ಬೆಂಗಳೂರು: ವ್ಯಕ್ತಿಯೊಬ್ಬ ಬೆತ್ತಲೆ ಫೋಟೋ ಲೀಕ್ ಮಾಡುವುದಾಗಿ ಬೆದರಿಸಿ ಬರೋಬ್ಬರಿ 65 ಲಕ್ಷ ರೂ. ದೋಚಿರುವ ಘಟನೆಯೊಂದು ನಡೆದಿದೆ.
ಈ ಕುರಿತು ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಸ್ನೇಹಿತ ಅಕ್ಷಯ್ ಕುಮಾರ್ ಈ ರೀತಿ ಮಾಡಿರುವ ಆರೋಪಿ. ದೂರು ನೀಡಿರುವ ವ್ಯಕ್ತಿ ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೋಸಕ್ಕೆ ಹೋದ ವ್ಯಕ್ತಿಯೊಂದಿಗೆ ಮೋಸ ಮಾಡಿದ ವ್ಯಕ್ತಿ ಅಕ್ಷಯ್ಕುಮಾರ್ ಕೆಲಸ ಮಾಡುತ್ತಿದ್ದ.
ಆದರೆ, ಕಳೆದ ವರ್ಷದ ಹಿಂದೆ ಟೆಕ್ಕಿ ಬಳಿ ಬಂದು, ನಿನ್ನ ಖಾಸಗಿ ವಿಡಿಯೋ ಮತ್ತು ಫೋಟೋ ವ್ಯಕ್ತಿಯೊಬ್ಬರಿಗೆ ಸಿಕ್ಕಿವೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ. ಇಲ್ಲವಾದರೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾನೆ ಎಂದು ಟೆಕ್ಕಿಗೆ ಹೆದರಿಸಿದ್ದಾನೆ. ಆಗ ಟೆಕ್ಕಿ ಹೆದರಿ 12 ಲಕ್ಷ ರೂ. ಕೊಟ್ಟಿದ್ದಾನೆ. ಆನಂತರ ಪದೇ ಪದೇ ಇದೇ ವಿಷಯವಾಗಿ ಹಣ ಪೀಕಿದ್ದಾನೆ. ಹೀಗೆ ಬರೋಬ್ಬರಿ 65 ಲಕ್ಷ ರೂ. ಹಣ ದೋಚಿದ್ದಾನೆ. ಆನಂತರ ಟೆಕ್ಕಿ ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಆಗ ಸ್ನೇಹಿತ ಅಕ್ಷಯ್ ಕುಮಾರ್ ಹಾಗೂ ಭರತ್ ಎಂಬ ವ್ಯಕ್ತಿಗಳು ಸೇರಿಕೊಂಡು ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸಿ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.