ಉತ್ತರಾಖಂಡ್ ಪ್ರವಾಹ | ಅಮಿತ್ ಶಾ ವೈಮಾನಿಕ ಸಮೀಕ್ಷೆ
ಉತ್ತರಾಖಂಡ್ ಪ್ರವಾಹದಿಂದ ಹಾನಿಗೀಡಾಗಿರುವ ಸ್ಥಳಗಳಿಗೆ ಇಂದು ಕೇಂದ್ರ ಗೃಹ ಮಂತ್ರಿ ಅಮಿತ ಶಾ ಅವರು ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆ ವೈಮಾನಿಕ ಸಮೀಕ್ಷೆ ನಡೆಸಿದ್ದರು ಹೆಚ್ಚು ಹಾನಿಗೀಡಾಗಿರುವ ಪ್ರದೇಶಗಳನ್ನ ಪರಿಶೀಲಿಸಿದರು. ಪ್ರವಾಹಪೀಡಿತ ಜಿಲ್ಲೆಗಳ ಪರಿಹಾರಕ್ಕಾಗಿ ತಲಾ 10 ಕೋಟಿ ರೂ. ಹಣವನ್ನು ಸಿಎಂ ಪುಷ್ಕರ್ ಸಿಂಗ್ ಬಿಡುಗಡೆ ಮಾಡಿದ್ದಾರೆ.
ಕಳೆದ ಹಲವು ದಿನಗಳಿಂದ ಸುರಿದ ಭಾರಿಮಳೆಗೆ ಉತ್ತರಾಖಂಡ್ ಅಕ್ಷರಶಃ ತತ್ತರಿಸಿಹೋಗಿದೆ.. ಸುಮಾರು 46ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು 11ಕ್ಕೂ ಆಧಿಕ ಜನ ನಾಪತ್ತೆಯಾಗಿದ್ದಾರೆ… ನದಿಗಳು ಉಕ್ಕಿಹರಿಯುತ್ತಿದ್ದು ಮನುಷ್ಯರಷ್ಟೆ ಅಲ್ಲದೆ ಪ್ರಾಣಿ ಪಕ್ಷಿಗಳು ಜೀವ ಭಯದಿಂದ ನಲುಗಿಹೋಗಿವೇ…
ಚಾರ್‌ಧಾಮ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳು ಹರಿದ್ವಾರ, ರಿಷಿಕೇಶ್, ಶ್ರೀನಗರ, ತೆಹ್ರಿ, ಉತ್ತರಕಾಶಿ, ರುದ್ರಪ್ರಯಾಗ್, ಗುಪ್ತಕಾಶಿ, ಉಖಿಮಠ, ಕರ್ಣಪ್ರಯಾಗ್, ಜೋಶಿಮಠ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಈ ಪ್ರದೇಶಗಳಿಗೆ ಬಂದಿದ್ದ ಪ್ರವಾಸಿಗರು ಮಳೆ ನಿಯಂತ್ರಣಕ್ಕೆ ಬರುವವರೆಗೆ ಇದ್ದಲ್ಲೇ ಇರಬೇಕು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮನವಿ ಮಾಡಿಕೊಂಡಿದ್ದಾರೆ.