ಉದ್ದಿನ ಲಡ್ಡು
ಬೇಕಾಗುವ ಸಾಮಗ್ರಿಗಳು
ಉದ್ದಿನ ಬೇಳೆ -1 ಕಪ್
ಹುರಿಗಡಲೆ – ಅರ್ಧ ಕಪ್
ಏಲಕ್ಕಿ ಪುಡಿ – ಅರ್ಧ ಚಮಚ
ತುಪ್ಪ – 1/2 ಕಪ್
ಬೆಲ್ಲ – 1/4 ಕಪ್
ಮಿಲ್ಕ್ ಮೇಡ್ – 1/2 ಕಪ್
ಮಾಡುವ ವಿಧಾನ
ಮೊದಲಿಗೆ ಕಡಾಯಿ ಬಿಸಿ ಮಾಡಿ ಸ್ವಲ್ಪ ತುಪ್ಪ ಸೇರಿಸಿ. ಕರಗಿದ ಬಳಿಕ ಅದಕ್ಕೆ ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಹುರಿಗಡಲೆಯನ್ನು ಸಹ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ.
ನಂತರ ಮಿಕ್ಸಿಯಲ್ಲಿ ಹುರಿದ ಉದ್ದಿನ ಬೇಳೆ, ಹುರಿಗಡಲೆ ಏಲಕ್ಕಿ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ಹುಡಿ ಮಾಡಿ. ಬಳಿಕ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ. ಇದಕ್ಕೆ ಮಿಲ್ಕ್ ಮೇಡ್ ಮತ್ತು ಉಳಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ಈ ಮಿಶ್ರಣದಿಂದ ಸಣ್ಣ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ತಯಾರಿಸಿ. ಉದ್ದಿನಬೇಳೆ ಲಡ್ಡು ಸವಿಯಲು ಸಿದ್ಧ.