ಸೌತೇಕಾಯಿ ರೊಟ್ಟಿ
ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು – 1 ಕಪ್
ಸೌತೇಕಾಯಿ – 1
ಅರಶಿನ ಹುಡಿ – 1 ಚಮಚ
ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ.
ಜೀರಿಗೆ ಪುಡಿ – 1 ಚಮಚ.
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲಿಗೆ ಸೌತೇಕಾಯಿಯನ್ನು ತುರಿದಿಟ್ಟುಕೊಳ್ಳಿ. ನಂತರ ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಜೀರಿಗೆ, ಸಣ್ಣದಾಗಿ ಹೆಚ್ಚಿದ ಕೊತ್ತಂಬರಿಸೊಪ್ಪು, ಅರಶಿನ, ಉಪ್ಪು, ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ಅಗತ್ಯವಿರುವಷ್ಟು ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ತವಾ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ರೊಟ್ಟಿ ತಟ್ಟಿ. ಎರಡು ಬದಿಯನ್ನು ಚೆನ್ನಾಗಿ ಬೇಯಿಸಿ ತೆಗೆದರೆ ಬಿಸಿ ಬಿಸಿ ಯಾದ ಸೌತೇಕಾಯಿ ರೊಟ್ಟಿ ಸವಿಯಲು ಸಿದ್ಧ.
ಇದಕ್ಕೆ ಚಟ್ನಿ, ಮೊಸರು ಅಥವಾ ಬೆಣ್ಣೆ ಸಕ್ಕತ್ ಕಾಂಬಿನೇಷನ್.
ನುಚ್ಚಿನ ಉಂಡೆ
ಬೇಕಾಗುವ ಸಾಮಗ್ರಿಗಳು
ಕಡಲೆ ಬೇಳೆ- 1 ಕಪ್
ತೊಗರಿಬೇಳೆ- 1/2 ಕಪ್
ತೆಂಗಿನಕಾಯಿತುರಿ- 3/4 ಕಪ್
ಈರುಳ್ಳಿ- 1
ತುರಿದ ಹಸಿ ಶುಂಠಿ- ಸ್ವಲ್ಪ
ಹಸಿ ಮೆಣಸು – ಅಗತ್ಯಕ್ಕೆ ತಕ್ಕಂತೆ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಕರಿಬೇವು- ಸ್ವಲ್ಪ
ಜೀರಿಗೆ- ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಕಡಲೆ ಬೇಳೆ, ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು 2 ಗಂಟೆ ಕಾಲ ನೆನೆಯಲು ಬಿಡಿ.ನಂತರ ಬೇಳೆ ಮತ್ತು ಹಸಿ ಮೆಣಸಿನಕಾಯಿಗಳನ್ನು ತರಿ-ತರಿಯಾಗಿ ರುಬ್ಬಿ. ಇದಕ್ಕೆ ತೆಂಗಿನಕಾಯಿತುರಿ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಹಸಿಶುಂಠಿ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ.
ನಂತರ ಎಣ್ಣೆ ಹಚ್ಚಿದ ಪಾತ್ರೆಯಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿದರೆ, ನುಚ್ಚಿನ ಉಂಡೆ ಸಿದ್ಧ.
ಸಬ್ಬಕ್ಕಿ ನಿಪ್ಪಟ್ಟು
ಬೇಕಾಗುವ ಸಾಮಗ್ರಿಗಳು
ಅಕ್ಕಿಹಿಟ್ಟು – 1 ಕಪ್
ಸಬ್ಬಕ್ಕಿ – 1/4 ಕಪ್
ಬೆಣ್ಣೆ – 50 ಗ್ರಾಂ
ಜೀರಿಗೆ – 1 ಚಮಚ
ಹಸಿಮೆಣಸು – 8
ಶುಂಠಿ – ಚಿಕ್ಕ ತುಂಡು
ಕರಿಬೇವು – 4 ಎಸಳು
ಬಿಳಿ ಎಳ್ಳು – 1ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಸಬ್ಬಕ್ಕಿಯನ್ನು ಕನಿಷ್ಟ ಎರಡು ಗಂಟೆಗಳ ಕಾಲ ನೆನೆಸಿಡಿ. ನಂತರ ಹಸಿ ಮೆಣಸು, ಜೀರಿಗೆ, ಶುಂಠಿ ಮತ್ತು ಕರಿಬೇವಿನ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅಕ್ಕಿಹಿಟ್ಟನ್ನು ಬೆಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ, ನೆನೆಸಿದ ಸಬ್ಬಕ್ಕಿ, ಎಳ್ಳು, ಉಪ್ಪು ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ. ಇದರಲ್ಲಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಕೈಯಿಂದ ಒತ್ತಿ ಚಪ್ಪಟೆ ಮಾಡಿ ಇಡಿ.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ನಿಪ್ಪಟ್ಟನ್ನು ಎರಡೂ ಬದಿ ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.
