47.5 ಓವರ್.. 12 ಮೇಡಿನ್.. 10 ವಿಕೆಟ್.. ಇದು ನ್ಯೂಜಿಲೆಂಡ್ ಸ್ಪಿನ್ನರ್ ಏಜಾಜ್ ಪಟೇಲ್ ಸ್ಪಿನ್ ಜಾದೂ.. ajaz spin saaksha tv
ಹೌದು..! ಮುಂಬೈನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ ಕಮಾಲ್ ಮಾಡಿದ್ದಾರೆ. ಎಜಾಜ್ ಸ್ಪೀನ್ ಜಾದೂವನ್ನು ಅರಿಯಲಾಗದೇ ಭಾರತದ ಬ್ಯಾಟರ್ ಗಳು ಕಮಕ್ ಕಿಮಕ್ ಎನ್ನದೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಪಟೇಲ್ ಬೌಲಿಂಗ್ ನಲ್ಲಿ ಔಟ್ ಆಗಬೇಕು ಎಂದು ಕಂಕಣ ಕಟ್ಟಿಕೊಂಡವರಂತೆ ಟೀಂ ಇಂಡಿಯಾದ ಬ್ಯಾಟರ್ ಗಳು ತಮ್ಮ ವಿಕೆಟ್ ಒಪ್ಪಿಸಿದ್ದಾರೆ.
ಎರಡನೇ ಟೆಸ್ಟ್ ನ ಮೊದಲ ದಿನ ಟೀಂ ಇಂಡಿಯಾದ ಬೆನ್ನೆಲುಬನ್ನ ಮುರಿದ್ದ ಏಜಾಜ್ ಪಟೇಲ್, ಎರಡನೇ ದಿನವೂ ಕೂಡ ವಿಕೆಟ್ ಬೇಟೆ ಮುಂದುವರೆಸಿದರು. ಟೆಸ್ಟ್ ನ ಮೊದಲ ದಿನ ಏಜಾಜ್, ಶುಬ್ ಮನ್ ಗಿಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ವಿಕೆಟ್ ಪಡೆದು ಮಿಂಚಿದ್ದರು.
ಎರಡನೇ ದಿನದಾಟ ಆರಂಭವಾಗುತ್ತಿದ್ದಂತೆ ಮತ್ತೆ ದಾಳಿಗೆ ಏಜಾಜ್, ಟೀಂ ಇಂಡಿಯಾದ ಬ್ಯಾಟರ್ ಗಳನ್ನು ಗಿರಗಿಟ್ಟಲೇ ಹೊಡೆಸಿದರು. ದಿನದಾಟದ ಆರಂಭದಲ್ಲೇ ಸಹಾ ವಿಕೆಟ್ ಪಡೆದ ಏಜಾಜ್, ನಂತರ ಅಶ್ವಿನ್ ವಿಕೆಟ್ ಕಿತ್ತರು. ಬಳಿಕ ಒಂದರ ಹಿಂದೆ ಒಂದರಂತೆ ಒಂದೇ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 10 ವಿಕೆಟ್ ಪಡೆದು ದಾಖಲೆ ಸೃಷ್ಟಿಸಿದರು.
ಕಿವೀಸ್ ಪರ 47.5 ಓವರ್ ಎಸೆದ ಏಜಾಜ್ ಪಟೇಲ್, 12 ಮೇಡಿನ್ ಸಹಿತ 119 ರನ್ ನೀಡಿ 10 ವಿಕೆಟ್ ಪಡೆದಿದ್ದಾರೆ.









