ಕಿಚ್ಚ ಸುದೀಪ್ ದೇಗುಲ ಕಟ್ಟಿಸಿ ಭಕ್ತಿ ಮೆರೆದ ಅಭಿಮಾನಿಗಳು
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ದೇಗುಲವೊಂದನ್ನ ಕಟ್ಟಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೋಕಿನ ಕುರುಕಂದ ಗ್ರಾಮದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ದೇವಸ್ಥಾನ ನಿರ್ಮಿಸುತ್ತಿದ್ದಾರೆ.
ದೇವಸ್ಥಾನದ ಬಹುತೇಕ ಕಾರ್ಯಗಳು ಮುಗಿದಿದ್ದು ಕೆಲವು ದಿನಗಳ ಕೆಲಸ ಮಾತ್ರ ಉಳಿದಿದೆ. ಈ ಗುಡಿಯ ಜಾಗದಲ್ಲಿ ವಾಲ್ಮೀಕಿ ದೇವಸ್ಥಾನವನ್ನ ಕಟ್ಟುತಿದ್ದರು. ಇದೇ ಸಮಯದಲ್ಲಿ ಕಿಚ್ಚನ ಅಭಿಮಾನಿಗಳು ಸೇರಿಕೊಂಡು ಸುದೀಪ್ ಅವರಿಗೆ ಗುಡಿ ಕಟ್ಟಬೇಕು ಎಂದು ಮಾತನಾಡಿಕೊಂಡಿದ್ದರು.
ನಂತರ ಎಲ್ಲರೂ ಸೇರಿ ದೇವಸ್ಥಾನವನ್ನ ನಿರ್ಮಿಸುವ ಹಂತಕ್ಕೆ ಬಂದಿದ್ದಾರೆ. ತೆಲುಗು ತಮಿಳು ಮಲಯಾಳಂ ನಟನಿಗೆ ಗುಡಿ ಕಟ್ಟಿದ್ದಾರೆ, ಇದೇ ಮೊದಲು ಕನ್ನಡದ ನಟನಿಗೆ ಗುಡಿ ಕಟ್ಟುತ್ತಿರುವುದು ಎನ್ನಬಹುದು. ಇದೇ ಗ್ರಾಮದ ಬಸವ ನಾಯಕ ಎನ್ನುವವರು ಗುಡಿ ನಿರ್ಮಾಣಕ್ಕಾಗಿ 35 ರಿಂದ 45 ಚದರ ಅಡಿಯ ಜಾಗವನ್ನ ನೀಡಿದ್ದಾರೆ.








