ಶಾಲೆಗಳಲ್ಲೇ ಮಕ್ಕಳಿಗೆ ಕೊರೊನಾ ಲಸಿಕೆ..!
ಕೋವಿಡ್ ಅಲೆ ಕೊಂಚ ತಗ್ಗುತ್ತಿದೆ. ದೇಶದಲ್ಲಿ 15 ಸಾವಿರಕ್ಕಿಂತ ಕಡಿಮೆ ದೈನಂದಿನ ಪ್ರಕರಣಗಳು ದಾಖಲಾಗ್ತಿದ್ದು, 3ನೇ ಅಲೆ ಭೀತಿ ಕಡಿಮೆಯಾಗ್ತಿದೆ. ಈ ನಡುವೆ ಮಕ್ಕಳಿಗೂ ಲಸಿಕೆ ನೀಡುವ ತಯಾರಿ ನಡೆಯುತ್ತಿದೆ. ಇದೀಗ ಶಾಲಾ ಮಕ್ಕಳಿಗೆಶಾಲೆಗಳಲ್ಲಿಯೇ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಹೇಳಿದ್ದಾರೆ.
ರಾಜ್ಯದಲ್ಲಿ 6 -12ನೇ ತರಗತಿ ಆರಂಭವಾಗಿದ್ದು, ಅಕ್ಟೋಬರ್ 21 ರಿಂದ 1 – 5ನೇ ತರಗತಿಗಳಿಗೆ ಭತಿಕ ತರಗತಿಗಳನ್ನ ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ನಾಳೆ ಸಿಎಂ ಬಸವರಾಜಬೊಮ್ಮಯಿ ಅವರ ನೇತೃತ್ವೆದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬೊಮ್ಮಾಯಿ ನೇತೃತ್ವದಲ್ಲಿ ಶಿಕ್ಷಣ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಪ್ರಕಟಿಸಲಾಗುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ ರಾಜ್ಯದಲ್ಲಿ ಎಲ್ಲಾ ಶಾಲೆಗಳು ಆರಂಭಗೊಂಡ ಬಳಿಕ ಮಧ್ಯಾಹ್ನದ ಬಿಸಿಯೂಟ ಯೋಜನೆ ಕೂಡ ಪುನರಾರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.