ಉಡುಪಿ ಶೈಲಿಯ ಮಾವಿನ ಕಾಯಿ ಸಾರು ಅಥವಾ ಅಪ್ಪೆ ಸಾರು
ಬೇಕಾಗುವ ಸಾಮಗ್ರಿಗಳು
ಚಿಕ್ಕದಾಗಿ ಕತ್ತರಿಸಿದ ಮಾವಿನಕಾಯಿ – 1ಕಪ್
ಹಸಿಮೆಣಸು – 3
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 1ಚಮಚ
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಉದ್ದಿನ ಬೇಳೆ – 1/4 ಚಮಚ
ಕೆಂಪುಮೆಣಸು – 1
ಕರಿಬೇವು – 2 ಎಸಳು
ಇಂಗು ಚಿಟಿಕೆಯಷ್ಟು
ಅರಿಶಿನ ಚಿಟಿಕೆಯಷ್ಟು
ಮಾಡುವ ವಿಧಾನ
ಮೊದಲಿಗೆ ಮಾವಿನಕಾಯಿ, ಹಸಿಮೆಣಸಿನಕಾಯಿ, ಉಪ್ಪು ಸೇರಿಸಿ, ಅರ್ಧ ಕಪ್ ನೀರು ಸೇರಿಸಿ ಕುಕ್ಕರ್‌ನಲ್ಲಿ 1 ವಿಸಲ್ ಹೊಡೆಯುವವರೆಗೆ ಬೇಯಿಸಿ. ಅದು ತಣ್ಣಗಾದ ಬಳಿಕ ನಯವಾಗಿ ರುಬ್ಬಿ.
ನಂತರ ಇದನ್ನು ಪಾತ್ರೆಗೆ ವರ್ಗಾಯಿಸಿ. ರುಚಿಗೆ ತಕ್ಕಂತೆ ಉಪ್ಪು (ಬೇಕಿದ್ದರೆ ಸಣ್ಣ ತುಂಡು ಬೆಲ್ಲ) ಮತ್ತು ಸಾಕಷ್ಟು ನೀರು ಸೇರಿಸಿ 2 ನಿಮಿಷ ಕುದಿಸಿ.
ನಂತರ ಪಾನ್ ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಉದ್ದಿನ ಬೇಳೆ, ಜೀರಿಗೆ, ಕರಿಬೇವಿನ ಎಲೆ, ಕೆಂಪು ಮೆಣಸು, ಅರಿಶಿನ, ಇಂಗು ಸೇರಿಸಿ ಒಗ್ಗರಣೆ ಕೊಡಿ.
ಈಗ ಮಾವಿನಕಾಯಿ ರಸಂ ಅಥವಾ ಅಪ್ಪೆ ಸಾರು ಸಿದ್ಧವಾಗಿದೆ.