ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಮತದಾನ ಚುರುಕು
ಹಾನಗಲ್ ಮತ್ತು ಸಿಂದಗಿ ಕ್ಷೇತ್ರದ ಉಪಚುನಾವಣೆ ಮತದಾನ ಬೆಳಿಗ್ಗೆ 7 ರಿಂದ ಶುರುವಾಗಿದೆ. ಮತದಾನ ಚುರುಕುಗೊಂಡಿದ್ದು ನೆಚ್ಚಿನ ಅಭ್ಯರ್ಥಿಗಳಿಗೆ ಮತದಾನ ಮಾಡಲು ಜನ ಮತಗಟ್ಟೆಯ ಕಡೆ ಧಾವಿಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಎಲೆಕ್ಷನ್ ಗೆ ಜನರ ನಾಡಿಮಿಡಿತವನ್ನ ತಿಳಯಲು ಈ ಎಲೆಕ್ಷನ್ ದಿಕ್ಸೂಚಿಯಾಗಲಿದೆ. ಎರಡು ಕ್ಷೇತ್ರಗಳಲ್ಲಿ ಘಟಾನುಗಟಿ ನಾಯಕರು ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಹಾನಗಲ್ ನಲ್ಲಿ 263 ಮತಗಟ್ಟೆಗಳಿವೆ 11 ಗಂಟೆವರೆಗೆ ಶೇ24.31 ರಷ್ಟು ಮತದಾನ ನಡೆದಿದೆ.ಸಿಂದಗಿಯಲ್ಲಿ 297 ಮತಗಟ್ಟೆ ಸ್ಥಾಪಿಸಲಾಗಿದ್ದು 11 ಗಂಟೆಯವರೆಗೆ ಶೇ26.75 ರಷ್ಟು ಮತದಾನ ನಡೆದಿದೆ.
ಸ್ಪರ್ಧೆಯಲ್ಲಿರು ಅಭ್ಯರ್ಥಿಗಳು
ಸಿಂದಗಿ
ಬಿಜೆಪಿ – ರಮೇಶ್ ಭೂಸನೂರ ಕಾಂಗ್ರೇಸ್ – ಅಶೋಕ್ ಮನಗೂಳಿ ಜೆಡಿಎಸ್ – ಅಂಗಡಿ ನಾಜಿಯಾ
ಹಾನಗಲ್
ಬಿಜೆಪಿ – ಶಿವರಾಜ್ ಶರಣಪ್ಪ ಸಜ್ಜನರ ಕಾಂಗ್ರೇಸ್ – ಮಾನೆ ಶ್ರೀನಿವಾಸ್ ಜೆಡಿಎಸ್ – ನಿಯಾಶ್ ಶೇಖ್
ಈ ಭಾರಿಯಾ ಎಲೆಕ್ಷನ್ ನಲ್ಲಿ ಅಭ್ಯರ್ಥಿಗಳ ಪರವಾಗಿ ಘಟಾನುಗಟಿ ನಾಯಕರುಗಳೆ ಪ್ರತಿಷ್ಟೆಯಾಗಿ ತೆಗೆದುಕೊಂಡು ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರವನ್ನ ನಡೆಸಿದರು.
ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ.








