ADVERTISEMENT
Wednesday, July 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪಕ್ಷ, ಸಿದ್ಧಾಂತವನ್ನು ಮೀರಿ ಒಳಿತನ್ನು ಸ್ವೀಕರಿಸುವ ಉದಾರತೆಯ ಪ್ರಬುದ್ಧ ರಾಜಕಾರಣಿ ಅಟಲ್ ಜಿ: ಡಾ.ಅರುಣ್ ಸೋಮಣ್ಣ

Mahesh M Dhandu by Mahesh M Dhandu
December 25, 2021
in Newsbeat, State, ರಾಜ್ಯ
Atal ji saaksha tv
Share on FacebookShare on TwitterShare on WhatsappShare on Telegram

ಪಕ್ಷ, ಸಿದ್ಧಾಂತವನ್ನು ಮೀರಿ ಒಳಿತನ್ನು ಸ್ವೀಕರಿಸುವ ಉದಾರತೆಯ ಪ್ರಬುದ್ಧ ರಾಜಕಾರಣಿ ಅಟಲ್ ಜಿ: ಡಾ.ಅರುಣ್ ಸೋಮಣ್ಣ Atal ji saaksha tv

ಬೆಂಗಳೂರು- ಪಕ್ಷ ಹಾಗೂ ಸಿದ್ಧಾಂತವನ್ನು ಮೀರಿ ಒಳಿತನ್ನು ಸ್ವೀಕರಿಸುವ ಉದಾರ ಗುಣ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಲ್ಲಿತ್ತು. ಇದೇ ಕಾರಣದಿಂದ ಅವರು ಅಜಾತಶತ್ರುವಾಗಿದ್ದರು ಎಂದು ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ ಹೇಳಿದ್ದಾರೆ.

Related posts

Cristiano Ronaldo

fifa wolrd cup 2026- ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ… 🐍⚽🔥..!

July 8, 2026
ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

July 8, 2026

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿಯಲ್ಲಿ‌ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು.

ವಾಜಪೇಯಿ ಅವರು ಭಾರತದ ಅಭಿವೃದ್ಧಿಯ ಬಗ್ಗೆ ಹಲವು ಕನಸುಗಳನ್ನು ಕಂಡು ಅದರ ಸಾಕಾರಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಪ್ರೋಖ್ರಾನ್ ಅಣು ಪರೀಕ್ಷೆ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ, ಪ್ರಧಾನಮಂತ್ರಿ ಗ್ರಾಮ‌ ಸಡಕ್ ಯೋಜನೆ, ಸುವರ್ಣ ಚತುಷ್ಪತ ಯೋಜನೆ, ಸರ್ವ ಶಿಕ್ಷಣ ಅಭಿಯಾನ ವಾಜಪೇಯಿ ಅವರ ದೂರದೃಷ್ಟಿಯ ಫಲವಾಗಿವೆ.

ವರ್ಷಗಳ ಕಾಲ ಸ್ವಚ್ಛ ರಾಜಕೀಯ ಬದುಕು ಕಂಡ ಕವಿ ಹೃದಯದ ಶ್ರೇಷ್ಠ ವಾಗ್ಮಿ. ಚಿಂತಕ, ಮಾನವತಾವಾದಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣಗಳು ಏಷ್ಟೋ ಪೀಳಿಗೆಯನು ಬಡಿದೆಬ್ಬಿಸಿದ್ದು ಸುಳ್ಳಲ್ಲ.

Atal ji saaksha tv

ಅಟಲ್ 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿದರು. ‘ವೀರ ಅರ್ಜುನ’ ಹಾಗೂ ‘ಪಾಂಚಜನ್ಯ’ ಎನ್ನುವ 2 ಪತ್ರಿಕೆಗಳಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು.

