ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು 15,097 ಕೋವಿಡ್ ಪ್ರಕರಣ ಪತ್ತೆ
ದೆಹಲಿ ಗುರುವಾರ 15,097 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ 10,665 ಪಾಸಿಟೀವಿಟಿ ಪ್ರಕರಣಗಳು ದಾಖಲಾಗಿದ್ದವು. ಬುಧವಾರದಿಂದ ಇವತ್ತಿಗೆ ಒಟ್ಟು 41% ಸೋಂಕು ಹೆಚ್ಚಳವಾಗಿದೆ.
ನಗರದಲ್ಲಿ ಪಾಸಿಟಿವಿಟಿ ದರವು 15.34% ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಆರು ಸಾವುಗಳು ದಾಖಲಾಗಿವೆ.
ಹಿಂದಿನ ದಿನ, ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ದೆಹಲಿಯಲ್ಲಿ ಸುಮಾರು 14,000 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸುವ ನಿರೀಕ್ಷೆಯಿದೆ ಎಂದು ಹೇಳಿದರು.








