ಇಂಗ್ಲೀಷ್ ಕಾಲುವೆಯಲ್ಲಿ ಮುಳುಗಿದ ದೋಣಿ – 31 ಸಾವು
ಬುಧವಾರ ಉತ್ತರ ಫ್ರಾನ್ಸ್ನ ಕ್ಯಾಲೈಸ್ನ ಕರಾವಳಿಯಲ್ಲಿ ಇಂಗ್ಲಿಷ್ ಕಾಲುವೆಯಲ್ಲಿ ದೋಣಿ ಮುಳುಗಿದ ಪರಿಣಾಮ ಕನಿಷ್ಠ 31 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಫ್ರೆಂಚ್ ಆಂತರಿಕ ಸಚಿವ ಗೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.
ದೋಣಿಯಲ್ಲಿ 34 ಮಂದಿ ಇದ್ದರು ಎಂದು ನಂಬಲಾಗಿದೆ. ಅಧಿಕಾರಿಗಳು 31 ಶವಗಳನ್ನು ಹೊರತೆಗೆಯಲಾಗಿದೆ. ಇಬ್ಬರು ಬದುಕುಲಿದಿದ್ದಾರೆ. ಐದು ಮಹಿಳೆಯರು ಸೇರಿದಂತೆ ಹಲವರು ನೀರುಪಾಲಾಗಿದ್ದಾರೆ. ಒಬ್ಬ ವ್ಯಕ್ತಿ ಇನ್ನೂ ಕಾಣೆಯಾಗಿರುವಂತೆ ಕಂಡುಬಂದಿದೆ. ಪ್ರಯಾಣಿಕರ ರಾಷ್ಟ್ರೀಯತೆ ತಕ್ಷಣವೇ ತಿಳಿದುಬಂದಿಲ್ಲ ಎಂದು ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಇಬ್ಬರೂ ದುರಂತದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ತಮ್ಮ ಸಂತಾಪವನ್ನು ಕಳುಹಿಸಿದ್ದಾರೆ.
ಫ್ರೆಂಚ್-ಬ್ರಿಟಿಷ್ ಜಂಟಿ ಶೋಧ ಕಾರ್ಯಾಚರಣೆಯನ್ನ ನಡೆಸಿದ್ದವು, ಬುಧವಾರ ಕಾರ್ಯಾಚರಣೆಯನ್ನ ಹಿಂತೆಗೆದುಕೊಳ್ಳಲಾಯಿತು.
ಥಿಯೇಟರ್ ಗಳಲ್ಲಿ ರಾಜಿ ಪ್ರಶ್ನೆಯೇ ಇಲ್ಲ..! ಅಮೀರ್ ಗೆ “ರಾಕಿ ಭಾಯ್ ಉತ್ತರ”
ಉಗ್ರಪ್ಪ ವಿರುದ್ಧ ಶಿವಕುಮಾರ್ ಕ್ರಮ ತೆಗೆದುಕೊಂಡಿಲ್ಲವೇಕೆ : ಬಿಜೆಪಿ