Covid-19 ದೇಶದಲ್ಲಿ ಚರಿತ್ರೆ ಸೃಷ್ಠಿಸಿದ ಕೊರೊನಾ : ನಿನ್ನೆ 2,61,500 ಕೇಸ್ ಪತ್ತೆ
ನವದೆಹಲಿ : ಭಾರತದಲ್ಲಿ ಕೊರೊನಾ ಎರಡನೇ ಅಲೆ ಚರಿತ್ರೆ ಸೃಷ್ಠಿಸಿದ್ದು, ಕಳೆದ 24 ಗಂಟೆಗಳಲ್ಲಿ 2,61,500 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಹಾಗೆಯೇ 1501 ಮಂದಿ ಸಾವಿಗೀಡಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 15,66,394 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 2,61,500 ಮಂದಿಗೆ ಸೋಂಕು ದೃಢಪಟ್ಟಿದೆ.
ಇದೇ ಅವಧಿಯಲ್ಲಿ 1501 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದು, ಈವರೆಗೂ ದೇಶದಲ್ಲಿ 1,77,150 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ದೇಶದಲ್ಲಿನ್ನೂ 18,01,316 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 1,28,09,643 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ನಿನ್ನೆಯಷ್ಟೇ ದೇಶಾದ್ಯಂತ 2,34,692 ಕೇಸ್ ಗಳು ಪತ್ತೆಯಾಗಿತ್ತು. ಇದು ಈ ವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು.
ಆದರೆ ಇಂದು ಈ ದಾಖಲೆಯನ್ನೂ ಮೀರಿಸುವಂತೆ 2.61ಲಕ್ಷ ಮಂದಿಗೆ ಸೋಂಕು ಒಕ್ಕರಿಸಿದೆ.