ಭಾರತದ ಪ್ರಧಾನಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ಸಂಸತ್ತಿನ ವಿವಿಧ ಮುಖ್ಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಹಾಗೂ ವಿರೋಧಪಕ್ಷದ ನಾಯಕರಾಗಿ ಅವರು ಭಾರತದ ಸ್ವಾತಂತ್ರ್ಯಾ ನಂತರ ದೇಶೀಯ ಮತ್ತು ವಿದೇಶಿ ನೀತಿಗಳಿಗೆ ಸ್ಪಷ್ಟ ರೂಪ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ವಾಜಪೇಯಿ ಒಬ್ಬ ವಿಚಾರವಂತ ಲೇಖಕ, ಸಂವೇದನಾಶೀಲ ಕವಿ ಮತ್ತು ಸೋಲರಿಯದ ವಾಗ್ಮಿ, ಇವೆಲ್ಲಕ್ಕಿಂತ ಹೆಚ್ಚಾಗಿ ಓರ್ವ ಉತ್ತಮ ಮನುಷ್ಯ. ಯಾವುದೇ ರಾಜಕೀಯ ಹಿನ್ನೆಲೆಯಾಗಲಿ ಅನುಭವವಾಗಲಿ ಇಲ್ಲದೆ ಕೇವಲ ನಾಲ್ಕು ಜನ ಸದಸ್ಯರನ್ನು ಹೊಂದಿದ್ದ ಪಕ್ಷವೊಂದರಿಂದ ಆರಿಸಿಬಂದ ವಾಜಪೇಯಿ ಮೊದಲ ಬಾರಿಗೇ ನೆಹರು ಗಮನಸೆಳೆಯುವುದರಲ್ಲಿ ಮಾತ್ರವಲ್ಲದೆ, ತನ್ನ ವಿಚಾರಗಳಿಗೆ ಮನ್ನಣೆ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಇ೦ಥ ಮಹಾನ್ ನಾಯಕರ ಆಶಯವನ್ನು ಈಡೇರಿಸುವ ಸಂಕಲ್ಪದಲ್ಲಿ ಇಂದು ಗೋವಿಂದರಾಜನಗರ ಕ್ಷೇತ್ರದಲ್ಲಿ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು‌ ನಡೆದಿವೆ. ಸರ್ಕಾರಿ ಶಾಲೆಗಳ ನವೀಕರಣ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ, ಪೊಲೀಸ್ ಠಾಣೆಯ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ, ಕ್ರೀಡಾಸೌಧಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಗೋವಿಂದರಾಜನಗರವನ್ನು ಮಾದರಿ‌ ಕ್ಷೇತ್ರವನ್ನಾಗಿಸುವಲ್ಲಿ ಶ್ರಮ ವಹಿಸಿದ ವಿ.ಸೋಮಣ್ಣ ಅವರಿಗೆ ತುಂಬುಹೃದಯದ ಧನ್ಯವಾದಗಳು ಎಂದು ಹೇಳಿದರು.

Tags: #Saaksha TVarun somannaatal bihari vajpayeebangalorev somanna
ShareTweetSendShare
Join us on:

Related Posts

Cristiano Ronaldo

fifa wolrd cup 2026- ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ… 🐍⚽🔥..!

by admin
July 8, 2026
0

ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ..! ಆ ಒಂದು ಸೋಲು..! ಆ ಒಂದು ಪಂದ್ಯ..! ತನ್ನ ಪಾಲಿನ ಫಿಫಾ ವಿಶ್ವಕಪ್‍ನ ಕೊನೆಯ ಪಂದ್ಯವಾಗಿರಲಿಲ್ಲ. ಅದು...

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

by Shwetha
July 8, 2026
0

ಮೂರನೇ ಟಿ20 ಕದನದಲ್ಲಿ ಇಂಗ್ಲೆಂಡ್ ತಂಡದ ಆರ್ಭಟಕ್ಕೆ ಭಾರತದ ಬ್ಯಾಟಿಂಗ್ ಪಡೆ ತರಗೆಲೆಯಂತೆ ಉದುರಿಹೋಗಿದೆ. ಇಂಗ್ಲೆಂಡ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವ ಆತುರದಲ್ಲಿ ಟೀಮ್ ಇಂಡಿಯಾ ತನ್ನ...

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

by Shwetha
July 8, 2026
0

ಬೆಂಗಳೂರು : ಮಲ್ಲೇಶ್ವರದ ಪ್ರಸಿದ್ಧ ಸಂಪಿಗೆ ರಸ್ತೆಯಲ್ಲಿ ನಡೆದ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಈಗ ಹೊಸ ತಿರುವು ಪಡೆದುಕೊಂಡಿದೆ. ಬಿಬಿಎಂಪಿ ಅಧಿಕಾರಿಗಳ ಕ್ರಮದ ವಿರುದ್ಧ ಕೋರ್ಟ್...

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

by Shwetha
July 8, 2026
0

ಮೈಸೂರು ದಸರಾ–2026ರ ಮಹೋತ್ಸವಕ್ಕಾಗಿ ಗಜಪಡೆ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಇಂದು ಮತ್ತಿಗೋಡು ಆನೆ ಶಿಬಿರ ಹಾಗೂ ದುಬಾರೆ ಆನೆ ಶಿಬಿರಗಳಲ್ಲಿ ಪಶುವೈದ್ಯರ ತಂಡವು 20ಕ್ಕೂ...

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

by Shwetha
July 8, 2026
0

ಅಯೋಧ್ಯೆ : ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರದ ಕಾಣಿಕೆ ಪೆಟ್ಟಿಗೆಗೆ ಕನ್ನ ಹಾಕಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈಗ ಬೆಚ್ಚಿಬೀಳಿಸುವ ಸತ್ಯಗಳು ಲಭ್ಯವಾಗಿವೆ. ಭಕ್ತರು ಭಕ್ತಿಯಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram