“ಸೂಪರ್” ಆಗಿ ಸೆಮಿ ಪೈನಲ್ ಗೇರಿದ ಕರ್ನಾಟಕ

1 min read

“ಸೂಪರ್” ಆಗಿ ಸೆಮಿ ಪೈನಲ್ ಗೇರಿದ ಕರ್ನಾಟಕ

ಸೈಯದ್​ ಮುಷ್ತಾಕ್ ಅಲಿ ಟಿ 20 ಕ್ರಿಕೇಟ್ ಟೂರ್ನಿಯಲ್ಲಿ ಬೆಂಗಾಲ್ ವಿರುದ್ಧ  ಸೂಪರ್ ಓವರ್ ನಲ್ಲಿ ಗೆಲುವು ಸಾಧಿಸುವ ಮೂಲಕ ಕರ್ನಾಟಕ ತಂಡ ಕ್ವಾರ್ಟರ್​ ಫೈನಲ್ಸ್ಗೆದ್ದು  “ಸೂಪರ್” ಆಗಿ ಸೆಮಿಫೈನಲ್ ಪ್ರವೇಶಿಸಿದೆ.

ಇಂದು ದೆಹಲಿಯ ಅರುಣ್ ಜೆಟ್ಲಿ ಮೈದಾನನದಲ್ಲಿ ನಡೆದ ಕ್ವಾರ್ಟರ್​ ಫೈನಲ್ಸ್ ಪಂದ್ಯದಲ್ಲಿ ಬೆಂಗಾಲ್ ವಿರುದ್ದ್ ಟಾಸ್  ಸೋತರು ಕರ್ನಾಟಕಕ್ಕೆ ಮೊದಲು ಬ್ಯಾಟಿಂಗ್ ಆಡುವ ಅವಕಾಶ ಸಿಕ್ಕಿತ್ತು.   ಕರುಣ್ ನಾಯರ್ 55 ರನ್  (29 ಎಸೆತ) ಮನೀಶ್ ಪಾಂಡೆ 29,  ರೋಹನ್ ಕದಮ್ 30,  ಬ್ಯಾಟಿಂಗ್ ಸಹಾಯದಿಂದ  5 ವಿಕೆಟ್ ಕಳೆದುಕೊಂಡು 160 ರನ್ನ್ ಗಳಿಸಿತು..

ಬೆಂಗಾಲ್ ಪರ ಮುಕೇಶ್ ಕುಮಾರ್ 34/1, ಅಕಾಶ್ ದೀಪ್ 23/1, ಸಯಾನ್ ದೀಪ್ 27/1, ವೃತಿಕ್ ಚಟರ್ಜಿ 23/1 ಮತ್ತು ಶಹ್ಬಾಜ್ ಅಹ್ಮದ್​ 36/1 ವಿಕೆಟ್ ಪಡೆದು ಮಿಂಚಿದರು.

161 ರನ್ ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಬೆಂಗಾಲ್ ತಂಡ ಆರಂಭಿಕ ಆಘಾತ ಎದುರಿಸಿತು.  ವೃತ್ತಿಕ್ ಚಟರ್ಜಿ 51 ರನ್ ರಿತ್ವಿಕ್ ಚೌದರಿ 36 ರನ್ ಗಳಿಸಿ ಪಂದ್ಯವನ್ನ ದಡ ಸೇರಿಸಲು ಪ್ರಯತ್ನ ಪಟ್ಟರು. ಆದರೆ ಕರ್ನಾಟಕದ ಬಿಗಿ ಬೌಲಿಂಗ್ ದಾಳಿಗೆ ಮಂಡಿಯೂರಿದ ಬೆಂಗಾಲ್ ಹುಲಿಗಳು 8 ವಿಕೆಟ್ ಗಳ ನಷ್ಟಕ್ಕೆ 160 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು.

ಕೊನೆಯಲ್ಲಿ ಓವರ್ ನಲ್ಲಿ ಬೆಂಗಾಲ್ ತಂಡಕ್ಕೆ ಗೆಲ್ಲಲು 20 ರನ್ನ ಗಳ ಅವಶ್ಯಕವಿತ್ತು. ವಿದ್ಯಾದರ್ ಪಾಟಿಲ್ ಎಸೆತಗಳನ್ನ ಚೆನ್ನಾಗಿಯೇ ಆಡಿದ ತಂಡ 5 ಎಸೆತಗಳಲ್ಲಿ 19 ರನ್ ಕದ್ದಿತ್ತು. ಕೊನೆಯ ಬಾಲ್ ನಲ್ಲಿ ಸಿಂಗಲ್ ರನ್ನ ಬೇಕಿತ್ತು. ಇದು ಆಟಗಾರರ ಮತ್ತು ನೋಡುಗರ ಎದೆಬಡಿತ ಹೆಚ್ಚಿಸಿತ್ತು. ಮನೀಶ್ ಪಾಂಡೆ ಡೈರೆಕ್ಟ್ ಹಿಟ್ ಮಾಡುವ ಮೂಲಕ ಆಕಾಶ ದೀಪರನ್ನ ರನೌಟ್ ಮಾಡಿ ಪಂದ್ಯ ಟೈ ಮಾಡಿದರು.

ಗೆಲುವಿಗಾಗಿ ಸೂಪರ್ ಓವರ್ ತಲುಪಿದಾಗ ಕರ್ನಾಟಕ ಪರ ಕೆ ಸಿ ಕಾರ್ಯಪ್ಪ ಕೇವಲ 5 ರನ್ನ ನೀಡಿ ಬೆಂಗಾಲ್ ತಂಡವನ್ನ ಕಟ್ಟಿ ಹಾಕಿದರು. ನಾಲ್ಕು ಎಸತಗಳಲ್ಲಿ 6  ರನ್  ನೀಡಿ 2 ವಿಕೆಟ್ ಕಳೆದುಕೊಂಡಿತು.

ಗುರಿ ಬೆನ್ನತ್ತಿದ ಕರ್ನಾಟಕ ಎರಡೆ ಎಸತಗಳಲ್ಲಿ ಗೆಲುವಿನ ನಗೆ ಬೀರಿತು. ಮನೀಶ ಪಾಂಡೆ ಮೊದಲ ಸೆತದಲ್ಲಿ 2 ರನ್ನ ಗಳಿಸಿದರೆ ಎರಡನೆ ಎಸತದಲ್ಲಿ ಸಿಕ್ಸರ್ ಭಾರಿಸಿ ತಂಡವನ್ನ ಸೆಮಿ ಪೈನಲ್ ಗೆ ತಲುಪಿಸಿದರು.

ಈ ಮೂಲಕ ಸತತ 6 ಪಂದ್ಯಗಳನ್ನ ಗೆಲ್ಲುವು ಮೂಲಕ ಸೆಮಿಪೈನಲ್ ಪ್ರವೇಶಿಸಿರುವ  ಕರ್ನಾಟಕ, ಶನಿವಾರ ವಿದರ್ಭ ತಂಡವನ್ನ ಎದುರಿಸಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd