SORABA | ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ!
ಗೌರಿಕೆರೆ ಮಠದಲ್ಲಿ ವಿಚಿತ್ರ ಕರು ಜನನ
ಹಳೇ ಸೊರಬ ಸಮೀಪದ ಗೌರಿಕೆರೆ ಮಠ
ಗಂಡು ಕರುವಿಗೆ ಜನ್ಮ ನೀಡಿದ ಎಮ್ಮೆ
ಕಣ್ಣು, ಮೂಗಿಲ್ಲದ ಕರು ಜನನ
ಶಿವಮೊಗ್ಗ : ಹಳೇ ಸೊರಬ ಸಮೀಪದ ಗೌರಿಕೆರೆ ಮಠದಲ್ಲಿ ಎಮ್ಮೆಯೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದೆ.

ಮಹೇಂದ್ರ ಸ್ವಾಮಿ ಎಂಬುವವರಿಗೆ ಸೇರಿದ ಎಮ್ಮೆ ಶನಿವಾರ ಬೆಳಿಗ್ಗೆ ಕರುವಿಗೆ ಜನ್ಮ ನೀಡಿದೆ.
ಆದ್ರೆ ಆ ಕರುವಿಗೆ ಕಣ್ಣುಗಳು ಮತ್ತು ಗೊರಸು ಇಲ್ಲ. ಕರು ಬಾಯಿಯ ಮೂಲಕವೇ ಉಸಿರಾಡುತ್ತಿದೆ.
ಕರುವಿನ ದೇಹ ಸಾಮಾನ್ಯ ಸ್ಥಿತಿಯಲ್ಲಿ ಇದ್ದರೂ ಮೇಲೆ ಏಳಲು ಸಾಧ್ಯವಾಗದೇ ಒದ್ದಾಡುತ್ತಿದೆ.
ಈ ಕರು ಹೆಚ್ಚು ಕಾಲ ಬದುಕುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.