ಗೋಧಿ-ರಾಗಿ ಬರ್ಫಿ
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು – 1ಕಪ್
ರಾಗಿ ಹಿಟ್ಟು – 1ಕಪ್
ಹಾಲು – 1ಕಪ್
ತೆಂಗಿನಕಾಯಿತುರಿ – 1 ಕಪ್
ಎಣ್ಣೆ – 1 ಕಪ್
ಸಕ್ಕರೆ – 1 ಕಪ್
ತುಪ್ಪ – 2 ರಿಂದ 3 ಚಮಚ
ಏಲಕ್ಕಿ ಪುಡಿ – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಗೋಧಿ ಹಿಟ್ಟು, ರಾಗಿ ಹಿಟ್ಟುಗಳನ್ನು ಸ್ವಲ್ಪ ಹುರಿಯಿರಿ. ನಂತರ ಹಾಲು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಕೈಯಾಡಿಸುತ್ತಾ ಇರಿ. ಮಿಶ್ರಣ ತಳ ಬಿಡುವಾಗ ತುಪ್ಪ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ತುಪ್ಪ ಹಚ್ಚಿದ ತಟ್ಟೆಗೆ ಈ ಮಿಶ್ರಣವನ್ನು ವರ್ಗಾಯಿಸಿ. ಸ್ವಲ್ಪ ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ. ಈಗ ಗೋಧಿ-ರಾಗಿ ಬರ್ಫಿ ಸವಿಯಲು ಸಿದ್ಧವಾಗಿದೆ.
ತವಾ ಪಲಾವ್
ಬೇಕಾಗುವ ಸಾಮಗ್ರಿಗಳು
ಬಾಸುಮತಿ ಅಕ್ಕಿ – 2 ಕಪ್
ಬ್ಯಾಡಗಿ ಮೆಣಸು – 5 – 6
ಬೆಳ್ಳುಳ್ಳಿ – 7 – 8ಎಸಳು
ಜೀರಿಗೆ – 1 ಚಮಚ
ಗರಂ ಮಸಾಲಾ -1 ಚಮಚ
ಪಾವಭಾಜಿ ಮಸಾಲಾ -1 ಚಮಚ
ಈರುಳ್ಳಿ -2
ಟೊಮೇಟೊ -2
ಹಸಿಮೆಣಸಿನಕಾಯಿ -3
ಶುಂಠಿ -1 ಚಮಚ
ಬೀನ್ಸ್ – 5
ಕ್ಯಾರೆಟ್ -1
ದೊಣ್ಣೆ ಮೆಣಸು -1
ಆಲೂಗಡ್ಡೆ -1
ಎಣ್ಣೆ – 1 ಚಮಚ
ಬೆಣ್ಣೆ – 1 ಚಮಚ
ಮಾಡುವ ವಿಧಾನ
ಮೊದಲಿಗೆ ಬಾಸುಮತಿ ಅಕ್ಕಿಯಿಂದ ಉದುರಾಗಿ ಅನ್ನ ಮಾಡಿಟ್ಟುಕೊಳ್ಳಿ. ನಂತರ ಬ್ಯಾಡಗಿ ಮೆಣಸನ್ನು ನೀರಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ. ಬೆಳ್ಳುಳ್ಳಿ, ಜೀರಿಗೆ, ಪಾವಭಾಜಿ ಮಸಾಲಾ, ಗರಂ ಮಸಾಲಾ ಒಟ್ಟಿಗೆ ಸೇರಿಸಿ ಮಿಕ್ಸಿ ಗೆ ಹಾಕಿ ನಯವಾದ ಪೇಸ್ಟ್ ಮಾಡಿಟ್ಟುಕೊಳ್ಳಿ.
ನಂತರ ತವಾಗೆ ಒಂದು ಚಮಚ ಎಣ್ಣೆ ಒಂದು ಚಮಚ ಬೆಣ್ಣೆ ಸೇರಿಸಿ ಬಿಸಿ ಮಾಡಿ. ನಂತರ ಜೀರಿಗೆ,ಶುಂಠಿ, ಹಸಿಮೆಣಸು, ಎಲ್ಲ ತರಕಾರಿ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಅದಕ್ಕೆ ಬ್ಯಾಡಗಿ ಮೆಣಸಿನಕಾಯಿ ಪೇಸ್ಟ್, ಉಪ್ಪು, ಮಾಡಿಟ್ಟುಕೊಂಡ ಪಾವಭಾಜಿ ಮಸಾಲಾ ಸೇರಿಸಿ ಬೆರೆಸಿ. ನಂತರ ಅದಕ್ಕೆ ಅನ್ನವನ್ನು ಸೇರಿಸಿ ಕಲಸಿ. ರುಚಿಯಾದ ತವಾ ಪಲಾವ್ ಸವಿಯಲು ಸಿದ್ಧವಾಗಿದೆ.
ಕ್ಯಾಪ್ಸಿಕಂ ಚಿತ್ರಾನ್ನ
ಆರೋಗ್ಯಕರವಾದ ಮೆಂತೆ ಸಿಹಿ ದೋಸೆ
ಉದ್ದಿನ ಲಡ್ಡು
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.