ನಮ್ಮ ವಿಮಾನ ಹೈಜಾಕ್ ಆಗಿಲ್ಲ : ಉಕ್ರೇನ್ ಸ್ಪಷ್ಟನೆ
ಅಫ್ಘಾನಿಸ್ತಾನ :ತಾಲಿಬಾನಿಗಳಿಂದ ಉಕ್ರೇನಿಯನ್ನರನ್ನು ಪಾರು ಮಾಡಲು ಕಾಬೂಲ್ ಗೆ ಬಂದಿದ್ದ ಉಕ್ರೇನ್ ದೇಶದ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಈ ಬಗ್ಗೆ ಉಕ್ರೇನ್ ಸ್ಪಷ್ಟನೆ ನೀಡಿದ್ದು, ಉಕ್ರೇನ್ ದೇಶದ ವಿಮಾನವನ್ನು ಅಪಹರಣ ಮಾಡಲಾಗಿಲ್ಲ ಎಂದಿದೆ.
ಭಾನುವಾರ ಕಾಬೂಲ್ ನಿಂದ ಇರಾನ್ಗೆ ಜನರನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನ್ ವಿಮಾನವನ್ನು ಅಪರಿಚಿತರು ಹೈಜಾಕ್ ಮಾಡಿದ್ದಾರೆ ಎಂದು ಉಕ್ರೇನ್ ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ಹೇಳಿದ್ದರು.
ಆಗಸ್ಟ್ 22ರಂದು ನಮ್ಮ ದೇಶದ ಉಕ್ರೇನಿಯನ್ ವಿಮಾನ ಹೈಜಾಕ್ ಮಾಡಲಾಗಿದೆ. ಯಾರೋ ಅಪರಿಚಿತ ವ್ಯಕ್ತಿಗಳು ನಮ್ಮ ದೇಶದ ಜನರ ಬದಲಿಗೆ ಬೇರೆ ದೇಶದ ಪ್ರಜೆಗಳನ್ನು ತುಂಬಿ ಇರಾನ್ ಅತ್ತ ಹಾರಾಟ ನಡೆಸಿದ್ದಾರೆ.
ಹಾಗಾಗಿ ಮೂರು ಬಾರಿ ನಮ್ಮ ಸ್ಥಳಾಂತರ ಮಿಷನ್ ಸಕ್ಸಸ್ ಆಗಿಲ್ಲ, ಏಕೆಂದರೆ ನಮ್ಮ ದೇಶದ ಪ್ರಜೆಗಳನ್ನು ನಾವು ಕರೆದುಕೊಂಡು ಬರಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಇದು ಸಾಕಷ್ಟು ಆತಂಕ ಮತ್ತು ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಉಕ್ರೇನ್ ರಾಜಧಾನಿ ಕೀವ್ ನ ಅಧಿಕಾರಿಗಳು ಇದು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.







