ಗುವಾಹಟಿ: 12 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಯುವಕರು ಸಾಮೂಹಿಕ ಅತ್ಯಾಚಾರ ಮಾಡಿ ಮರಕ್ಕೆ ನೇಣು ಹಾಕಿ ಕೊಂದಿರುವ ಘಟನೆ ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ಚಕ್ಲಾ ಗ್ರಾಮದಲ್ಲಿ ನಡೆದಿದೆ. ಸದ್ಯ ಪ್ರಕರಣದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರು 10ನೇ ತರಗತಿಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಪರೀಕ್ಷೆ ನಂತರ ಪಾರ್ಟಿಯ ನೆಪದಲ್ಲಿ ಆರೋಪಿಗಳು ಸಂತ್ರಸ್ತೆಯನ್ನು ಮನೆಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಮನೆಯ ಸಮೀಪದ ಕಾಡಿನಲ್ಲಿದ್ದ ಮರಕ್ಕೆ ನೇಣುಹಾಕಿದ್ದಾರೆ. ಇನ್ನು ಎಷ್ಟೋತ್ತಾದರೂ ಬಾಲಕಿ ಮನೆಗೆ ಬಾರದ ಹಿನ್ನೆಲೆ ಆತಂಕಗೊಂಡಿದ್ದ ಸಂತ್ರಸ್ತೆಯ ಪೋಷಕರು, ರಾತ್ರಿವಿಡಿ ಬಾಲಕಿಗಾಗಿ ಶೋಧ ನಡೆಸಿದ್ದು, ಶನಿವಾರ ಮುಂಜಾನೆ ಕಾಡಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಇನ್ನು ಈ ಸಂಬಂಧ ಗೋಹಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಜಿಬಿಎ ದಂಡದ ಬಿಸಿ- ಆ.22ರ ಡೆಡ್‌ಲೈನ್‌ಗೆ ಹೆದರಿ ಜೆಸಿಬಿಗೆ ಮುಗಿಬಿದ್ದ ಜನ, ಗಂಟೆಗೆ ಸಾವಿರ ಇದ್ದ ಬಾಡಿಗೆ ಈಗ ಹತ್ತು ಸಾವಿರಕ್ಕೆ ಜಂಪ್:ಬೆಂಗಳೂರಿನಲ್ಲಿ ಖಾಲಿ ನಿವೇಶನದಾರರ ಗೋಳು ಕೇಳೋರಾರು?
ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಂಚ ಪಾಲಿಕೆಗಳಲ್ಲಿ ಖಾಲಿ ನಿವೇಶನಗಳ ಮಾಲೀಕರಿಗೆ ಜಿಬಿಎ ನೀಡಿದ ಒಂದು ಖಡಕ್ ಎಚ್ಚರಿಕೆ ಇಡೀ ನಗರದಲ್ಲಿ ಭಾರೀ...







