ಟ್ರಕ್ ಮತ್ತು ಕಾರು ಡಿಕ್ಕಿ ಒಂದೇ ಕುಟುಂಬದ ನಾಲ್ವರ ಸಾವು
ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ದಂಪತಿಗಳು ಮತ್ತು ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಇಡೀ ಕುಟುಂಬ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಜೀತ್ ನಗರ ಪ್ರದೇಶದಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಅಪಘಾತದಲ್ಲಿ ಸತ್ಯಂ ಉಪಾಧ್ಯಾಯ (41), ಅವರ ಪತ್ನಿ ಮಾಣಿಕಾ (38) ಮತ್ತು ಅವರ ಪುತ್ರಿ ಇಶಾನಿ (10) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೈಹಾರ್ ಉಪ ವಿಭಾಗಾಧಿಕಾರಿ (SDOP) ಹಿಮಾಲಿ ಸೋನಿ ತಿಳಿಸಿದ್ದಾರೆ.
ದಂಪತಿಯ ಎಂಟು ವರ್ಷದ ಮಗ ಸ್ನೇಹ್ ಗುರುವಾರ ಬೆಳಿಗ್ಗೆ ಜಬಲ್ ಪುರ್ ನ ಆಸ್ಪತ್ರೆಯಲ್ಲಿ ನಿಧನರಾದರು. ಡಿಕ್ಕಿಯಾದ ನಂತರ ಕಾರು ಟ್ರಕ್ಗೆ ಸಿಲುಕಿ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿದೆ.
ಸಂತ್ರಸ್ತರು ಶಾಪಿಂಗ್ ಮುಗಿಸಿ ಸತ್ನಾ ನಗರದಿಂದ ಉಪಾಧ್ಯಾಯ ಅವರು ಮೈಹಾರ್ನಲ್ಲಿರುವ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದರು. ಅಪಘಾತದ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.