತು, ಅದರಲ್ಲಿ ಅನೇಕ ಜನರು ಮೃತಪಟ್ಟಿದ್ದರು.

ಟಿ-20ಯಲ್ಲಿ ಡ್ವೇನ್ ಬ್ರಾವೋ ನೂತನ ವಿಶ್ವ ದಾಖಲೆ

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd