ಇಟಲಿಯಿಂದ ಅಮೃತಸರಕ್ಕೆ ಬಂದಿಳಿದ 125 ಪ್ರಯಾಣಿಕರಿಗೆ ಸೋಂಕು

1 min read

ಇಟಲಿಯಿಂದ ಅಮೃತಸರಕ್ಕೆ ಬಂದಿಳಿದ  125 ಪ್ರಯಾಣಿಕರಿಗೆ ಸೋಂಕು

ಗುರುವಾರ, ಇಟಲಿಯಿಂದ ಪಂಜಾಬ್‌ನ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾದ ಚಾರ್ಟರ್ಡ್ ಫ್ಲೈಟ್ YU-661 ನಲ್ಲಿ ಬಂದಿಳಿದ  125 ಪ್ರಯಾಣಿಕರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ.

ವಿಮಾನದಲ್ಲಿ ಒಟ್ಟು 179 ಪ್ರಯಾಣಿಕರಿದ್ದರು. ಎಲ್ಲಾ ಸೋಂಕಿತರನ್ನು ಅಮೃತಸರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಕರೋನಾ ಬಾಂಬ್ ಸ್ಫೋಟಗೊಂಡಿರುವುದು ಸಂಚಲನ ಮೂಡಿಸಿದೆ. ಒಂದೇ ವಿಮಾನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿರುವುದು ಇದೇ ಮೊದಲು.

ಅಮೃತಸರ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ಕೆ.ಸೇಠ್ ಮಾತನಾಡಿ, ಇಟಲಿಯನ್ನು ಕೇಂದ್ರ ಸರ್ಕಾರ ಅಪಾಯದಲ್ಲಿರುವ ದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಈ ಕಾರಣದಿಂದಾಗಿ ಅಲ್ಲಿಂದ ವಿಮಾನವು ಅಮೃತಸರ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 11.30 ರ ಸುಮಾರಿಗೆ ಇಳಿದ ನಂತರ ಪ್ರತಿಯೊಬ್ಬ ಪ್ರಯಾಣಿಕರನ್ನು ಪರೀಕ್ಷಿಸಲು ಆದೇಶಿಸಲಾಯಿತು. ವಿಮಾನದಲ್ಲಿ ಒಟ್ಟು 179 ಪ್ರಯಾಣಿಕರಿದ್ದರು. ಈ ಪೈಕಿ 160 ಪ್ರಯಾಣಿಕರ ಆಂಟಿ ರ್ಯಾಪಿಡ್ ಟೆಸ್ಟ್  ನಡೆಸಲಾಗಿದ್ದು, ಇದರಲ್ಲಿ 125 ಪ್ರಯಾಣಿಕರು ಪಾಸಿಟಿವ್ ಎಂದು ಕಂಡುಬಂದಿದ್ದಾರೆ ಎಂದು ಸೇಠ್ ಹೇಳಿದ್ದಾರೆ.

ಪ್ರಯಾಣಿಕರಲ್ಲಿ 19 ಮಕ್ಕಳು ಮತ್ತು ನವಜಾತ ಶಿಶುಗಳು ಇದ್ದರು, ಅವರನ್ನು ಪರೀಕ್ಷಿಸಲಾಗಿಲ್ಲ.

ಇಟಲಿಯಿಂದ ಬಂದಿದ್ದ ವಿಮಾನದ 179 ಪ್ರಯಾಣಿಕರಲ್ಲಿ 17 ಮಕ್ಕಳು ಮತ್ತು 2 ನವಜಾತ ಶಿಶುಗಳೂ ಸೇರಿವೆ ಎಂದು ವಿಕೆ ಸೇಠ್ ಹೇಳಿದ್ದಾರೆ. ಪ್ರಸ್ತುತ ಮಕ್ಕಳ ಪರೀಕ್ಷೆಗೆ ಅವಕಾಶವಿಲ್ಲ. ಅದಕ್ಕಾಗಿಯೇ ಅವರನ್ನು ಯಾವುದೇ ರೀತಿಯಲ್ಲಿ ಪರೀಕ್ಷಿಸಲಾಗಿಲ್ಲ. ಪಾಸಿಟಿವ್ ಕಂಡು ಬಂದ ಎಲ್ಲ ಪ್ರಯಾಣಿಕರನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಆರೋಗ್ಯ ಇಲಾಖೆಯು ವಿಮಾನ ನಿಲ್ದಾಣ ಪ್ರಾಧಿಕಾರದ ಸಹಯೋಗದಲ್ಲಿ ಎಲ್ಲಾ ಪ್ರಯಾಣಿಕರನ್ನು ಐಸೋಲೇಷನ್  ಕಳುಹಿಸಲಾಗಿದೆ. ಆರೋಗ್ಯ ಇಲಾಖೆ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಎಲ್ಲರ ಸ್ವ್ಯಾಬ್ ಪರೀಕ್ಷೆ ನಡೆಸಲಾಗುತ್ತಿದೆ. ಈ ಹೊಸ ರೂಪಾಂತರಗಳಲ್ಲಿ ಯಾವುದಾದರೂ ಒಮಿಕ್ರಾನ್ ಅನ್ನು ಹೊಂದಿದೆಯೇ ಎಂದು ಕಂಡುಹಿಡಿಯಲು ಆರ್ಟಿ-ಪಿಸಿಆರ್ ಪರೀಕ್ಷೆ ಮತ್ತು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಇವುಗಳನ್ನು ಕಳುಹಿಸಲಾಗುತ್ತದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd