ಮೂಡಿಗೆರೆಯ ಮಾಯಾವಿ “ಪೂರ್ಣಚಂದ್ರನಲ್ಲಿ” ಒಂದಾದ ರಾಜೇಶ್ವರಿ ತೇಜಸ್ವಿ…..
ರಾಷ್ಟ್ರಕವಿ ಕುವೆಂಪು ಆವರ ಸೊಸೆ, ಪೂರ್ಣಚಂದ್ರ ತೇಜಸ್ವಿಯವರ ಧರ್ಮಪತ್ನಿ ರಾಜಶ್ವೇರಿ ತೇಜಸ್ವಿ ಅವರು ಇಂದು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ….
ಎಚ್ ಎಸ್ ಆರ್ ಲೇಔಟ್ ನಲ್ಲಿರುವ ಪುತ್ರಿಯ ನಿವಾಸದಲ್ಲಿ ವಾಸವಾಗಿದ್ದರು… ವಯೋ ಸಹಜ ಅನಾರೋಗ್ಯದಿಂದ ಬೆಂಗಳೂರಿನ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಜೇಶ್ವರಿ ತೇಜಸ್ವಿ ಅವರು ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ.
ತೇಜಸ್ವಿಯವರು ಕಾಲವಾದ ನಂತರ ಮೂಡಿಗೆರೆ ಕಾಡಿನ ಅವರ ಮನೆಯಲ್ಲಿಯೇ ರಾಜಶ್ವರಿ ಸಹ ಇದ್ದರು, ನನ್ನ ತೇಜಸ್ವಿ ಎಂಬುದು ಇವರ ಮೊಟ್ಟ ಮೊದಲ ಪುಸ್ತಕ ದರ ಜೊತೆ ಹಲವಾರು ಕೃತಿಗಳನ್ನ ಸಹ ಬರೆದಿದ್ದಾರೆ.
ಇಂದು ಸಂಜೆ ಎಚ್ ಎಸ್ ಆರ್ ಲೇಔನ್ ಪುತ್ರಿಯ ಮನೆಯಲ್ಲಿ ಪಾರ್ಥೀವ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 1937 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು ಮೈಸೂರಿನ ಮಾನಸ ಗಂಗೋತ್ರಿ ಯಲ್ಲಿ ತತ್ವಶಾಸ್ತ್ರದಲ್ಲಿ ಎಂ ಎ ಆನರ್ಸ್ ಪದವಿ ಪಡೆದಿದ್ದಾರೆ…