ಅನೇಕ ವರ್ಷಗಳಿಂದ ದೇಶದ ಕಾನೂನಿನ ವಿವಿಧ ಆಯಾಮಗಳನ್ನು ಬಳಸಿ ರೇಪಿಸ್ಟ್ ಗಳನ್ನು ಖುಲಾಸೆಗೊಳಿಸಲು ರೇಪಿಸ್ಟ್ ಲಾಯರ್ ಎಷ್ಟೇ ಪ್ರಯತ್ನ ಪಟ್ಟರು ಕಾನೂನಿನ ಮುಂದೆ ಯಾವುದು ನಡೆಯಲಿಲ್ಲ. ಇಂದು ಬೆಳಗ್ಗೆ 5 :30 ಕ್ಕೆ ನಿರ್ಭಯಾ ಪ್ರಕರಣದ ನಾಲ್ವರು ರಕ್ಕಸರನ್ನು ಗಲ್ಲಿಗೇರಿಸಲಾಯಿತು. ಇತ್ತ ಗಲ್ಲಿಗೇರುತ್ತಿದ್ದಂತೆ 1 ಲಕ್ಷ ರೂ. ಚೆಕ್ ಬರೆದು, ಅದರ ಫೋಟೋವನ್ನು ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜಗ್ಗೇಶ್ ಈ ಮೊದಲು ನಿರ್ಭಯಾ ಅತ್ಯಾಚಾರಿಗಳನ್ನು ನೇಣಿಗೇರಿಸುವ ಹ್ಯಾಂಗ್ಮನ್ಗೆ 1 ಲಕ್ಷ ರೂ ಇನಾಮನ್ನು ಪ್ರಕಟಿಸಿದ್ದರು. ನಿನ್ನೆಯಷ್ಟೇ ಅಪರಾಧಿಗಳ ಎಲ್ಲ ದಾರಿಯನ್ನು ಕೊನೆಗೊಳಿಸಿದ ಕೋರ್ಟ್ ಇಂದು ಬೆಳಿಗ್ಗೆ 5 :30 ಕ್ಕೆ ಅಪರಾಧಿಗಳಿಗೆ ನೇಣುಗಂಬಕ್ಕೆ ಮುಹೂರ್ತ ಫಿಕ್ಸ್ ಮಾಡಿತ್ತು.
ಇತ್ತ ಸುದ್ದಿ ತಿಳಿದ ಕೊಡಲೇ ಜಗ್ಗೇಶ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ‘ಕೊಟ್ಟ ಮಾತಿನಂತೆ ನಿರ್ಭಯಾ ಹಂತಕರ ಹ್ಯಾಂಗ್ಮನ್ ಪವನ್ ಜಲ್ಲಾದ್ಗೆ 1 ಲಕ್ಷ ರೂ. ದೇಣಿಗೆ ನೀಡುತ್ತಿದ್ದೇನೆ. ಮೇಲೆ ಕುಳಿತಿರುವ ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ. ಸತ್ಯದ ಹಾದಿಯಲ್ಲಿ ಯಾರು ನಡೆಯುತ್ತಾರೋ ಅವರಿಗೆ ಯಾವ ಭಯವೂ ಇರುವುದಿಲ್ಲ. ಅಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಶಿಕ್ಷೆ ತಪ್ಪಿದ್ದಲ್ಲ. ಹಲ್ಲು ಕಚ್ಚಿಕೊಂಡು ದುಷ್ಟರ ಅಂತ್ಯದ ದಿನಕ್ಕಾಗಿ ಕಾಯುತ್ತಿದ್ದೆ. ಅವರು ನೇಣಿಗೇರಿದ ಸುದ್ದಿ ಕೇಳಲು ನಿದ್ರೆ ಮಾಡದೆ ಕಾದೆ’ ಎಂದು ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿ, ನುಡಿದಂತೆ ಪವನ್ ಜಲ್ಲಾದ್ಗೆ 1 ಲಕ್ಷ ರೂ ಆತನ ಮಗಳ ಮದುವೆಗೆ ಉಡುಗೊರೆಯಾಗಿ ನೀಡಿದರು.

ಒಬ್ಬ ತಂದೆಯಾಗಿ ಗಂಡನಾಗಿ ತಾತನಾಗಿ ಅವನ ಭಾವನೆಗೆ ಸ್ಪಂದಿಸಿದೆ !
ಆತ್ಯಾಚಾರ ಕೊಲೆ ಆ ಹೆಣ್ಣುಕುಲದ ಯಾತನೆ ನನ್ನ ರಕ್ತಕುದಿಸಿತು !
ದುರುಳರ ಅಂತ್ಯ ಸಮಾಧಾನವಾಯಿತು !
ನನ್ನ ಭಾವನೆ ಅರ್ಥವಾದವರು
ಹರಸಿದರು!
ಅರ್ಥವಾಗದವರು ಅಣಕಿಸಿದರು!
ನನ್ನಭಾವನೆ ದೇವರಿಗೆ ಅರ್ಥವಾದರೆ ಧನ್ಯ!
ಲೋಕ ಮೆಚ್ಚಿಸಲು ಲೋಕನಾಥನಿಗೆ ಸಾಧ್ಯವಿಲ್ಲ ಕಲಿಯುಗದಲ್ಲಿ ನಾನು ನರಮಾನವ !
ಎಂದು ತನ್ನ ಭಾವನೆಯನ್ನು ವ್ಯಕ್ತಪಡಿಸಿದ್ದರು
ಈ ಹಿಂದೆ ಜಲ್ಲಾದ್ ನನ್ನು ಹ್ಯಾಂಗ್ ಮ್ಯಾನ್ ಆಗಿ ನೇಮಿಸಿದಾಗ ಆತ ತನ್ನ ಮಗಳ ಮದುವೆಗೆ ಬಂದ ಭಾಗ್ಯ ಎಂದು ತನ್ನ ಅನಿಸಿಕೆಯನ್ನು ತೋಡಿಕೊಂಡಿದ್ದ. ಇದಕ್ಕೆ ಪ್ರತಿಯಾಗಿ ಜಗ್ಗೇಶ್ ‘ನಿರ್ಭಯಾ ಸಾವಿಗೆ ಕಾರಣರಾದ ರಕ್ಕಸರನ್ನು ನೀವೇ ಗಲ್ಲಿಗೇರಿಸುವುದಾದರೆ ನಿಮ್ಮ ಮಗಳ ಮದುವೆಗೆ ಒಂದು ಲಕ್ಷ ರೂಪಾಯಿ ನೀಡುತ್ತೇನೆ’ ಎಂದು ಜಗ್ಗೇಶ್ ಹೇಳಿಕೆ ನೀಡಿದ್ದರು.








