ಟಿವಿ ನೋಡಬೇಡ ಅಂದಿದ್ದಕ್ಕೆ ಆತ್ಮ ಹತ್ಯೆ ಮಾಡಿಕೊಂಡ ಯುವಕ
ಕೆಲಸಕ್ಕೆ ಹೋಗದೆ ಟಿವಿ ನೊಡುತ್ತಾ ಕಾಲ ಕಳೆಯುತ್ತಿದ್ದೀಯಾ ಎಂದು ತಂದೆ ಬೈದಿದ್ದಕ್ಕೆ ಯುವಕನೊಬ್ಬ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಜೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಸೈಯ್ಯದ್ ಸಾಹೀಲ್ ಮೃತ ಯುವಕ. 23 ವರ್ಷದ ಯುವಕ ತಂದೆ ಬೈದಿದ್ದಕ್ಕೆ ಕೋಪಗೊಂಡು ಸೂಸೈಡ್ ಮಾಡಿಕೊಂಡಿದ್ದಾನೆ. ನಿನ್ನೆ ರಾತ್ರಿ 10 ಗಂಟೆ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಸೈಯದ್ ಸಾಹಿಲ್ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದನು. ಇದರಿಂದ ಬೇಸತ್ತ ತಂದೆ ಒಂದೆರಡು ಮಾತು ಬೈದಿದ್ದರು. ಇದಕ್ಕೆ ಬೇಸತ್ತ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರ್ಮಿ ಶಾಲೆಗಳಲ್ಲಿ 8,700 ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಮತ್ತೆ ಆರ್ಸಿಬಿ ತಂಡದ ಪರವೇ ಆಡುವೆ : ಹರ್ಷಲ್ ಪಟೇಲ್