BJP vs Congress | ಹೆಣದ ಮೇಲೆ ಹಣ ಮಾಡುವುದು ಬಿಜೆಪಿ ಸಂಪ್ರದಾಯ!
ಬೆಂಗಳೂರು : ಹೆಣದ ಮೇಲೆ ಹಣ ಎಸೆಯುವುದು ಸಂಪ್ರದಾಯ, ಆದರೆ ಹೆಣದ ಮೇಲೆ ಹಣ ಮಾಡುವುದು ಬಿಜೆಪಿ ಸಂಪ್ರದಾಯ ಎಂದು ರಾಜ್ಯ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಬಿಜೆಪಿ ಕಾರ್ಯಕರ್ತಿಗೆ ಮೇಚ್ಯುರಿಟಿ ಕಡಿಮೆ ಎಂಬ ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿ ಕಾರ್ಯಕರ್ತರಿಗೆ ‘ಮೇಚ್ಯುರಿಟಿ ಕಡಿಮೆ’ – ಕೆ.ಎಸ್.ಈಶ್ವರಪ್ಪ. ನಮ್ಮದು ಕಾರ್ಯಕರ್ತರ ಪಕ್ಷ ಎಂದುಕೊಳ್ಳುವ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ರಕ್ಷಣೆಯೂ ಇಲ್ಲ, ಗೌರವವೂ ಇಲ್ಲ ಎನ್ನುವುದು ಅನಾವರಣಗೊಂಡಿದೆ! ಕಮಿಷನ್ ಲೂಟಿ ನಡೆಸುವ ಬಿಜೆಪಿ ಬಿಟ್ಟು ಬದುಕು ಕಟ್ಟಿಕೊಳ್ಳುವ ಪ್ರಬುದ್ಧತೆ ಬಿಜೆಪಿ ಕಾರ್ಯಕರ್ತರಿಗೆ ಬರಲಿ ಎಂದು ಕುಟುಕಿದೆ.

ಮತ್ತೊಂದು ಟ್ವೀಟ್ ನಲ್ಲಿ ಹೆಣದ ಮೇಲೆ ಹಣ ಎಸೆಯುವುದು ಸಂಪ್ರದಾಯ, ಆದರೆ ಹೆಣದ ಮೇಲೆ ಹಣ ಮಾಡುವುದು ಬಿಜೆಪಿ ಸಂಪ್ರದಾಯ! 40% ಕಮಿಷನ್ ಸಿಗುವುದಿಲ್ಲವೆಂದು ಕಾರ್ಯಕರ್ತರ ಹಣ ಸಂಗ್ರಹಕ್ಕೆ ಅಡ್ಡಗಾಲು ಹಾಕಿದ್ದೇ ಬಿಜೆಪಿ ಇಷ್ಟು ದಿನ ನಾಯಕರ ನಡುವೆ ಇದ್ದ #BJPvsBJP ಕದನ, ಈಗ ಕಾರ್ಯಕರ್ತರು vs ನಾಯಕರ ನಡುವೆ ಶುರುವಾಗಿದೆ! ಬಿಜೆಪಿ ಈಗ ಮುಳುಗಿದ ಹಡಗು ಎಂದು ಕಾಂಗ್ರೆಸ್ ಕಿಡಿಕಾರಿದೆ.








