ಹೆಚ್ಚಿನ ಜನರನ್ನು ತುಂಬಿದ್ದಕ್ಕಾಗಿ ಓವರ್ ಲೋಡ್ ಆಗಿ ಬಸ್ವೊಂದು ಕೊಳಕ್ಕೆ ಉರುಳಿದ ಪರಿಣಾಮ ಮೂವುರ ಮಕ್ಕಳು ಸೇರಿದಂತೆ 17 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿ, 35 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ (Bangladesh) ಜಲಕತಿ ಸದರ್ ಉಪಜಿಲಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಢಾರಿಯಾದಿಂದ ಹೊರಟಿದ್ದ ಬಸ್ (Government Bus) ಚಾಲಕನ ನಿಯಂತ್ರಣ ತಪ್ಪಿ ಇದ್ದಕ್ಕಿದ್ದಂತೆ ಕೊಳಕ್ಕೆ ಉರುಳಿದೆ. ಹೀಗಾಗಿ 17 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಫಿರೋಜ್ಪುರದ ಭಂಡಾರಿಯಾ ಉಪಜಿಲಾ ಮತ್ತು ಜಲ್ಕತಿಯ ರಾಜಾಪುರ ಪ್ರದೇಶದ ನಿವಾಸಿಗಳು ಹೆಚ್ಚಿನವರಿದ್ದಾರೆ ಎಂದು ಬಾರಿಶಾಲ್ ವಿಭಾಗೀಯ ಆಯುಕ್ತ ಎಂ.ಡಿ ಶೌಕತ್ ಅಲಿ ಹೇಳಿದ್ದಾರೆ.
ಬಾಂಗ್ಲಾದಲ್ಲಿ ಇತ್ತೀಚೆಗೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಜೂನ್ನಲ್ಲಿ ಒಟ್ಟು 559 ರಸ್ತೆ ಅಪಘಾತಗಳು ಸಂಭವಿಸಿದ್ದು ಅಪಘಾತಗಳಲ್ಲಿ 562 ಜನರು ಸಾವನ್ನಪ್ಪಿದ್ದು, 812 ಜನರು ಗಾಯಗೊಂಡಿದ್ದಾರೆ. ದೇಶಾದ್ಯಂತ ನಡೆದ 207 ಮೋಟಾರ್ಸೈಕಲ್ ಅಪಘಾತಗಳಲ್ಲಿ 169 ಜನರು ಸಾವನ್ನಪ್ಪಿದ್ದಾರೆ ಅದರಲ್ಲಿ 78 ಮಹಿಳೆಯರು ಮತ್ತು 114 ಮಕ್ಕಳೂ ಸೇರಿದ್ದಾರೆ ಎನ್ನಲಾಗಿದೆ.