Isarel: ಇಸ್ರೇಲ್ ನಲ್ಲಿ ಭಯೋತ್ಪಾದಕರ ದಾಳಿ | 2 ಸಾವು

1 min read
Isarel Saaksha Tv

ಇಸ್ರೇಲ್ ನಲ್ಲಿ ಭಯೋತ್ಪಾದಕರ ದಾಳಿ | 2 ಸಾವು

ಇಸ್ರೇಲ್: ಇಸ್ರೇಲ್ ನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರದಿದ್ದು, ಭಯೋತ್ಪಾದಕರ ದಾಳಿಗೆ ಇಬ್ಬರು ಸಾವನ್ನಪ್ಪಿದ್ದಾರೆ.

ಇಸ್ರೇಲ್ ನ ಟೆಲ್ ಅವೀವ್‌ನಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಘಟನೆಯಲ್ಲಿ 8 ಜನರು ಗಾಯಗೊಂಡಿದ್ದಾರೆ. ಇನ್ನೂ ಹತ್ಯೆ ಮಾಡಿದ ಭಯೋತ್ಪಾದಕನ ಚಿತ್ರವನ್ನು ಇಸ್ರೇಲ್ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಈ ಟೆಲ್ ಅವೀವ್ ನಗರದ ಅತ್ಯತಂತ ಜನಬೀಡ ಪ್ರದೇಶಗಳ್ಳಿ ಒಂದಾದ ಡಿಜೆನ್‌ಗಾಫ್ ಸ್ಟ್ರೀಟ್‌ ನಲ್ಲಿರುವ ಕೆಫೆಗಳು ಮತ್ತು ಬಾರ್‌ ಗಳಲ್ಲಿ ಉಗ್ರನೋರ್ವ ಗುಂಡಿನ ದಾಳಿ ನಡೆಸಿದ್ದಾನೆ.

ಇನ್ನೂ ದಾಳಿಯಲ್ಲಿ 10 ಜನರು ಗಾಯಗೊಂಡಿದ್ದರು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ನ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೃತಪಟ್ಟವರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಾಳುಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿಕೆ ನೀಡಿದ್ದು, ಭಯೋತ್ಪಾದಕನನ್ನು ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd