5G ಭಾರತದ ಪ್ರಥಮ ಆದ್ಯತೆಯಾಗಬೇಕು : ಮುಕೇಶ್ ಅಂಬಾನಿ
ಭಾರತದ ಆಗರ್ಭ ಶ್ರೀಮಂತ , ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಸಂಪೂರ್ಣವಾಗಿ 5ಜಿ ತಂತ್ರಜ್ಞಾನವನ್ನು ಸಾಕಾರಗೊಳಿಸುವುದು ಭಾರತದ ಪ್ರಥಮ ಆದ್ಯತೆಯಾಗಬೇಕು ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಭಾಗವಹಿಸಿದ್ದ ಮುಕೇಶ್ ಅಂಬಾನಿ 5ಜಿ ದೇಶದ ಪ್ರಥಮ ಆದ್ಯತೆಯಾಗಬೇಕು. 2ಜಿ , 4ಜಿ ಇಂದ ಎಲ್ಲರೂ ಶೀಘ್ರದಲ್ಲೇ 5ಜಿಗೆ ಅಪ್ ಡೇಟ್ ಆಗಬೇಕು ಎಂದು
ಡಿಜಿಟಲ್ ಕ್ರಾಂತಿಗೆ ಕರೆ ನೀಡಿದ್ದಾರೆ. ಅಲ್ಲದೇ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಕೆಳಗಿರುವ ಜನರನ್ನು 2ಜಿಗೆ ಸೀಮಿತಗೊಳಿಸುವುದು ಡಿಜಿಟಲ್ ಕ್ರಾಂತಿಯ ಪ್ರಯೋಜನಗಳಿಂದ ಅವರನ್ನು ಹೊರಗಿಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.