ಚೀನಾ ಉದ್ಧಟತನ – ಯುದ್ಧ ಮಾಡಿದರೆ ಭಾರತ ಸೋಲಬಹುದು ಎಂದ ಚೀನೀ ಪತ್ರಿಕೆ

1 min read

ಚೀನಾ ಉದ್ಧಟತನ – ಯುದ್ಧ ಮಾಡಿದರೆ ಭಾರತ ಸೋಲಬಹುದು ಎಂದ ಚೀನೀ ಪತ್ರಿಕೆ

ಕಪಟಿ ದೇಶ ಚೀನಾ ತನ್ನನ್ನ ಬಿಟ್ರೆ ಬೇರೆ ಯಾರೂ ಇಲ್ಲವೇ ಇಲ್ಲ ಅನ್ನೋ ದುರಹಂಕಾರದಲ್ಲಿ ಮೆರೆಯುತ್ತಿದೆ. ಪ್ರಪಂಚಕ್ಕೆ ಕೊರೊನಾ ಹಬ್ಬಿಸಿ ಕೋಟ್ಯಾಂತರ ಜನರ ಸಾವಿಗೆ ಕಾರಣವಾಗಿರುವ ಚೀನಾಗೆ ಭಾರತದ ಲಡಾಕ್ ಮೇಲೆ ಕಣ್ಣಿದೆ. ಚೀನೀ ಸೈನಿಕರಿಗೆ ಭಾರತೀಯ ಸೈನಿಕರು ಈಗಾಗಲೇ ಸಾಕಷ್ಟು ಬಾರಿ ಪಾಠ ಕಲಿಸಿದ್ರು ಚೀನಾಗೆ ಬುದ್ದಿ ಮಾತ್ರ ಬಂದಿಲ್ಲ. ಈ ನಡುವೆ ಚೀನೀ ಪತ್ರಿಕೆ ಭಾರತದ ಜೊತೆಗೆ ಯುದ್ಧ ಮಾಡಿದ್ರೆ ಭಾರತ ಸೋಲಬಹುದು ಎಂದು ವರದಿ ಮಾಡಿದೆ.

ಭಾರತದೊಂದಿಗೆ ಬಾಂಧವ್ಯ ಹದಗೆಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಚೀನಾವು ಸೇನಾ ಸಂಘರ್ಷಕ್ಕೆ ಸಿದ್ಧವಾಗಿರಬೇಕು ಎಂದು ಅಲ್ಲಿನ ಪತ್ರಿಕೆಯೊಂದು ಹೇಳಿದೆ. ಅಲ್ಲದೇ ಒಂದು ವೇಳೆ ಭಾರತ ಯುದ್ಧ ಆರಂಭಿಸಿದ್ರೆ ಖಂಡಿತವಾಗಿಯೂ ಸೋಲಲಿದೆ ಎಂದು ಜಂಬ ಕೊಚ್ಚಿಕೊಂಡಿದೆ ಮೊಂಡು ಚೀನಾ.

ಇನ್ನೂ ಭಾರತದ ಜತೆಗಿನ ಗಡಿ ವಿವಾದ ನಿಭಾಯಿಸುವಲ್ಲಿ ಚೀನಾ ಎರಡು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಮೊದಲನೆಯದಾಗಿ ಭಾರತವು ಏನೇ ಸಮಸ್ಯೆಗಳನ್ನು ಸೃಷ್ಟಿಸಿದರೂ ನಮ್ಮ ನಿಲುವಿಗೆ ನಾವು ಬದ್ಧರಾಗಿರಬೇಕು. ಚೀನಾದ ಪ್ರದೇಶವು ಎಂದಿದ್ದರೂ ಚೀನಾಗೆ ಸೇರಿದ್ದು ಮತ್ತು ನಾವು ಅದನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಗಡಿ ವಿಚಾರದಲ್ಲಿ ಭಾರತ ಇನ್ನೂ ನಿದ್ರಾವಸ್ಥೆಯಲ್ಲಿದೆ. ಅದು ಎಚ್ಚರಗೊಳ್ಳುವ ವರೆಗೆ ನಾವು ಕಾಯಬಹುದು ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ಆದ್ರೆ ಕಪಟಿ ಚೀನಾ ಹಾಗೂ ಕುತಂತ್ರಿ ಪಾಕಿಸ್ತಾನ  ಭಾರತದ ವಿರುದ್ಧ ಎಷ್ಟೇ ಪಿತೂರಿ ಮಾಡಿದ್ರು. ಎಷ್ಟೇ ಬೊಗಳಿದ್ರು ಭಾರತ ತಾಕತ್ತು ಪ್ರದರ್ಶಿಸುವ ಸಂದರ್ಭ ಬಂದ್ರೆ ಬೆದರಲೇಬೇಕು. ಈಗಾಗಲೇ ಭಾರತೀಯರ ತಂಟೆಗೆ ಬಂದ್ರೆ ಏನಾಗುತ್ತೆ ಅನ್ನೋ ಅರಿವು ಅವರಿಗಿದೆ. ಚೀನೀ ಸೈನಿಕರನ್ನ ಭಾರತೀಯ ಸೈನಿಕರು ಹೇಗೆ ಹಿಮ್ಮೆಟ್ಟಿಸಿದ್ರು, ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನ ಬೇಟೆಯಾಡಿದ್ದು ವಿಶ್ವಕ್ಕೆ ಗೊತ್ತಿದೆ.

12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆಗೆ ನೊಂದಣಿ ಪ್ರಕ್ರಿಯೆ ಆರಂಭ 

ಟ್ರೋಲ್ ಮಾಡಿದವರಿಗೆ ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ಟ ಮ್ಯಾಕ್ಸಿ

ಟಿ-20 ವಿಶ್ವಕಪ್ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ

ಕೊಲ್ಕತ್ತಾ : ಮಮತಾ ಬ್ಯಾನರ್ಜಿ ಕಾರ್ಯಾಲಯದಲ್ಲಿ ಬೆಂಕಿ ಅನಾಹುತ

ಉಚಿತ ಕೊರೊನಾ ಲಸಿಕೆ ನೀಡಿದ್ದೇ ಪೆಟ್ರೋಲ್ ಬೆಲೆ ಹೆಚ್ಚಳಕ್ಕೆ ಕಾರಣ ಎಂದ ಕೇಂದ್ರ ಸಚಿವ..!

ವಿದ್ಯುತ್​ ವ್ಯತ್ಯಯ ಸಮಸ್ಯೆಗೆ ತಡೆಗೆ ಕೇಂದ್ರದಿಂದ ಮಹತ್ವದ ಕ್ರಮ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd