70 ವರ್ಷಗಳಿಂದ ತ್ರಿವರ್ಣ ಧ್ವಜಕ್ಕೆ ಅನ್ಯಾಯ ಮಾಡಿದ್ದು ಕಾಂಗ್ರೆಸ್
ಬೆಂಗಳೂರು : ಈ ದೇಶದ ತ್ರಿವರ್ಣಧ್ವಜದ ಹಕ್ಕುದಾರರು ನಾವು ಕಾಂಗ್ರೆಸಿಗರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ಆಕ್ರೋಶ ಹೊರಹಾಕಿದೆ.
ಮಾನ್ಯ ಡಿಕೆಶಿ ಅವರೇ, ಯಾವ ನೈತಿಕತೆಯನ್ನಿಟ್ಟುಕೊಂಡು ತ್ರಿವರ್ಣ ಧ್ವಜದ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಬಿಜೆಪಿ ಪ್ರಶ್ನಿಸಿದೆ.
ಬಿಜೆಪಿ ತನ್ನ ಟ್ವೀಟ್ ನಲ್ಲಿ… ಮಾನ್ಯ ಡಿಕೆಶಿ ಅವರೇ, ಯಾವ ನೈತಿಕತೆಯನ್ನಿಟ್ಟುಕೊಂಡು ತ್ರಿವರ್ಣ ಧ್ವಜದ ಬಗ್ಗೆ ಮಾತನಾಡುತ್ತಿದ್ದೀರಿ?
ನಮ್ಮದೇ ನೆಲವಾದ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ರಾರಾಜಿಸಲು ಮೋದಿ ಸರ್ಕಾರ ಬರಬೇಕಾಯಿತು.
70 ವರ್ಷಗಳಿಂದ ತ್ರಿವರ್ಣ ಧ್ವಜಕ್ಕೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಎಂಬುದನ್ನು ಮರೆತಿರಾ ಡಿಕೆಶಿ ಎಂದು ಪ್ರಶ್ನಿಸಿದೆ.
ಶಿವಕುಮಾರ್ ಹೇಳಿದ್ದೇನು..?
ಈ ದೇಶದ ತ್ರಿವರ್ಣಧ್ವಜದ ಹಕ್ಕುದಾರರು ನಾವು ಕಾಂಗ್ರೆಸಿಗರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ತುಮಕೂರಿನಲ್ಲಿ ಜನಜಾಗೃತಿ ಸಮಾವೇಶ ನಡೆಯಿತು. ಈ ಸಭೆಯಲ್ಲಿ ಭಾಗಿಯಾಗಿದ್ದ ಡಿಕೆಶಿವಕುಮಾರ್, ಭಾರತಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಬಹಳಷ್ಟಿದೆ.
ಈ ದೇಶದ ತ್ರಿವರ್ಣಧ್ವಜದ ಹಕ್ಕುದಾರರು ನಾವು ಕಾಂಗ್ರೆಸಿಗರು ಎಂದು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಗೆ ದೊಡ್ಡ ಇತಿಹಾಸವಿದೆ.
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ ಎಂದ ಡಿ.ಕೆ.ಶಿವಕುಮಾರ್. ಅಲ್ಲೇ ಇದ್ದ ಕಾಂಗ್ರೆಸ್ ಬಾವುಟ ಹಿಡಿದು ತೋರಿಸಿ ತ್ರಿವರ್ಣ ಧ್ವಜದ ಹಕ್ಕುದಾರರು ನಾವು ಎಂದಿದ್ದರು.









