NBK 107 ಶೂಟಿಂಗ್ ಆರಂಭಿಸಿದ ದುನಿಯಾ ವಿಜಯ್
ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ದುನಿಯಾ ವಿಜಯ್
ಎನ್ಬಿಕೆ 107’ ಚಿತ್ರಕ್ಕೆ ನಿರ್ದೇಶಕ ಗೋಪಿಚಂದ್ ಆಕ್ಷನ್ ಕಟ್
ನಟ ಸಿಂಹ ಬಾಲಕೃಷ್ಣ 107ನೇ ಚಿತ್ರ ‘ಎನ್ಬಿಕೆ 107’
ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿರುವ ಚಿತ್ರ
ಸ್ಯಾಂಡಲ್ ವುಡ್ ನ ಸ್ಟಾರ್ ನಟ ದುನಿಯಾ ವಿಜಯ್ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ನಟ ಸಿಂಹ ಬಾಲಕೃಷ್ಣ ಅಭಿನಯದ ಇನ್ನೂ ಹೆಸರಿಡದ ಎಸ್ ಬಿಕೆ 107 ಸಿನಿಮಾ ಮೂಲಕ ವಿಜಯ್ ಟಾಲಿವುಡ್ಗೆ ಪ್ರವೇಶ ಮಾಡುತ್ತಿದ್ದಾರೆ.
ಈ ಬಗ್ಗೆ ಕೆಲಸಮಯದ ಹಿಂದೆಯೇ ಘೋಷಣೆಯಾಗಿತ್ತು. ಇದೀಗ ಸಿನಿಮಾದ ಶೂಟಿಂಗ್ ನಲ್ಲಿ ದುನಿಯಾ ವಿಜಯ್ ಭಾಗವಹಿಸಿದ್ದಾರೆ.
‘ಎನ್ಬಿಕೆ 107’ ಚಿತ್ರಕ್ಕೆ ಗೋಪಿಚಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ನಂದಮೂರಿ ಬಾಲಕೃಷ್ಣ ‘ಅಖಂಡ’ದ ಯಶಸ್ಸಿನಲ್ಲಿದ್ದಾರೆ.
ಅವರ 107ನೇ ಚಿತ್ರ ‘ಎನ್ಬಿಕೆ 107’ ಆಗಿದ್ದು, ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ.
ಮೈತ್ರಿ ಮೂವಿ ಮೇಕರ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಸಿನಿಮಾದಲ್ಲಿ ಶೃತಿ ಹಾಸನ್ ಹಾಗೂ ವರಲಕ್ಷ್ಮಿ ಶರತ್ಕುಮಾರ್ ಕೂಡ ನಟಿಸುತ್ತಿದ್ದಾರೆ.
ಇನ್ನು ಶೂಟಿಂಗ್ ನಲ್ಲಿ ಭಾಗವಹಿಸಿರುವ ದುನಿಯಾ ವಿಜಯ್ ಅವರನ್ನ ನಿರ್ದೇಶಕ ಗೋಪಿಚಂದ್ ಸ್ವಾಗತಿಸಿದ್ದಾರೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಅಂದಹಾಗೆ ಕೆಲವೇ ದಿನಗಳ ಹಿಂದೆ ದುನಿಯಾ ವಿಜಯ್ ತಮ್ಮ ಹೊಸ ಚಿತ್ರ ‘ಭೀಮ’ವನ್ನು ಅನೌನ್ಸ್ ಮಾಡಿದ್ದರು.
Duniya Vijay who started shooting NBK107’s film








