ಲಖನೌ : ಬಾಲಕಿಯರ ಮೇಲಾಗಿರುವ ದೈಹಿಲ ಶೋಷಣೆ ಬಗ್ಗೆ ತನಿಖೆ ನಡೆಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
ಕಾನ್ಪುರದಲ್ಲಿ ರಾಜ್ಯ ಮಹಿಳಾ ಆಶ್ರಯದ ನಿಲಯದಲ್ಲಿರುವ 57 ಮಹಿಳೆಯರಿಗೆ ಕೋವಿಡ್ 19 ಸೋಂಕು ತಗುಲಿದೆ. ಅವರರಲ್ಲಿ 5 ಜನ ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಅಲ್ಲದೆ ಬಾಲಕಿಯೊಬ್ಬಳಿಗೆ ಏಡ್ಸ್ ಇದೆ ಎಂದು ಹೇಳಾಗಿದೆ. ಇನ್ನೂ ಈ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ ಬಾಲಕಿಯರು ಮಹಿಳಾ ಆಶ್ರಯಕ್ಕೆ ಬರುವ ಮುನ್ನವೇ ಗರ್ಭಿಣಿಯಾಗಿದ್ದರು ಎಂದು ಹೇಳಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ , ಸರ್ಕಾರಿ ಮಹಿಳಾ ಆಶ್ರಯ ನಿಲಯದಿಂದ ಬಂದ ಸುದ್ದಿ ಉತ್ತರ ಪ್ರದೇಶದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿರುವ 57 ಮಹಿಳೆಯರಿಗೆ ಕೊರೊನಾ ಪಾಸಿಟಿವ್ ಇದೆ. ಅದರಲ್ಲಿ ಒಬ್ಬರಿಗೆ ಏಡ್ಸ್ ಇದೆ. ಹಾಗಾಗಿ ಕೂಡಲೇ ಅವರಿಗೆ ಚಿಕಿತ್ಸೆ ನೀಡಬೇಕು ಮತ್ತು ಈ ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.