Gauri – Ganesha festival | ಖಾಸಗಿ ಬಸ್ ಟಿಕೆಟ್ ದರ 3 ಪಟ್ಟು ಹೆಚ್ಚಳ!
ಗೌರಿ – ಗಣೇಶ ಹಬ್ಬಕ್ಕೆ ಜನರಿಗೆ ಶಾಕ್
ಬೆಂಗಳೂರಿನಿಂದ ಹೋಗುವವರಿಗೆ ಶಾಕ್
ವಿಶೇಷ ಬಸ್ ಗಳ ಸಂಖ್ಯೆ ಕಡಿಮೆ ಹಿನ್ನೆಲೆ
ಆಗಸ್ಟ್ 26 ರಿಂದಲೇ ಟಿಕೆಟ್ ದರ ಹೆಚ್ಚಳ
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್ ಎದುರಾಗಿದೆ.
ಬೆಂಗಳೂರಿನಿಂದ ಹೋಗುವ ಖಾಸಗಿ ಬಸ್ ಗಳ ಟಿಕೆಟ್ ದರ ಮೂರು ಪಟ್ಟು ಹೆಚ್ಚಾಗಿದೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಜನರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ.
ಇದನ್ನೆ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಬಸ್ ಗಳು ಟಿಕೆಟ್ ದರವನ್ನು ಹೆಚ್ಚಳ ಮಾಡಿವೆ. ಹುಬ್ಬಳ್ಳಿ ಮಾರ್ಗದ ಬಸ್ ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.

ಬೆಂಗಳೂರು – ಹುಬ್ಬಳ್ಳಿ ಟಿಕೆಟ್ ದರ 1300 ರಿಂದ 2000 ರೂಪಾಯಿ, ಬೆಂಗಳೂರು – ಶಿವಮೊಗ್ಗ ಟಿಕೆಟ್ ದರ 900 ರೂಪಾಯಿಗಳಿಂದ 1400 ರುಪಾಯಿ. ಬೆಂಗಳೂರು – ಮಂಗಳೂರು ಟಿಕೆಟ್ ದರ 1100 ರೂ ಗಳಿಂದ 1600 ರೂಪಾಯಿ ಆಗಿದೆ. ಹೀಗಾಗಿ ಊರಿಗೆ ಹೊರಟ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಬಿಸಿ ತಟ್ಟಿದೆ.








