ಅದೃಷ್ಟ ಕೈ ಹಿಡಿದರೆ ಸಾಕು ರಾತ್ರೋರಾತ್ರಿ ಶ್ರೀಮಂತರಾದವರನ್ನು ನೋಡಿದ್ದೇವೆ. ಹೀಗೆ 73 ರ ವೃದ್ಧೆಯೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಸುದ್ದಿ ಈಗ ಭಾರೀ ವೈರಲ್ ಆಗುತ್ತಿದೆ.
ಲಾಟರಿ ಖರೀದಿಸಿದ್ದ 73ರ ವೃದ್ಧೆಯೊಬ್ಬರು 31 ಕೋಟಿ ರೂ. ಗೆದ್ದಿದ್ದಾರೆ. ರೋಸ್ ಡಾಯ್ಲ್ ಎಂಬ ವೃದ್ಧೆಯೇ ಹೀಗೆ ಕೋಟ್ಯಾಧಿಪತಿಯಾದವರು. ಇವರು ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನ ನಿವಾಸಿ. ಕಳೆದ 44 ವರ್ಷಗಳಿಂತ ಪತಿ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಈ ವಯಸ್ಸಿನಲ್ಲಿ ಕೂಡ ಅವರು ಎರಡೆರಡು ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು.
ವಿಮಾ ಕಂಪನಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡಿ ನಂತರ ಶಾಲೆಯಲ್ಲಿ ಮಕ್ಕಳಿಗೆ ಅಡುಗೆ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಲಕ್ಕಿ ಡ್ರಾದಲ್ಲಿ ವಿಜೇತರಾಗಿದ್ದು, ಒಂದು ಲಕ್ಷ ಪೌಂಡ್ ಅಂದರೆ ಸುಮಾರು 31 ಕೋಟಿ ರೂ. ಉಡುಗೊರೆಯಾಗಿ ಪಡೆದಿದ್ದಾರೆ. ಅಲ್ಲದೇ, ಕಾರ್ನ್ ವಾಲ್ ನಲ್ಲಿ ಐದು ಬೆಡ್ ರೂಮ್ ಗಳ ಐಷಾರಾಮಿ ಮನೆ ನೀಡಲಾಗಿದೆ. ಕನಸಲ್ಲೂ ಊಹಿಸಿದ ಜೀವನ ಬಂದಿದ್ದಕ್ಕೆ ವೃದ್ಧೆ ಸಂತಸ ವ್ಯಕ್ತಪಡಿಸಿದ್ದಾರೆ.